Advertisement

ಗುಜರಾತ್: 217 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ; ವಿದೇಶಿ ಪ್ರಜೆ ಅರೆಸ್ಟ್

10:37 PM May 12, 2023 | Team Udayavani |

ಅಹಮದಾಬಾದ್: ಗುಜರಾತ್ಎ ಟಿಎಸ್ ರಾಜ್‌ಕೋಟ್ ಜಿಲ್ಲೆಯಲ್ಲಿ 217 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಮತ್ತು ಕಳ್ಳಸಾಗಣೆ ಆರೋಪದ ಮೇಲೆ ನೈಜೀರಿಯಾ ಪ್ರಜೆಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ಸಮುದ್ರ ಮಾರ್ಗದ ಮೂಲಕ ರಾಜ್ಯಕ್ಕೆ ಹೆರಾಯಿನ್ ಕಳ್ಳಸಾಗಣೆ ಮಾಡಿರುವ ಶಂಕೆಯ ಮೇರೆಗೆ ಎಟಿಎಸ್ ಈ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ಬಂಧಿಸಿತ್ತು. ವಿಚಾರಣೆಯ ಸಮಯದಲ್ಲಿ, ಕಳ್ಳಸಾಗಣೆ ಸರಕುಗಳನ್ನು ರಾಜ್ಕೋಟ್ ಜಿಲ್ಲೆಯ ಪದ್ಧರಿ ತಾಲೂಕಿನ ಸ್ಥಳದಲ್ಲಿ ಇರಿಸಲಾಗಿದೆ ಎಂದು ಬಹಿರಂಗಪಡಿಸಿದರು. ನಮ್ಮ ತಂಡವು ಸ್ಥಳವನ್ನು ಪರಿಶೀಲಿಸಿದಾಗ 31 ಕೆಜಿ ಹೆರಾಯಿನ್ ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದರು.

ವಶಪಡಿಸಿಕೊಂಡ ಮಾದಕವಸ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 217 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.

ನೈಜೀರಿಯಾದ ಪ್ರಜೆಯನ್ನು ಗುರುವಾರ ಬಂಧಿಸಲಾಯಿತು ಮತ್ತು ಎಟಿಎಸ್ ನ್ಯಾಯಾಲಯದಿಂದ ಮೇ 24 ರವರೆಗೆ ಆತನ ಕಸ್ಟಡಿಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next