Advertisement

ಕೇವಲ 8 ತಿಂಗಳಲ್ಲಿ 50 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಗುಜರಾತ್‌ ನ್ಯಾಯಾಲಯ!

12:21 AM Sep 20, 2022 | Team Udayavani |

ಅಹಮದಾಬಾದ್‌: ಗುಜರಾತ್‌ನ ಸ್ಥಳೀಯ ನ್ಯಾಯಾಲಯಗಳು 2022ರ ಆರಂಭದಿಂದ ಆಗಸ್ಟ್‌ವರೆಗೆ ಒಟ್ಟು 50 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ.

Advertisement

2006ರಿಂದ 2021ರವರೆಗೆ ಒಟ್ಟು 15 ವರ್ಷಗಳಲ್ಲಿ ಕೇವಲ 46 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿತ್ತು. ಆದರೆ ಈಗ ಕೇವಲ 8 ತಿಂಗಳುಗಳಲ್ಲಿ 50 ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ.

2008ರ ಅಹಮದಾಬಾದ್‌ ಸರಣಿ ಸ್ಫೋಟದ 38 ಅಪರಾಧಿಗಳಿಗೆ ಫೆಬ್ರವರಿಯಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಹಾಗೆಯೇ ಅತ್ಯಾಚಾರ, ಕೊಲೆ ಪ್ರಕರಣಗಳ ಅಪರಾಧಿಗಳಿಗೆ, ಮರ್ಯಾದೆಗೇಡು ಹತ್ಯೆ ಮಾಡಿದ್ದಂತಹ ಇಬ್ಬರಿಗೂ ಇದೇ ಶಿಕ್ಷೆಯಾಗಿದೆ. ವಿಶೇಷವೆಂದರೆ 2010, 2014, 2015 ಮತ್ತು 2017ರಲ್ಲಿ ಈ ನ್ಯಾಯಾಲಯಗಳಲ್ಲಿ ಒಬ್ಬ ಅಪರಾಧಿಗೂ ಗಲ್ಲು ಶಿಕ್ಷೆ ಆದೇಶವಾಗಿರಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next