Advertisement

ಕನ್ನಡದಲ್ಲಿ 125 ಅಂಕ ಪಡೆದ ಗುಜರಾತಿ ಮೂಲದ ವಿದ್ಯಾರ್ಥಿ

11:26 AM Aug 12, 2020 | Suhan S |

ಕೊರಟಗೆರೆ: ಪಟ್ಟಣದ ರವೀಂದ್ರ ಭಾರತಿ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಪಟ್ಟಣದಲ್ಲಿ ವಾಸವಾಗಿರುವ ಗುಜರಾತಿ ಮೂಲದ ನರಸಿನ್‌ ನಾಕಾನಿ ಮತ್ತು ಮೀನಾ ಬೇನ್‌ ದಂಪತಿಗಳ ಮಗ ಸಾರ್ಥಕ್‌ ನರಸಿನ್‌ ನಾಕಾನಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125 ಅಂಕಗಳಿಗ 125 ಅಂಕ ಗಳಿಸಿ ಗಮನ ಸೆಳೆದಿದ್ದಾರೆ.

Advertisement

ಕನ್ನಡದಲ್ಲಿ 125 ಅಂಕ ಗಳಿಸುವುದರೊಂದಿಗೆ ಆಂಗ್ಲಭಾಷೆಯಲ್ಲಿ 100 ಅಂಕ, ತೃತೀಯ ಭಾಷೆ ಹಿಂದಿ 100 ಅಂಕ, ಗಣಿತ 84, ವಿಜಾnನ 89, ಸಮಾಜ ವಿಜಾnನ 97 ಅಂಕಗಳನ್ನು ಪಡೆದು 625 ಅಂಕಗಳಿಗೆ 595 ಅಂಕಗಳೊಂದಿಗೆ ಶೇ.95 ರಷ್ಟು ಫ‌ಲಿತಾಂಶ ಪಡೆದು ಶಾಲೆಗ ಕೀರ್ತಿ ತಂದ ವಿದ್ಯಾರ್ಥಿಯನ್ನು ಹಾಗೂ 15ಪ್ರಥಮ ಸ್ಥಾನ, 5 ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಶೇ.100 ರಷ್ಟು ಫ‌ಲಿತಾಂಶ ತಂದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಲಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್‌, ಕಾರ್ಯದರ್ಶಿ ನವೀನ್‌ಕುಮಾರ್‌, ಖಜಾಂಚಿ ಸುಧಾಮಣಿ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next