Advertisement

ಹೊಸ ವರುಷದ ಸವಿ ಪಾಕ : ಗುಲಾಬ್‌ ಜಾಮೂನ್‌

09:00 AM Jan 02, 2017 | Karthik A |

ಬಾಯಲ್ಲಿ ನೀರೂರಿಸು ಟೇಸ್ಟಿಯಾದ ಗುಲಾಬ್‌ ಜಾಮೂನ್‌ನ್ನು ಮನೆಯಲ್ಲಿಯೇ ರುಚಿಕರವಾಗಿ ಹಾಗೂ ಸುಲಭವಾಗಿ ಹೀಗೆ ತಯಾರಿಸಬಹುದು.

Advertisement

ಬೇಕಾಗುವ ಸಾಮಾಗ್ರಿಗಳು:
ಮೈದಾ 1 ಕಪ್
ಖೋವಾ 1/2 ಕಪ್‌
ಸಕ್ಕರೆ 1 ಕಪ್
ಎಣ್ಣೆ ಅಥವಾ ತುಪ್ಪ ಕರಿಯಲು
ಏಲಕ್ಕಿ ಪುಡಿ
ಪಿಸ್ತಾ ಅಲಂಕಾರಕ್ಕೆ

ತಯಾರಿಸುವ ವಿಧಾನ:
– ಮೊದಲು ಖೋವಾವನ್ನು ಚೆನ್ನಾಗಿ ಮಿಕ್ಸ್‌ ಮಾಡಿ.  ನಂತರ ಅದಕ್ಕೆ 1 ಕಪ್‌ ಮೈದಾ ಹಿಟ್ಟನ್ನು ಹಾಕಿ ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ ಹಿಟ್ಟು ತಯಾರಿಸಿ.

– ನಂತರ ಕೈಗೆ ತುಪ್ಪ  ಸವರಿಕೊಂಡು ಉಂಡೆಗಳಾಗಿ ಮಾಡಿ ತುಪ್ಪ ಅಥವಾ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.

– ಇನ್ನೊಂದು ಪ್ಯಾನ್‌ನಲ್ಲಿ ಸಕ್ಕರೆ ಹಾಗು 1/2  ಕಪ್ ನೀರು ಸೇರಿಸಿ ಕುದಿಸಿ, ಸಕ್ಕರೆ ಪಾಕ ಸ್ವಲ್ಪ ಮಂದವಾಗುತ್ತ ಬಂದಂತೆ ಅದಕ್ಕೆ ಏಲಕ್ಕಿ ಪುಡಿ ಹಾಕಿ.

Advertisement

– ಈಗ ಕರಿದ ಉಂಡೆಗಳನ್ನು ಸಕ್ಕರೆ ಪಾಕದೊಳಗೆ ಹಾಕಿ 20 ರಿಂದ 25 ನಿಮಿಷಗಳ ಕಾಲ ನೆನೆಸಿಡಿ.

– ನಂತರ ತೆಗೆದು ಪಿಸ್ತಾದಿಂದ ಅಲಂಕರಿಸಿ ಸರ್ವ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next