Advertisement
ಗುಜ್ಜಾಡಿಯಿಂದ ವಂಡ್ಸೆಯವರೆಗಿನ 18 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಕಿರಿದಾಗಿರುವ 12 ಕಿ.ಮೀ. ವರೆಗಿನ ರಸ್ತೆ ವಿಸ್ತರಣೆಯಾಗಲಿದೆ. ಅಪಘಾತ ಸಂಭವಿಸುವ ತಿರುವುಗಳು ಸಹ ವಿಸ್ತರಣೆಯಾಗಲಿದೆ.
ಮುಳ್ಳಿಕಟ್ಟೆಯಿಂದ ಆರಂಭಗೊಂಡು ಆರಂಭದ 2 ಕಿ.ಮೀ. ವರೆಗೆ ಮರು ಡಾಮರು ಕಾಮಗಾರಿ ನಡೆಯಲಿದೆ. ಅಲ್ಲಿಂದ ಮುಂದಕ್ಕೆ ಅಂದರೆ ಬಂಟ್ವಾಡಿಯಿಂದ ಆಲೂರು ಪೇಟೆಯವರೆಗೆ ಹಾಗೂ ಅಲ್ಲಿಂದ ಮುಂದಕ್ಕೆ ಕೆಲ ದೂರ ಒಟ್ಟಾರೆ ಸುಮಾರು 10-12 ಕಿ.ಮೀ. ದೂರದವರೆಗೆ 3.30 ಮೀ. ಅಗಲ ಇರುವ ರಸ್ತೆಯು 5.50 ಮೀ. ಡಾಮರು ಕಾಮಗಾರಿಯೊಂದಿಗೆ ವಿಸ್ತರಣೆಯಾಗಲಿದೆ. ಪ್ರಮುಖ ರಸ್ತೆ
ಗಂಗೊಳ್ಳಿ, ಗುಜ್ಜಾಡಿ, ಮುಳ್ಳಿಕಟ್ಟೆ, ನಾಡ, ಪಡುಕೋಣೆ, ಹಕ್ಲಾಡಿ, ಆಲೂರು, ಕಳಿ ಭಾಗದವರಿಗೆ ಕೊಲ್ಲೂರು, ಮಾರಣಕಟ್ಟೆ ದೇಗುಲಗಳಿಗೆ ತೆರಳಲು ಜನ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಆಲೂರು ಭಾಗದಿಂದ ಕುಂದಾಪುರಕ್ಕೆ ಬರಬೇಕಾದರೂ ಈ ರಸ್ತೆ ಹತ್ತಿರವಾಗಿದೆ. ಆದರೆ ಕಿರಿದಾದ ರಸ್ತೆ ಹಾಗೂ ಅಲ್ಲಲ್ಲಿ ಡಾಮರೆಲ್ಲ ಎದ್ದು, ಗುಂಡಿಮಯ ಆಗಿರುವುದರಿಂದ ವಾಹನ ಸವಾರರು ಕೊಲ್ಲೂರು ಕಡೆಗೆ ತೆರಳಲು ಬೇರೆ ರಸ್ತೆಯನ್ನು ಆಶ್ರಯಿಸುವಂತಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯನ್ನೇ ಅವಲಂಬಿಸಿದ್ದು, ಹತ್ತಾರು ಊರುಗಳಿಗೆ ತೆರಳಲು ಇದು ಪ್ರಮುಖ ಮಾರ್ಗವಾಗಿದೆ.
Related Articles
ಬಂಟ್ವಾಡಿಯಿಂದ ಆಲೂರಿನ ಏಳು ಸುತ್ತಿನ ಕೋಟೆಯವರೆಗಿನ ಈ ರಸ್ತೆ ಬಹಳ ಕಿರಿದಾಗಿತ್ತು. ಇದರಿಂದ ಜನರಿಗೆ ತುಂಬಾ
ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿತ್ತು. ಈಗ ಅಗಲೀಕರಣದಿಂದ ಅನುಕೂಲವಾಗಲಿದೆ. ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಇದರೊಂದಿಗೆ ಎರಡೂ ಬದಿ ಚರಂಡಿ, ಬೀದಿ ದೀಪದ ಅಳವಡಿಕೆ ಆಗಬೇಕು, ಶಾಲಾ ಪರಿಸರಲ್ಲಿ ಹಂಪ್, ತಿರುವುಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಿ.
ರಾಜೇಶ್ ದೇವಾಡಿಗ,
ಅಧ್ಯಕ್ಷ ಆಲೂರು ಗ್ರಾ.ಪಂ.
Advertisement
ಶೀಘ್ರ ಆರಂಭಜಿಲ್ಲಾ ಮುಖ್ಯ ರಸ್ತೆ ಮತ್ತು ಇತರ ರಸ್ತೆ ನವೀಕರಣ ಯೋಜನೆಯಡಿ 9.90 ಕೋ.ರೂ. ವೆಚ್ಚದಲ್ಲಿ 12 ಕಿ.ಮೀ. ರಸ್ತೆ ವಿಸ್ತರಣೆಯಾಗಲಿದೆ. 3.30 ಮೀ. ಇದ್ದ ರಸ್ತೆಯು 5.50 ಮೀ. ವಿಸ್ತರಣೆಯಾಗಲಿದೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗಲಿದೆ.
ಕೆ. ಮೂರ್ತಿ, ಎಂಜಿನಿಯರ್,
ಲೋಕೋಪಯೋಗಿ ಇಲಾಖೆ ಕುಂದಾಪುರ *ಪ್ರಶಾಂತ್ ಪಾದೆ