Advertisement
ಸೋಮವಾರದ ಮುಖಾಮುಖಿಯಲ್ಲಿ ಪಾಂಡ್ಯ ಪಡೆ ಸನ್‌ರೈಸರ್ ಹೈದರಾಬಾದ್‌ಗೆ 34 ರನ್ನುಗಳ ಸೋಲುಣಿಸಿ ಮುನ್ನಡೆಯಿತು. ಇದು ಗುಜರಾತ್ ಸಾಧಿಸಿದ 9ನೇ ಜಯ. 12 ಪಂದ್ಯಗಳಲ್ಲಿ 8ನೇ ಸೋಲುಂಡ ಹೈದರಾಬಾದ್ ಕೂಟದಿಂದ ಹೊರಬಿತ್ತು.
Related Articles
Advertisement
ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದರು. ಅವರ ಸಾಧನೆ 30ಕ್ಕೆ 5 ವಿಕೆಟ್. ಇದರಲ್ಲಿ 3 ವಿಕೆಟ್‌ಗಳನ್ನು ಅವರು ಅಂತಿಮ ಓವರ್‌ನಲ್ಲಿ ಕೆಡವಿದರು. ಗುಜರಾತ್ ಕೊನೆಯ ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡಿತು. ಇದರಲ್ಲೊಂದು ರನೌಟ್ ಆಗಿತ್ತು.
ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ 2 ಸಲ 5 ವಿಕೆಟ್ ಕೆಡವಿದ 3ನೇ ಬೌಲರ್. ಉಳಿದಿಬ್ಬರೆಂದರೆ ಜೇಮ್ಸ್ ಫಾಕ್ನರ್ ಮತ್ತು ಜೈದೇವ್ ಉನಾದ್ಕತ್.
ಬೌಲಿಂಗ್ ಆಯ್ದುಕೊಂಡ ಹೈದರಾಬಾದ್ ಮೊದಲ ಓವರ್‌ನಲ್ಲೇ ವೃದ್ಧಿಮಾನ್ ಸಾಹಾ ಅವರನ್ನು ಶೂನ್ಯಕ್ಕೆ ಉರುಳಿಸಿತು. ಬೌಲರ್ ಭುವನೇಶ್ವರ್ ಕುಮಾರ್. ಅವರು ಈ ಸೀಸನ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಎದುರಾಳಿ ಆಟಗಾರನನ್ನು ಸೊನ್ನೆಗೆ ಕೆಡವಿದ 4ನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ಪ್ರಭ್‌ಸಿಮ್ರಾನ್ ಸಿಂಗ್, ರೆಹಮಾನುಲ್ಲ ಗುರ್ಬಜ್ ಮತ್ತು ಡೇವಿಡ್ ವಾರ್ನರ್ ಅವರನ್ನೂ ಇದೇ ರೀತಿ ಔಟ್ ಮಾಡಿದ್ದರು.
ಸಾಹಾ ನಿರ್ಗಮನದಿಂದ ಗುಜರಾತ್ ಒತ್ತಡಕ್ಕೇನೂ ಒಳಗಾಗಲಿಲ್ಲ. ದ್ವಿತೀಯ ವಿಕೆಟಿಗೆ ಜತೆಗೂಡಿದ ಶುಭಮನ್ ಗಿಲ್-ಸಾಯಿ ಸುದರ್ಶನ್ ಭರ್ಜರಿ ಆಟಕ್ಕೆ ಮುಂದಾದರು. ಹತ್ತರ ಸರಾಸರಿಯಲ್ಲಿ ರನ್ ಹರಿದು ಬರತೊಡಗಿತು. ದ್ವಿತೀಯ ವಿಕೆಟಿಗೆ 147 ರನ್ ಜತೆಯಾಟ ನಿಭಾಯಿಸಿದರು. ಇದು ಗುಜರಾತ್ ಪರ ಎಲ್ಲ ವಿಕೆಟ್‌ಗಳಿಗೆ ಅನ್ವಯವಾಗುವಂತೆ ದಾಖಲಾದ ಅತೀ ದೊಡ್ಡ ಜತೆಯಾಟವಾಗಿದೆ. ಇದಕ್ಕೂ ಮೊದಲು ಇದೇ ಋತುವಿನ ಲಕ್ನೋ ವಿರುದ್ಧದ ಪಂದ್ಯದಲ್ಲಿ ಗಿಲ್-ಸಾಹಾ ಮೊದಲ ವಿಕೆಟಿಗೆ 142 ರನ್ ಒಟ್ಟುಗೂಡಿಸಿದ್ದು ದಾಖಲೆ ಆಗಿತ್ತು.
