ಗುಳೇದಗುಡ್ಡ: ಮದ್ಯವ್ಯಸನ ಒಂದು ಸಾಮಾಜಿಕ ಕಾಯಿಲೆ. ಅಮಲಿನ ರೋಗ. ಸಾರಾಯಿಗೆ ಅಂಟಿಕೊಂಡ ಚಟವನ್ನು ವ್ಯಕ್ತಿಯಿಂದ ಬಿಡಿಸಿ ವ್ಯಸನ ಮುಕ್ತ ಸಮಾಜ ಕಟ್ಟುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ
ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೃಷ್ಣಾಜಿ ಹೇಳಿದರು.
ಪಟ್ಟಣದ ಮರಡಿಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಮದ್ಯವರ್ಜನ ಶಿಬಿರದ ಪೂರ್ವಭಾವಿ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದ್ಯ ವಸನದಲ್ಲಿ ಬಿದ್ದು ಹಲವರು ಬದುಕು ಹಾಳು ಮಾಡಿಕೊಂಡಿದ್ದಾರೆ. ವ್ಯಕ್ತಿಯನ್ನು ಮದ್ಯದಿಂದ ಮುಕ್ತಗೊಳಿಸಿ ಆ ಕುಟುಂಬದ ಮಹಿಳೆ, ಮಕ್ಕಳಿಗೆ ಸಾಂತ್ವನದ ನೆಮ್ಮದಿ ನೀಡುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸೇವಾ ಕಾರ್ಯದಲ್ಲಿ ತೊಡಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಕೃಷ್ಣಾಜೀ ಹೇಳಿದರು.
ಜನಜಾಗೃತಿ ಸಮಿತಿ ಅಧ್ಯಕ್ಷ ಹೇಮಂತ ನಾಯಕ ಮಾತನಾಡಿ, ಧರ್ಮಸ್ಥಳ ಯೋಜನೆಯ ಈ ಸಮಾಜಮುಖೀ ಕಾರ್ಯದಿಂದ ಸಾಕಷ್ಟು ಕುಟುಂಬಗಳು ನೆಮ್ಮದಿಯ ಬದುಕು ಸಾಗಿಸುತ್ತಿವೆ. ಜನರ ಸಹಭಾಗಿತ್ವದಲ್ಲಿ ನಡೆಯುವ ಈ ಮದ್ಯವರ್ಜನ ಶಿಬಿರ ರಾಜ್ಯಕ್ಕೆ ಮಾದರಿಯಾಗಲಿ ಎಂದರು.
ಶಿಬಿರ ವ್ಯವಸ್ಥಾಪಕ ಅಧ್ಯಕ್ಷರಾಗಿ ಪಿ.ಎನ್. ಪವಾರ, ಉಪಾಧ್ಯಕ್ಷರಾಗಿ ಗೋಪಾಲ ಭಟ್ಟಡ, ಸಚಿನ ತೊಗರಿ, ಖಜಾಂಚಿಯಾಗಿ ವಿಠಲಸಾ ಕಾವಡೆ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಯೋಜನಾಧಿಕಾರಿ ಮಹಾಂತೇಶ, ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ ಅಮರಶೆಟ್ಟಿ, ಸಂಜೀವ ಕುಮಾರ, ಪಿ.ಎನ್.ಪವಾರ್, ಅಮಾತೆಪ್ಪ ಕೊಪ್ಪಳ, ವಿಠuಲಸಾ ಕಾವಡೆ, ಸಂಗಪ್ಪ ಜವಳಿ, ಗೋಪಾಲ ಭಟ್ಟಡ, ನಾಗೇಶಪ್ಪ ಪಾಗಿ, ಅಶೋಕ ನಾಯನೇಗಲಿ, ಭುವನೇಶ ಪೂಜಾರ, ರಾಚಪ್ಪ ಸಾರಂಗಿ, ಸಚಿನ ತೊಗರಿ, ಹುಚ್ಚೇಶ ಯಂಡಿಗೇರಿ, ನಾಗೇಶ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.