Advertisement

ಪರೋಲ್‌ ಪಡೆದಿದ್ದ ಸಾಧ್ವಿ ಬಾಹುಬಲಿ ವೀಕ್ಷಿಸಿ ಪರಾರಿ

01:24 PM Jun 17, 2017 | Karthik A |

ಅಹಮದಾಬಾದ್‌: ವೈದ್ಯಕೀಯ ತಪಾಸಣೆಗಾಗಿ ಜೈಲಿನಿಂದ ಪರೋಲ್‌ ಮೇಲೆ ಹೊರಬಂದಿದ್ದ ಗುಜರಾತ್‌ನ ಸ್ವಘೋಷಿತ ಸಾಧ್ವಿ ಜೈ ಶ್ರೀ ಗಿರಿ ಪರಾರಿಯಾಗಿದ್ದಾಳೆ. ಪರಾರಿಯಾಗುವ ಮೊದಲು ಆಕೆ ಪೊಲೀಸರನ್ನೇ ಮರುಳು ಮಾಡಿ ಮಾಲ್‌ಗೆ ತೆರಳಿದ್ದಳು, ‘ಸ್ಪಾ’ವೊಂದಕ್ಕೆ ಭೇಟಿ ನೀಡಿದ್ದಳು ಮತ್ತು ಬಾಹುಬಲಿ-2 ಸಿನಿಮಾ ವೀಕ್ಷಿಸಿದ್ದಳು!

Advertisement

ವ್ಯಾಪಾರಿಯೊಬ್ಬರಿಗೆ 5 ಕೋಟಿ ರೂ. ವಂಚನೆ ಮತ್ತು ಇತರ ಅಕ್ರಮ ಎಸಗಿದ್ದ ಪ್ರಕರಣ ಸಂಬಂಧ ಜನವರಿಯಿಂದ ಜೈಲು ಶಿಕ್ಷೆಯಲ್ಲಿದ್ದ ಸಾಧ್ವಿ ವೈದ್ಯಕೀಯ ತಪಾಸಣೆಗಾಗಿ ಪೆರೋಲ್‌ ಮೇಲೆ ಹೊರಬಂದಿದ್ದಳು. ನಾಲ್ವರು ಪೊಲೀಸರು ಈಕೆಗೆ ಬೆಂಗಾವಲು ನೀಡಿದ್ದರು. ಅವರ ಮನವೊಲಿಸಲು ಸಫ‌ಲಳಾದ ಸಾಧ್ವಿ, ಅಹಮದಾಬಾದ್‌ನ ಮಾಲ್‌ನ ‘ಸ್ಪಾ’ ದಲ್ಲಿ ಮಸಾಜ್‌ ಮಾಡಿಸಿಕೊಂಡಿದ್ದಾಳೆ. ಬಳಿಕ ಅಲ್ಲಿಯೇ ಬಾಹುಬಲಿ-2 ವೀಕ್ಷಿಸಿದ್ದಾಳೆ. ಸಿನಿಮಾ ಮಧ್ಯೆ ಶೌಚಾಲಯ ಕ್ಕೆಂದು ತೆರಳಿದ ಆಕೆ ಅಲ್ಲಿಂದಲೇ ಕಾಲ್ಕಿತ್ತಿದ್ದಾªಳೆ ಎಂದು ಕ್ರೈಂ ಬ್ರಾಂಚ್‌ನ ಆಯುಕ್ತರು ಹೇಳಿದ್ದಾರೆ. ಈಕೆಯ ಆಶ್ರಮದ ಮೇಲೆ ದಾಳಿ ನಡೆಸಿದಾಗ 80 ಲಕ್ಷ ಮೌಲ್ಯದ ಚಿನ್ನದ ಬಾರ್‌, 120 ಕೋಟಿ ನಗದು, ಮದ್ಯದ ಬಾಟಲಿಗಳು ಸಿಕ್ಕಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next