Advertisement
ಗಂಗೊಳ್ಳಿ: ಗುಜ್ಜಾಡಿಯ ಪುಟ್ಟ ಊರಿನಲ್ಲಿ ದಿ| ಶಾಬುದ್ಧೀನ್ ಅಬ್ದುಲ್ ಖಾದಿರ್ ಮಾಸ್ತರ್ ಅವರಿಂದ ಆರಂಭಗೊಂಡ ಶಾಲೆಯಿದು. ಈ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು ಕೂಡ ಅವರೇ ಆಗಿದ್ದರು. 1919ರಲ್ಲಿ ಆರಂಭಿಸಿದ ಈ ಜ್ಞಾನದೇಗುಲಕ್ಕೆ ಇದು ಶತಮಾನೋತ್ಸವ ಸಂಭ್ರಮದ ವರ್ಷ.
ಹಿಂದೆ ಈ ಶಾಲೆಗೆ ಕಂಚುಗೋಡು, ತ್ರಾಸಿ, ಗಂಗೊಳ್ಳಿ, ಮುಳ್ಳಿಕಟ್ಟೆ, ಗುಜ್ಜಾಡಿ, ನಾಯಕವಾಡಿ, ಬೆಣೆYರೆ, ಕಳಿಹಿತ್ಲು, ಮತ್ತಿತರ ಕಡೆಗಳಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದರು.
Related Articles
Advertisement
ಸಾಧಕ ವಿದ್ಯಾರ್ಥಿಗಳುಉದ್ಯಮಿಗಳಾದ ನಾರಾಯಣ ಟಿ. ಪೂಜಾರಿ ಮುಂಬಯಿ, ಶೇಷಯ್ಯ ಕೋತ್ವಾಲ್, ಪದ್ಮನಾಭ ಕೋತ್ವಾಲ್, ಗಣಪತಿ ಮೇಸ್ತ, ದಯಾಕರ ಮೇಸ್ತ, ಲಂಡನ್‌ನಲ್ಲ ವೈದ್ಯರಾಗಿರುವ ಡಾ| ಪ್ರಭಾಕರ ಮೇಸ್ತ, ಡಾ| ಅರುಣ ಕುಮಾರ್, ಡಾ| ಅರುಣ ಕುಮಾರ್ ಜಿ., ಇತಿಹಾಸ ತಜ್ಞ ಡಾ| ವಸಂತ ಮಾಧವ ಕೊಡಂಚ, ಸಿಂಡಿಕೇಟ್ ಬ್ಯಾಂಕ್ ಎಜಿಎಂ ಗಣಪತಿ ಶೇರುಗಾರ್, ನಟ ಚಂದ್ರಕಾಂತ ಕೊಡಪಾಡಿ, ಕುಂದಾಪುರ ತಾ| ಬೋರ್ಡ್ ಅಧ್ಯಕ್ಷರಾಗಿದ್ದ ಮಂಜು ನಾಯ್ಕ, ಕುಂದಾಪುರ ತಾ| ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ಗುಜ್ಜಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಮೇಸ್ತ ಸೇರಿದಂತೆ ಹಲವು ಮಂದಿ ಸಾಧಕರು ಈ ಶಾಲೆಯಲ್ಲಿ ಕಲಿತಿದ್ದಾರೆ. ದಾನಿಗಳ ನೆರವು
ಗಣಪತಿ ಮೇಸ್ತ-ಸಹೋದರರು, ಪ್ರಶಾಂತ್ ಹನಿವಲ್, ಶಾಂತರಾಜ್ ಕೆ., ನಾರಾಯಣ ಟಿ. ಪೂಜಾರಿ, ಗೋಪಾಲ್ ಪುತ್ರನ್ ಸುಳೆÕ, ದುಬೈ ಉದ್ಯಮಿ ದಿ| ಕೊಂಚಾಡಿ ಗಣಪತಿ ಶೆಣೈ ಟ್ರಸ್ಟ್‌ನಿಂದ ಶಾಲೆಯ ಕಟ್ಟಡ ನವೀಕರಣ, ಐಶ್ವರ್ಯ ಡಿ. ಮೇಸ್ತ ಶಾಲಾ ವಾಹನವನ್ನು ಒದಗಿಸಿಕೊಟ್ಟಿದ್ದಾರೆ. ಬೇಡಿಕೆಗಳು
ಸ್ಮಾರ್ಟ್ ಕ್ಲಾಸ್ ಅಗತ್ಯವಿದ್ದು, ಕಂಪ್ಯೂಟರ್ ಲ್ಯಾಬ್, ಗ್ರೀನ್ ಬೋರ್ಡ್, ಮುಖ್ಯ ಶಿಕ್ಷಕರ ಕೊಠಡಿ ಸಹಿತ ಅನೇಕ ಬೇಡಿಕೆಗಳಿವೆ. ಶಾಲಾಭಿವೃದ್ಧಿಯಲ್ಲಿ ಸರಕಾರದ ಜತೆಗೆ ಊರವರು, ಪೋಷಕರು, ದಾನಿಗಳು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘದ ನೆರವು ಮಹತ್ತರವಾಗಿದೆ. ಜನವರಿ – ಫೆಬ್ರವರಿಯಲ್ಲಿ ಶತಮಾನೋತ್ಸವವನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು, ಊರವರ ಸಹಕಾರದ ಅಗತ್ಯವಿದೆ.
-ಆನಂದ ಜಿ.,ಮುಖ್ಯ ಶಿಕ್ಷಕರು ಕಷ್ಟದ ದಿನಗಳಲ್ಲಿ ಕಲಿತ ನೆನಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನನ್ನ ಈವರೆಗಿನ ಬದುಕಿನ ಪಯಣದ ಆರಂಭದ ಮೆಟ್ಟಿಲು ಈ ಶಾಲೆ ಎನ್ನುವುದೇ ಹೆಮ್ಮೆ. ವಿದ್ಯಾರ್ಥಿಯಾಗಿದ್ದಾಗ ಕೃಷಿ ಮಂತ್ರಿಯಾಗಿದ್ದೆ. ಈ ಶಾಲೆಯಲ್ಲಿ ಕಲಿತ ಋಣ ನಮ್ಮೆಲ್ಲರ ಮೇಲಿದೆ.
-ನಾರಾಯಣ ಟಿ. ಪೂಜಾರಿ ಮುಂಬಯಿ,
ಉದ್ಯಮಿ,ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ -ಪ್ರಶಾಂತ್ ಪಾದೆ