Advertisement

ಗುಮ್ನಾಮಿ ಬಾಬಾ ನೇತಾಜಿ ಅಲ್ಲ

11:18 PM Dec 20, 2019 | Team Udayavani |

ಲಕ್ನೋ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಅವರು ಗುಮ್ನಾಮಿ ಬಾಬಾ ಹೆಸರಿನಲ್ಲಿ ಜೀವಿಸುತ್ತಿದ್ದರು ಎಂಬ ಗೊಂದಲವನ್ನು ನ್ಯಾಯಮೂರ್ತಿ ವಿಷ್ಣು ಸಹಾಯ್‌ ಆಯೋಗ ಇತ್ಯರ್ಥಪಡಿಸಿದೆ. ಗುಮ್ನಾಮಿ ಬಾಬಾ ಅವರು ಬೋಸ್‌ ಅಲ್ಲ, ಅವರ ಅನುಯಾಯಿ ಅಷ್ಟೆ ಎಂದು ದೃಢಪಡಿಸಿದೆ.

Advertisement

1985ರ ಸೆ.16ರಂದು ಬಾಬಾ ವಿಧಿವಶರಾಗಿದ್ದರು. ಸೆ.18ರಂದು ಅಯೋಧ್ಯೆ ಯಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಇವರೇ ನೇತಾಜಿ ಎಂಬುದು ಸಹಸ್ರಾರು ಜನರ ನಂಬಿಕೆಯಾಗಿತ್ತು. ಇದನ್ನು ಬಗೆಹರಿಸಲು ಆಯೋಗ ರಚಿಸಲಾಗಿತ್ತು. ಈ ಆಯೋಗವು, ಉತ್ತರ ಪ್ರದೇಶ ಸರಕಾರಕ್ಕೆ ವರದಿ ನೀಡಿದ್ದು, ಇಬ್ಬರ ಧ್ವನಿಗಳು, ಮತ್ತಿತರ ವಿಷಯಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಆದರೆ, ಬಾಬಾ ಅವರು ನೇತಾಜಿ ಅಲ್ಲ ಎಂದಿದೆ. ಬಾಬಾರನ್ನು ನೇತಾಜಿ ಎಂಬುದಾಗಿ ಗುರುತಿಸುತ್ತಿದ್ದಂತೆ ಅವರು ತಮ್ಮ ನಿವಾಸವನ್ನು ಬದಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next