Advertisement

ಸೌದಿ ದೊರೆಗೆ ಗನ್‌ ಗಿಫ್ಟ್

12:30 AM Feb 22, 2019 | Team Udayavani |

ಲಂಡನ್‌: ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಸೌದಿ ಅರೇಬಿಯಾದ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ಗೆ ಚಿನ್ನದ ಕಟ್ಟಿನಿಂದ ನಿರ್ಮಿತವಾಗಿರುವ ಮಷಿನ್‌ ಗನ್‌ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಭಾರತದ ನೆರೆಯ ರಾಷ್ಟ್ರದ ಸಂಸದರು ಈ ದುಬಾರಿ ಉಡುಗೊರೆ ನೀಡಿದ್ದಾರೆ. ಹೆಕ್ಲರ್‌ ಆ್ಯಂಡ್‌ ಕೋಶ್‌ ಎಂಪಿ5 (The Heckler & Koch MP5) ಎಂಬ ಅದ್ಧೂರಿ ಗನ್‌ ಅನ್ನು ಜರ್ಮನಿಯ ಎಂಜಿನಿಯರ್‌ಗಳು ವಿನ್ಯಾಸಗೊಳಿಸಿದ್ದಾರೆ. ಜತೆಗೆ ಅವರದ್ದೇ ಅದ್ಧೂರಿಯಾಗಿ ಕಾಣುವ ತೈಲ ಚಿತ್ರವನ್ನೂ ನೀಡಲಾಗಿದೆ.  ಅವರು ರಿಯಾದ್‌ನಿಂದ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಂತೆ ಪಾಕಿಸ್ಥಾನ ಸೇನೆಯ ವಿಶೇಷ ವಿಮಾನಗಳು ಅವರಿಗೆ ಆಗಸದಿಂದಲೇ ವಿಶೇಷ ಗೌರವ ರಕ್ಷೆ ನೀಡಿದ್ದವು. ಸಂಸತ್‌ ಭವನದ ಮುಂಭಾಗದಲ್ಲಿ 120 ಅಡಿ ಎತ್ತರ, 45 ಅಡಿ ಅಗಲದ ದೊರೆಯ ಕಟೌಟ್‌ಗಳನ್ನು ಹಾಕಲಾಗಿತ್ತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next