Advertisement
ಈ ಬಗ್ಗೆ ಡಿವೈಎಸ್‌ಪಿ ಗಣೇಶ ಕೆ.ಎಲ್. ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ರವಿವಾರ ಮಧ್ಯಾಹ್ನ ಕುಣಗಿಣಿ ಚೆಕ್ ಪೋಸ್ಟ್ ಬಳಿಯ ಅರಣ್ಯ ಕಾವಲುದಾರರು ರಸ್ತೆ ಅಂಚಿನಲ್ಲಿ ಹೋಗುತ್ತಿರುವಾಗ ಎರಡು ಕೈಚೀಲಗಳು, ಅಲ್ಲೇ ಪಕ್ಕದಲ್ಲಿ ಒಂದು ಗನ್ ಮತ್ತು ಅದರ ಪೌಚ್ ಕಂಡು ಬಂದಿತ್ತು. ಕೂಡಲೇ ಈ ಬಗ್ಗೆ ಅರಣ್ಯಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸ್ಥಳ ಪರೀಶಿಲನೆ ನಡೆಸಿದಾಗ ಒಂದು ಚೀಲದಲ್ಲಿ ಬಳಸಿದ ಟೀ ಶರ್ಟ್,ಬೂಟ್, ಇನ್ನೊಂದು ಚೀಲದಲ್ಲಿ ಕೆಲವಷ್ಟು ಹಣ ಇದ್ದಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಚೀಲದ ಪಕ್ಕದ ಸ್ವಲ್ಪ ದೂರದಲ್ಲಿ ಕಾಡಿನೊಳಗೆ ಗನ್ ಬಿದ್ದಿದ್ದು, ಅದರ ಕವರ್ ಮರ ಟೊಂಗೆಯ ಮೇಲೆ ಸಿಕ್ಕಿಕೊಂಡಿದ್ದು, ನೇತಾಡುತ್ತಿದದ್ದು ಕಂಡುಬಂದಿದೆ.
Related Articles
Advertisement