ಬ್ರಿಸ್ಬೇನ್: ಅಫ್ಘಾನಿಸ್ಥಾನದ ಟಿ20 ವಿಶ್ವಕಪ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅನಾರೋಗ್ಯಕ್ಕೆ ಒಳಗಾಗಿರುವ ಆರಂಭಿಕ ಆಟಗಾರ ಹಜರತುಲ್ಲಾ ಝಜೈ ಬದಲಿಗೆ ಗುಲ್ಬದಿನ್ ನೈಬ್ ಅವರನ್ನು ಸ್ಕ್ವಾಡ್ ಗೆ ಸೇರಿಸಿಕೊಳ್ಳಲಾಗಿದೆ.
ಟ್ರಾವೆಲಿಂಗ್ ಮೀಸಲು ಪಡೆಯಲ್ಲಿದ್ದ ನೈಬ್ ಅವರು ತಂಡ ಸೇರಿದ್ದು, ಇಂದು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಬ್ರಿಸ್ಬೇನ್ ನಲ್ಲಿ ಈಗಾಗಲೇ ಈ ಪಂದ್ಯ ಆರಂಭವಾಗಿದ್ದು, ಅಫ್ಘಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ.
ಕಿಬ್ಬೊಟ್ಟೆಯ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಹಜರತುಲ್ಲಾ ಝಜೈ ಅವರು ಕೂಟದಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಝಜೈ ಏಳು ರನ್ ಗಳಿಸಿದ್ದರು. ಅಫ್ಘಾನ್ ನ ನಂತರದ ಎರಡು ಪಂದ್ಯಗಳು ಮಳೆಗಾಹುತಿಯಾಗಿದೆ.
ಇದನ್ನೂ ಓದಿ:ರಾಜ್ಯೋತ್ಸವ-2022: ಎಲ್ಲೆಡೆ ಕನ್ನಡ ಕಡ್ಡಾಯಗೊಳಿಸುವ ನಿಯಮ ಸೇರಿಸಿ
ಸದ್ಯ ಆರು ತಂಡಗಳ ಎ ಗುಂಪಿನಲ್ಲಿ ಐದನೇ ಸ್ಥಾನದಲ್ಲಿರುವ ಅಫ್ಘಾನ್ ಸೆಮಿಫೈನಲ್ ಗೆ ಪ್ರವೇಶಿಸುವ ಯಾವುದೇ ಅವಕಾಶಕ್ಕಾಗಿ ಇಂದಿನ ಲಂಕಾ ವಿರುದ್ಧದ ಪಂದ್ಯ ಮತ್ತು ಶುಕ್ರವಾರ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಗೆಲ್ಲಬೇಕಿದೆ.