Advertisement

ಗುಲ್ದು ಅಲ್ಲ ಗುಲ್ಟಾ

08:15 AM Feb 09, 2018 | |

“ಇದೊಂದು ಸೈಬರ್‌ ಕ್ರೈಮ್‌ ಕುರಿತಾದ ಚಿತ್ರ …’
ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಹೇಳಿದರು ನವೀನ್‌ ಶಂಕರ್‌. ಅದಕ್ಕೂ ಮುನ್ನ ವೇದಿಕೆಯಲ್ಲಿದ್ದವರೆಲ್ಲಾ ಉದ್ದುದ್ದ ಮಾತನಾಡಿದ್ದರು, ಅಲ್ಲಿದ್ದವರ ಪ್ರತಿಭೆಯನ್ನು ಹೊಗಳಿದ್ದರು ಮತ್ತು ಚಿತ್ರ ಎಷ್ಟು ಚೆನ್ನಾಗಿ ಬಂದಿದೆ ಎಂದು ಕೊಂಡಾಡಿದ್ದರು. ಆದರೆ, ಯಾರೊಬ್ಬರೂ ಚಿತ್ರದ ಕಥೆ ಏನು, ಚಿತ್ರದ ವಿಷಯ ಏನು ಎಂದು ಒಬ್ಬೇಒಬ್ಬರು ಸಹ ಮಾತನಾಡಲಿಲ್ಲ. ಎಲ್ಲರೂ ಈ ಮಟ್ಟದ ಬಿಲ್ಡಪ್‌ ಕೊಡುತ್ತಿರುವ ಈ ಚಿತ್ರದ ಕಥೆಯಾದರೂ ಏನಿರಬಹುದು ಎಂದು ಪತ್ರಕರ್ತರು ತಲೆ ಕೆರೆದುಕೊಳ್ಳುತ್ತಿದ್ದಾಗ, ಚಿತ್ರದ ನಾಯಕ ಬರೆಯುವುದಕ್ಕೆ ಒಂದಿಷ್ಟು ವಿಷಯ ಕೊಟ್ಟರು.

Advertisement

“ಇದೊಂದು ಇಂಟರ್‌ನೆಟ್‌ ಸಂಬಂಧಿತ ಕಥೆ. ಇವತ್ತು ಆನ್‌ಲೈನ್‌ ಕ್ರೈಮ್‌ ಹೆಚ್ಚಾಗುತ್ತಿದೆ. ಆನ್‌ಲೈನ್‌ ಕ್ರೈಮ್‌ ಅಂದರೆ ಬರೀ ಹ್ಯಾಕಿಂಗ್‌ ಮಾತ್ರ ಅಲ್ಲ, ಇನ್ನೂ ಸಾಕಷ್ಟು ಗಂಭೀರವಾದ ಕ್ರೈಮ್‌ಗಳಿವೆ. ಅದೇ “ಗುಲ್ಟಾ – ಆನ್‌ಲೈನ್‌’. ಇದೊಂದು ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾನು ಮಹತ್ವಾಕಾಂಕ್ಷೆಯ ಹುಡುಗನ ಕಥೆ’ ಎಂದು ಹೇಳಿದರು ನವೀನ್‌ ಶಂಕರ್‌.

