ಹೊಸದಿಲ್ಲಿ: ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಚಂದ್ರಯಾನ-3 ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು 2021ರ ಅಕ್ಟೋಬರ್‌ನಿಂದ ಇಲ್ಲಿಯ ವರೆಗೆ ಗುಜರಿ ಸಾಮಗ್ರಿಗಳನ್ನು ಮಾರಿ ಎರಡು ಚಂದ್ರಯಾನ ಕೈಗೊಳ್ಳುವಷ್ಟು ಹಣವನ್ನು ಗಳಿಸಿದೆ.
ಸ್ವತ್ಛ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರಕಾರವು ಹಳೆಯ ಕಡತಗಳು, ಕಾಗದ, ಹಳೆಯ ವಾಹನಗಳ ಸಹಿತ ಗುಜರಿ ವಸ್ತುಗಳನ್ನು ಮಾರಾಟ ಮಾಡಿದೆ. ಈ ಮೂಲಕ 2021ರ ಅಕ್ಟೋಬರ್‌ನಿಂದ ಇಲ್ಲಿಯವರೆಗೆ 1,163 ಕೋ. ರೂ.ಗಳನ್ನು ಗಳಿಸಿದೆ. 2023ರಲ್ಲಿ ಗುಜರಿ ಮಾರಾಟದಿಂದ 556 ಕೋ.ರೂ. ಲಭಿಸಿದೆ.
ದರಲ್ಲಿ ರೈಲ್ವೇ ಇಲಾಖೆಯ ಗುಜರಿ ಮಾರಾಟದ ಪಾಲು 225 ಕೋಟಿ ರೂ. ಎಂದು ಸರಕಾರದ ಅಧಿಕೃತ ಮೂಲಗಳು ತಿಳಿಸಿವೆ.
“ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸರಕಾರಿ ಕಚೇರಿಗಳನ್ನು ಸ್ವತ್ಛಗೊಳಿಸಲಾಯಿತು. 2021ರ ಅಕ್ಟೋಬರ್‌ನಿಂದ ಇಲ್ಲಿಯ ವರೆಗೆ ಕೇಂದ್ರ ಸರಕಾರಿ ಕಚೇರಿಗಳಲ್ಲಿದ್ದ ಹಳೆಯ 96 ಲಕ್ಷ ಕಡತಗಳನ್ನು ಗುಜರಿಗೆ ಹಾಕಲಾಗಿದೆ. ಈ ಮೂಲಕ ಸರಕಾರಿ ಕಚೇರಿಗಳಲ್ಲಿ, ಸುಮಾರು 355 ಲಕ್ಷ ಚದರ ಅಡಿಯಷ್ಟು ಸ್ಥಳವನ್ನು ಖಾಲಿ ಮಾಡಲಾಗಿದೆ. ಈ ಸ್ಥಳವನ್ನು ಉಪಯುಕ್ತ ಕಾರಣಗಳಿಗಾಗಿ ಬಳಸಿಕೊಳ್ಳಬಹುದಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“16 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಷ್ಯಾ ಕೈಗೊಂಡಿದ್ದ ಚಂದ್ರಯಾನ ಯೋಜನೆ ವಿಫಲವಾಯಿತು. 600 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಚಂದ್ರಯಾನ ಕುರಿತು ಹಾಲಿವುಡ್ ಸಿನೆಮಾಗಳು ಮೂಡಿಬಂದಿವೆ. ಆದರೆ ಭಾರತ 600 ಕೋಟಿ ರೂ.ಗಳಲ್ಲಿ ಚಂದ್ರಯಾನ-3 ಯೋಜನೆ ಪೂರ್ಣಗೊಳಿಸಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದರು.