Advertisement

ಪಟೇಲ್ ಐಕ್ಯತಾ ಮೂರ್ತಿ ವೀಕ್ಷಣೆ ಸಮಯ ಮತ್ತೆ 2ಗಂಟೆಯಷ್ಟು ವಿಸ್ತರಣೆ

01:11 PM Feb 05, 2019 | Sharanya Alva |

ಅಹಮದಾಬಾದ್: ಗುಜರಾತ್ ನಲ್ಲಿ ತಲೆಎತ್ತಿರುವ ಸರ್ದಾರ್ ಪಟೇಲ್ ಅವರ ಬೃಹತ್ ಐಕ್ಯತಾ ಮೂರ್ತಿಯ ವೀಕ್ಷಣೆಯ ಸಮಯವನ್ನು ಇನ್ನೂ ಎರಡು ಗಂಟೆ ಕಾಲ ವಿಸ್ತರಿಸಲಾಗಿದೆ ಎಂದು ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೆಎನ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.

Advertisement

ರಾಜ್ಯದ ನರ್ಮದಾ ಜಿಲ್ಲೆಯ ಕೇವಾಡಿಯದಲ್ಲಿ ನಿರ್ಮಿಸಿರುವ ಸರ್ದಾರ್ ಪಟೇಲ್ ಅವರ ಸ್ಮಾರಕಕ್ಕೆ ಸಾರ್ವಜನಿಕರು ಭೇಟಿ ನೀಡುವ ಸಮಯವನ್ನು ಬೆಳಗ್ಗೆ 8ಗಂಟೆಯಿಂದ ಸಂಜೆ 6ಗಂಟೆವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಬೆಳಗ್ಗೆ 9ರಿಂದ ಸಂಜೆ 5ಗಂಟೆವರೆಗೆ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿತ್ತು.

ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮೂರ್ತಿ ವಿಶ್ವದಲ್ಲಿಯೇ ಅತ್ಯಂತ ಎತ್ತರದ್ದಾಗಿದೆ. ಇದು ಬರೋಬ್ಬರಿ 182 ಮೀಟರ್ ನಷ್ಟು ಎತ್ತರವಾಗಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31ರಂದು ಐಕ್ಯತಾ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಆ ದಿನದಿಂದ ಈವರೆಗೆ ವೀಕ್ಷಣೆಗೆ ಲಕ್ಷಾಂತರ ಮಂದಿ ಆಗಮಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next