Advertisement

PMO ಅಧಿಕಾರಿಯೆಂದು ಪೋಸ್ : ವಡೋದರಾ ನಿವಾಸಿ ಬಂಧನ

03:53 PM Jun 24, 2023 | Team Udayavani |

ವಡೋದರಾ: ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಇಬ್ಬರು ಮಕ್ಕಳ ಪ್ರವೇಶಕ್ಕಾಗಿ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಯಂತೆ ನಟಿಸಿ ನಕಲಿ ಗುರುತಿನ ಮೂಲಕ ಭಾರೀ ಮೊತ್ತದ ವಂಚನೆಗೆ ಯತ್ನಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ ಎಂದು ಗುಜರಾತ್ ನ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಅಹಮದಾಬಾದ್ ನಿವಾಸಿ ಕಿರಣ್ ಪಟೇಲ್ ಎಂಬಾತ ಜಮ್ಮು ಮತ್ತು ಕಾಶ್ಮೀರದ ಪಂಚತಾರಾ ಹೋಟೆಲ್‌ನಲ್ಲಿ ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಹಿರಿಯ ಅಧಿಕಾರಿಯಾಗಿ ಪೋಸು ನೀಡಿದ ತಿಂಗಳ ನಂತರ ಶುಕ್ರವಾರ ಮಾಯಾಂಕ್ ತಿವಾರಿ ಎಂಬಾತನನ್ನು ಬಂಧಿಸಲಾಗಿದೆ. ಪಟೇಲ್  ಆತಿಥ್ಯದ ಹೊರತಾಗಿ, ಕಣಿವೆಯಲ್ಲಿ ಅಧಿಕಾರಿಗಳನ್ನು ಮೋಸಗೊಳಿಸುವ ಮೂಲಕ ಭದ್ರತೆಯನ್ನು ಸಹ ಆನಂದಿಸಿದ್ದ.ಆತನನ್ನು ಬಂಧಿಸಲಾಗಿತ್ತು.

ಹೊಸದಿಲ್ಲಿಯ PMO ನಲ್ಲಿ ನಿರ್ದೇಶಕ ಎಂದು ಗುರುತಿಸಿಕೊಂಡ ತಿವಾರಿ ಮಾರ್ಚ್ 2022 ರಲ್ಲಿ ಪ್ರವೇಶದ ಅವಧಿಯಲ್ಲಿ ಶಾಲೆ ಮತ್ತು ಅದರ ಟ್ರಸ್ಟಿಯೊಂದಿಗೆ ಮೊದಲ ಸಂಪರ್ಕವನ್ನು ಪಡೆದಿದ್ದ ಎಂದು ನಗರದ ವಘೋಡಿಯಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮಧ್ಯವಯಸ್ಕ ವ್ಯಕ್ತಿ ತಿವಾರಿ, ತನ್ನ ಕುಟುಂಬದ ಸ್ನೇಹಿತನ ಇಬ್ಬರು ಗಂಡು ಮಕ್ಕಳ ಪ್ರವೇಶಕ್ಕಾಗಿ ಶಾಲೆಯ ಸಹಾಯವನ್ನು ಕೋರಿದ್ದ, ಆತನನ್ನು ಭಾರತೀಯ ಸೇನೆಯ ಅಧಿಕಾರಿ ಮಿರ್ಜಾ ಬೇಗ್ ಎಂದು ವಿವರಿಸಿದ್ದ, ಅವರನ್ನು ಪುಣೆಯಿಂದ ವಡೋದರಾಕ್ಕೆ ವರ್ಗಾಯಿಸಲಾಗುತ್ತಿದೆ ಎಂದು ಹೇಳಿದ್ದ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next