Advertisement

Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ

11:38 PM Sep 27, 2024 | Team Udayavani |

ಮಂಗಳೂರು: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್‌ ಯುನಿವರ್ಸಿಟಿ ಅಲ್‌ ಜುರ್ಫ್‌ ಕ್ಯಾಂಪಸ್‌ನಲ್ಲಿ 700 ಹೊಸ ವೈದ್ಯಕೀಯ ವೃತ್ತಿಪರರು ವೈಟ್‌ ಕೋಟ್‌ ಸಮಾರಂಭದಲ್ಲಿ ಪಾಲ್ಗೊಂಡು ಪ್ರತಿಜ್ಞಾವಿಧಿಯಲ್ಲಿ ಭಾಗವಹಿಸಿದರು.

Advertisement

ಹೊಸ ವೃತ್ತಿಪರರು ರೋಗಿಗಳ ಆರೋಗ್ಯ ಸೇವೆ ಬಗ್ಗೆ ತಮ್ಮ ಬದ್ಧತೆ ಕುರಿತು ಶಪಥ ಸ್ವೀಕರಿಸಿದರು.

102 ವಿವಿಧ ರಾಷ್ಟ್ರೀಯತೆಯ 5,000 ವಿದ್ಯಾರ್ಥಿಗಳು ಗಲ್ಫ್ ಮೆಡಿಕಲ್‌ ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ 700 ಮಂದಿ ಸೇರ್ಪಡೆಯಾದಂತಾಗಿದೆ. ಒಟ್ಟು ಆರು ಕಾಲೇಜುಗಳಲ್ಲಿ ವಿವಿಧ ಆರೋಗ್ಯ ಸೇವಾ ಕೋರ್ಸ್‌ಗಳನ್ನು ಅವರು ಕಲಿಯಲಿದ್ದಾರೆ.

ತಮ್ಮ ಎಂದಿನ ಶೈಕ್ಷಣಿಕ ಪಠ್ಯಕ್ರಮದ ಜತೆಯಲ್ಲೇ ಅವರಿಗೆ ಕೃತಕ ಬುದ್ಧಿಮತ್ತೆ ಹಾಗೂ ಆರೋಗ್ಯಸೇವಾ ವಲಯದಲ್ಲಿ ಅದರ ಪರಿಣಾಮದ ಬಗ್ಗೆ ಅಧ್ಯಯನ ನಡೆಸುವರು.

ಸಮಾರಂಭದ ಮುಖ್ಯ ಅತಿಥಿಯಾಗಿ ತುಂಬೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ| ತುಂಬೆ ಮೊಯ್ದಿನ್‌ ಪಾಲ್ಗೊಂಡು ಹೊಸ ಆರೋಗ್ಯ ವೃತ್ತಿಪರ ವಿದ್ಯಾರ್ಥಿಗಳಿಗೆ ನನ್ನ ಹೃತೂ³ರ್ವಕ ಅಭಿನಂದನೆಗಳು. ಅವರು ಮುಂಬರುವ ಭವಿಷ್ಯತ್ತಿನ ಆರೋಗ್ಯ ಸೇವಾ ನಾಯಕರಾಗಲು ಹೊರಟಿದ್ದಾರೆ. ಅವರ ಆಶೋತ್ತರಗಳನ್ನು ಈಡೇರಿಸಲು ಗಲ್ಫ್ ಮೆಡಿಕಲ್‌ ಯುನಿವರ್ಸಿಟಿ ಸದಾ ಬದ್ಧವಾಗಿದೆ ಎಂದು ಹೇಳಿದರು.

Advertisement

ವೈದ್ಯಕೀಯ ಸೇವೆ ಸುಧಾರಣೆ
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಹೊಸಾಮ್‌ ಹಮಿª ಮಾತನಾಡಿ, ಹಿಂದೆ ರೋಗಿಯನ್ನು ಒಬ್ಬರೇ ನೋಡಿಕೊಳ್ಳುವಲ್ಲಿಂದ ತೊಡಗಿ ಈಗ ವೈದ್ಯಕೀಯ ವೃತ್ತಿಯು ಸಾಕಷ್ಟು ಸುಧಾರಣೆಗೊಳಪಟ್ಟಿದೆ. ಈಗ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ವೃತ್ತಿಪರ ವೈದ್ಯಕೀಯ ತಂಡದ ಭಾಗವೇ ಆಗಿದ್ದುಕೊಂಡು ತಜ್ಞತೆಯನ್ನು ಪಡೆದುಕೊಳ್ಳುತ್ತಾರೆ ಎಂದರು.

ಬ್ಯಾಚಲರ್‌ ಆಫ್‌ ಮೆಡಿಸಿನ್‌ ಆಂಡ್‌ ಬ್ಯಾಚಲರ್‌ ಆಫ್‌ ಸರ್ಜರಿ, ಬ್ಯಾಚುಲರ್‌ ಆಫ್‌ ಬಯೋಮೆಡಿಕಲ್‌ ಸೈನ್ಸಸ್‌, ಅಸೋಸಿಯೇಟ್‌ ಡಿಗ್ರಿ ಇನ್‌ ಪ್ರಿಕ್ಲಿನಿಕಲ್‌ ಸೈನ್ಸಸ್‌, ಡಾಕ್ಟರ್‌ ಆಫ್‌ ಮೆಡಿಸಿನ್‌, ಡಾಕ್ಟರ್‌ ಆಫ್‌ ಫಾರ್ಮಸಿ, ಬ್ಯಾಚಲರ್‌ ಆಫ್‌ ಫಿಸಿಯೋಥೆರಪಿ, ಬ್ಯಾಚುಲರ್‌ ಆಫ್‌ ಸೈನ್ಸ್‌-ಮೆಡಿಕಲ್‌ ಲ್ಯಾಬೊರೇಟರಿ ಸೈನ್ಸಸ್‌, ಬ್ಯಾಚಲರ್‌ ಆಫ್‌ ಸೈನ್ಸ್‌- ಮೆಡಿಕಲ್‌ ಇಮೇಜಿಂಗ್‌ ಸೈನ್ಸಸ್‌, ಬಿಎಸ್ಸಿ-ಅನಸ್ತೇಸಿಯಾ ಟೆಕ್ನಾಲಜಿ, ನರ್ಸಿಂಗ್‌, ಹೆಲ್ತ್‌ ಕೇರ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಇಕನಾಮಿಕ್ಸ್‌ ಕೋರ್ಸ್‌ಗಳಿಗೆ ವೈಟ್‌ ಕೋಟ್‌ ವಿತರಿಸಲಾಯಿತು.

ಗಲ್ಫ್ ಮೆಡಿಕಲ್‌ ಯುನಿವರ್ಸಿಟಿಯು ಯುರೋಪ್‌, ಯುಎಸ್‌, ಜಪಾನ್‌, ದೂರ ಪೂರ್ವದ ದೇಶಗಳ 86 ಪ್ರಮುಖ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ತರಬೇತಿ ನೀಡ ಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next