ಕುಂದಾಪುರ: ಗ್ರಾಮದ ಸಮಸ್ಯೆಗಳ ನಿವಾರಣೆ, ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒಂದಷ್ಟು ಚರ್ಚೆಗಳು, ಬೇಡಿಕೆಗಳು ಶುಕ್ರವಾರ ಗುಜ್ಜಾಡಿಯ ರಾಮಮಂದಿರದಲ್ಲಿ ನಡೆದ ಗುಜ್ಜಾಡಿ ಗ್ರಾ.ಪಂ.ನ 2ನೇ ಸುತ್ತಿನ ಗ್ರಾಮಸಭೆಯಲ್ಲಿ ಕೇಳಿಬಂದವು.
ಗ್ರಾ.ಪಂ. ಅಧ್ಯಕ್ಷ ಹರೀಶ್ ಮೇಸ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಕೆಲವು ನ್ಯೂನತೆಗಳು ಹಾಗೂ ಸಮಸ್ಯೆಗಳನ್ನು ನಿವಾರಿಸಲು ಬೇಡಿಕೆಗಳನ್ನು ಇಟ್ಟರು. ಕಳೆದ ಹಲವಾರು ಸಭೆಗಳಲ್ಲಿ ಅಧಿಕಾರಿಗಳ ಗೈರು ಹಾಜರಿಯನ್ನು ಕಂಡಿದ್ದ ಈ ಗ್ರಾಮಸಭೆಯಲ್ಲಿ ಇಂದು ಹೆಚ್ಚಿನ ಅಧಿಕಾರಿಗಳು ಭಾಗವಹಿಸಿದ್ದರು.
ಗುಜ್ಜಾಡಿಯಲ್ಲಿ ಶ್ಮಶಾನ ನಿರ್ಮಾಣವಾಗಬೇಕು ಎಂದು ಗ್ರಾಮಸ್ಥರೊಬ್ಬರು ಬೇಡಿಕೆಯನ್ನಿಟ್ಟರು. ಜನತಾ ಕಾಲನಿಯ ನಿವಾಸಿಗಳ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿದ್ದ ಬಾವಿಯಿಂದ ಇತರರು ವಾಣಿಜ್ಯ ಕೆಲಸಗಳಿಗೆ ಉಪಯೋಗಿಸಲು ಕೊಂಡೊಯ್ಯುವು ದರಲ್ಲಿ ಪರಿಸರವನ್ನು ಗಲೀಜು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು. ನಾಯಕವಾಡಿ -ಗುಜ್ಜಾಡಿ ರಾಮಂದಿರದ ರಸ್ತೆಯಲ್ಲಿ ಅಪಘಾತ ವಲಯದಲ್ಲಿ ದಾರಿದೀಪ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್ ಅವರು ಶ¾ಶಾನಕ್ಕಾಗಿ ಈಗಾಗಲೇ ಗ್ರಾ.ಪಂ. ಪ್ರಸ್ತಾವನೆಯನ್ನು ಕಳುಹಿಸಿದೆ. ಅಲ್ಲದೇ ಜನತಾ ಕಾಲನಿಯಲ್ಲಿರುನ ಬಾವಿ ಸಾರ್ವಜನಿಕ ಬಾವಿಯಾಗಿದ್ದು ಇದನ್ನು ಎಲ್ಲ ಜನರು ಉಪಯೋಗಿಸಬಹುದಾಗಿದೆ. ಆದರೆ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಬಾವಿಯ ನೀರನ್ನು ಕೊಂಡೊಯ್ಯಲು ಅವಕಾಶವಿರುವುದಿಲ್ಲ. ನಮ್ಮ ಜಿ.ಪಂ. ವ್ಯಾಪ್ತಿಗೆ ಅನುದಾನದ ಕೊರತೆ ಇದೆ. ಆದರೆ ಈಗಾಗಲೇ ಬಂದ ಅನುದಾನದಲ್ಲಿ ಗುಜ್ಜಾಡಿ ಗ್ರಾ.ಪಂ.ಗೆ ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಿಂದ ದೊರೆ ಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸ್ಥ ರೊಂದಿಗೆ ಚರ್ಚೆ ನಡೆಸಿದರು. ಗ್ರಾಮಸಭೆಯ ನೊಡೆಲ್ ಅಧಿಕಾರಿಯಾಗಿ ತಾ.ಪಂ. ಅಧಿಕಾರಿ ಇಬ್ರಾಹಿಂ ಪುರ್ ಭಾಗವಹಿಸಿದ್ದರು. ತಾ.ಪಂ. ಸದಸ್ಯ ನಾರಾಯಣ ಕೆ., ಗ್ರಾ.ಪಂ. ಉಪಾಧ್ಯಕ್ಷ, ಸದಸ್ಯರು ಭಾಗವಹಿಸಿದ್ದರು.