ಅಂದು “ಗುಲ್ಟಾ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನವೀನ್‌ ಶಂಕರ್‌ ಜೊತೆಗೆ ಸೋನು ಗೌಡ, ಅವಿನಾಶ್‌, ರಂಗಾಯಣ ರಘು, ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ, ನಿರ್ಮಾಪಕರಾದ ಪ್ರಶಾಂತ್‌, ದೇವರಾಜ್‌ ಮುಂತಾದವರು ಇದ್ದರು. ಇಷ್ಟಕ್ಕೂ ಈ “ಗುಲ್ಟಾ’ ಎಂದರೇನು ಎಂಬ ಪ್ರಶ್ನೆಗೆ ನಿರ್ದೇಶಕರಿಂದ ಸಮಂಜಸವಾದ ಉತ್ತರ ಬರಲಿಲ್ಲ. “ಇದಕ್ಕೆ ಅರ್ಥ ಇಲ್ಲ. ಹೇಳ್ಳೋದು ಕಷ್ಟ. ಇದೊಂದು ಹೊಸ ಕ್ರೈಮ್‌ ಕುರಿತ ಚಿತ್ರ. ಅದರ ಸುತ್ತ ಡ್ರಾಮಾ ಹೆಣೆದು ಚಿತ್ರ ಮಾಡಿದ್ದೇವೆ’ ಎಂದರು.

ಈ ಚಿತ್ರಕ್ಕೆ ವಿಶೇಷ ತ್ಯಾಗವೇನೂ ಮಾಡಲಿಲ್ಲ, ಸ್ವಾರ್ಥಕ್ಕಾಗಿ ಮಾಡಿದೆ ಎಂದರು ಅವಿನಾಶ್‌. “ಒಂದೊಳ್ಳೆಯ ಚಿತ್ರದ ಭಾಗವಾಗಿರೋಕೆ ನಮಗೂ ಆಸೆ ಇರುತ್ತದೆ. ಅದೇ ಸ್ವಾರ್ಥದಿಂದ ಈ ಚಿತ್ರ ಒಪ್ಪಿಕೊಂಡೆ. ಆರಂಭದಲ್ಲೇ ಈ ಹುಡುಗರಿಗೆ ಪ್ರತಿಭೆ ಇದೆ ಅಂತ ಗೊತ್ತಾಯ್ತು. ಇವರೆಲ್ಲಾ ಹೊಸಬರಿರಬಹುದು. ಆದರೆ, ಸಿನಿಮಾ ಗ್ರಾಮರ್‌ ಚೆನ್ನಾಗಿ ಗೊತ್ತಿದೆ. ಅವರಿಗೆ ಏನು ಬೇಕು ಅಂತ ಗೊತ್ತಿದೆ’ ಎಂದು ಹೊಗಳಿದರು.

ರಂಗಾಯಣ ರಘು ಬಳಿ ಈ ತಂಡದವರು ಬಂದಾಗ, ಇದ್ಯಾವುದೋ ಇರಾನಿ, ಕೊರಿಯನ್‌ ಸಿನಿಮಾ ಇರಬಹುದು ಎಂದುಕೊಂಡರಂತೆ. “ಎಷ್ಟೋ ಚಿತ್ರಗಳ ಬಗ್ಗೆ ಗೊತ್ತಾಗುವುದಿಲ್ಲ. ಆರಂಭದಲ್ಲಿ ಕಥೆ ಚೆನ್ನಾಗಿದೆ ಅನಿಸುತ್ತೆ. ಆಮೇಲೆ ಅದ್ಯಾವುದೋ ಇರಾನಿ, ಕೊರಿಯನ್‌ ಸಿನಿಮಾದ್ದು ಎಂದು ಗೊತ್ತಾದಾಗ, ಭ್ರಮನಿರಸನವಾಗುತ್ತದೆ. ಇದು ನಮ್ಮ ನೇಟಿವಿಟಿಯ ಸಿನಿಮಾ. ಒಂದೊಳ್ಳೆಯ ವಿಚಾರ ತೆಗೆದುಕೊಂಡು ಸಿನಿಮಾ ಮಾಡಿದ್ದಾರೆ’ ಎಂದು ಹೇಳಿದರು.

Advertisement

“ಗುಲ್ಟಾ’ ಚಿತ್ರಕ್ಕೆ ಅಮಿತ್‌ ಆನಂದ್‌ ಸಂಗೀತ ಸಂಯೋಜಿಸಿದ್ದು, ಅವರ ಅನುಪಸ್ಥಿತಿಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next