Advertisement

IPL 2023: ಗುಜರಾತ್‌ ಟೈಟಾನ್ಸ್‌-ಮುಂಬೈ ಇಂಡಿಯನ್ಸ್‌ ಬಿಗ್‌ ಮ್ಯಾಚ್‌

01:24 AM Apr 25, 2023 | Team Udayavani |

ಅಹ್ಮದಾಬಾದ್‌: ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಮತ್ತು 5 ಬಾರಿ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್‌ ಮಂಗಳವಾರ ರಾತ್ರಿ “ಬಿಗ್‌ ಮ್ಯಾಚ್‌’ ಒಂದಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಮೂಡಿಸಿವೆ. ಪಂದ್ಯದ ತಾಣ ಅಹ್ಮದಾಬಾದ್‌.

Advertisement

ಗುಜರಾತ್‌ ಪಾಲಿಗೆ ಇದು ತವರಿನ ಅಂಗಳವಾದರೂ ನೆಚ್ಚಿನ ತಾಣವಾ ಗೇನೂ ಉಳಿದಿಲ್ಲ. ಅಹ್ಮದಾಬಾದ್‌ನ ಅಜೇಯ ದಾಖಲೆ ಈ ಋತುವಿನಲ್ಲಿ ಮುರಿಯಲ್ಪಟ್ಟಿದೆ. ತಂಡದ ಎರಡೂ ಸೋಲುಗಳು ಇಲ್ಲೇ ಎದುರಾಗಿವೆ. ಒಮ್ಮೆ ರಶೀದ್‌ ಖಾನ್‌, ಮತ್ತೂಮ್ಮೆ ಹಾರ್ದಿಕ್‌ ಪಾಂಡ್ಯ ನಾಯಕರಾಗಿದ್ದರು. 6 ಪಂದ್ಯವಾಡಿರುವ ಗುಜರಾತ್‌ ನಾಲ್ಕರಲ್ಲಿ ಜಯ ಸಾಧಿಸಿದೆ.

ಸಾಮಾನ್ಯವಾಗಿ ವಿಳಂಬವಾಗಿ ಖಾತೆ ತೆರೆಯುವ ಮುಂಬೈ 2 ಸೋಲುಗಳ ಬಳಿಕ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿ ಮೇಲೇರಲಾರಂಭಿಸಿತ್ತು. ಆಗಲೇ ತವರಿನ ಅಂಗಳದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಮುಗ್ಗರಿಸಿ ಘಾಸಿಗೊಂಡಿತು. ಮತ್ತೆ ಗೆಲುವಿನ ಹಳಿ ಏರುವ ಒತ್ತಡ ರೋಹಿತ್‌ ಪಡೆಯ ಮೇಲಿದೆ.

ಪಂಜಾಬ್‌ಗ 214 ರನ್‌ ಬಿಟ್ಟು ಕೊಡುವ ಮೂಲಕ ಮುಂಬೈ ಆಘಾತ ಅನುಭವಿಸಬೇಕಾಯಿತು. ತವರಲ್ಲೇ ಮುಂಬೈ ಬೌಲಿಂಗ್‌ ಧೂಳೀಪಟ ಗೊಂಡಿತ್ತು. ಕೊನೆಯ 5 ಓವರ್‌ಗಳಲ್ಲಿ ಪಂಜಾಬ್‌ಗ 96 ರನ್‌ ಬಿಟ್ಟುಕೊಟ್ಟು ಪೆಟ್ಟು ತಿಂದಿತು. ಜೇಸನ್‌ , ಆರ್ಚರ್‌, ಕ್ಯಾಮರಾನ್‌ ಗ್ರೀನ್‌, ಅರ್ಜುನ್‌ ತೆಂಡುಲ್ಕರ್‌ ಅತ್ಯಂತ ದುಬಾರಿಯಾಗಿದ್ದರು. ನಾಲ್ವರೂ 40ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದರು. ಅರ್ಜುನ್‌ ಅವರಂತೂ ಒಂದೇ ಓವರ್‌ನಲ್ಲಿ 31 ರನ್‌ ನೀಡಿ ಕೆಂಗಣ್ಣಿಗೆ ಗುರಿಯಾದರು. ನಿಯಂತ್ರಣ ಸಾಧಿಸಿದ್ದು ಸ್ಪಿನ್ನರ್‌ಗಳಾದ ಪೀಯೂಷ್‌ ಚಾವ್ಲಾ ಮತ್ತು ಹೃತಿಕ್‌ ಶೊಕೀನ್‌ ಮಾತ್ರ. ಗುಜರಾತ್‌ ವಿರುದ್ಧ ವೇಗದ ಬೌಲರ್ ಲಯಕ್ಕೆ ಮರಳಿದರೆ ಮುಂಬೈ ಮೇಲುಗೈ ನಿರೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next