ಸಾಯಿ ಸುದರ್ಶನ್ 36 ಎಸೆತ ಎದುರಿಸಿ 47 ರನ್ ಹೊಡೆದರು (6 ಬೌಂಡರಿ, 1 ಸಿಕ್ಸರ್). ಆದರೆ ಗಿಲ್, ಸಾಯಿ ಸುದರ್ಶನ್ ಹೊರತುಪಡಿಸಿ ಉಳಿದವರ್ಯಾರಿಂದಲೂ ಎರಡಂಕೆಯ ಮೊತ್ತ ದಾಖಲಾಗಲಿಲ್ಲ. ಸಾಹಾ ಜತೆಗೆ ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ ಕೂಡ ಸೊನ್ನೆ ಸುತ್ತಿ ವಾಪಸಾದರು. ಹೀಗಾಗಿ 200 ರನ್ ದಾಟುವ ಪ್ರಯತ್ನದಲ್ಲಿ ಗುಜರಾತ್ ಯಶಸ್ವಿಯಾಗಲಿಲ್ಲ.
ಮೊದಲ 12 ಓವರ್‌ಗಳಲ್ಲಿ ಒಂದಕ್ಕೆ 131 ರನ್ ಬಾರಿಸಿದ ಗುಜರಾತ್, ಕೊನೆಯ 8 ಓವರ್‌ಗಳಲ್ಲಿ 8 ವಿಕೆಟ್ ಕಳೆದುಂಡಿತು. ಗಳಿಸಿದ್ದು 57 ರನ್ ಮಾತ್ರ.
ಕ್ಯಾನ್ಸರ್ ಜಾಗೃತಿಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆಟಗಾರರು ಮಾಮೂಲು ಬೂದು ಬಣ್ಣದ ಜೆರ್ಸಿಯನ್ನು ಬಿಟ್ಟು ತಿಳಿ ಗುಲಾಲಿ-ನೇರಳೆ ಮಿಶ್ರಿತ (ಲ್ಯಾವೆಂಡರ್) ಜೆರ್ಸಿ ಧರಿಸಿ ಆಡಲಿಳಿದರು. ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಆರ್‌ಸಿಬಿ ಕ್ರಿಕೆಟಿಗರು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ 2011ರಿಂದ ಐಪಿಎಲ್ ಋತುವಿನ ಒಂದು ಪಂದ್ಯದಲ್ಲಿ ಹಸಿರು ಉಡುಗೆ ಧರಿಸಿ ಆಡುವುದು ವಾಡಿಕೆ. ಗುಜರಾತ್ ಮೊದಲ ಸಲ ಇಂಥದೊಂದು ಪ್ರಯೋಗಕ್ಕಿಳಿದಿತ್ತು. ಸ್ಕೋರ್ ಪಟ್ಟಿ
ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಾಹಾ ಸಿ ಅಭಿಷೇಕ್ ಬಿ ಭುವನೇಶ್ವರ್ 0
ಶುಭಮನ್ ಗಿಲ್ ಸಿ ಸಮದ್ ಬಿ ಭುವನೇಶ್ವರ್ 101
ಸಾಯಿ ಸುದರ್ಶನ್ ಸಿ ನಟರಾಜನ್ ಬಿ ಜಾನ್ಸೆನ್ 47
ಹಾರ್ದಿಕ್ ಪಾಂಡ್ಯ ಸಿ ತ್ರಿಪಾಠಿ ಬಿ ಭುವನೇಶ್ವರ್ 8
ಡೇವಿಡ್ ಮಿಲ್ಲರ್ ಸಿ ಮಾರ್ಕ್‌ರಮ್ ಬಿ ನಟರಾಜನ್ 7
ರಾಹುಲ್ ತೆವಾಟಿಯಾ ಸಿ ಜಾನ್ಸೆನ್ ಬಿ ಫಾರೂಖೀ 3
ದಸುನ್ ಶಣಕ ಔಟಾಗದೆ 9
ರಶೀದ್ ಖಾನ್ ಸಿ ಕ್ಲಾಸೆನ್ ಬಿ ಭುವನೇಶ್ವರ್ 0
ನೂರ್ ಅಹ್ಮದ್ ರನೌಟ್ 0
ಮೊಹಮ್ಮದ್ ಶಮಿ ಸಿ ಜಾನ್ಸೆನ್ ಬಿ ಭುವನೇಶ್ವರ್ 0
ಮೋಹಿತ್ ಶರ್ಮ ಔಟಾಗದೆ 0
ಇತರ 13
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 188
ವಿಕೆಟ್ ಪತನ: 1-0, 2-147, 3-156, 4-169, 5-175, 6-186, 7-186, 8-186, 9-187.
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-30-5
ಮಾರ್ಕೊ ಜಾನ್ಸೆನ್ 4-0-39-1
ಫಜಲ್‌ಹಕ್ ಫಾರೂಖೀ 3-0-31-1
ಟಿ. ನಟರಾಜನ್ 4-0-34-1
ಐಡನ್ ಮಾರ್ಕ್‌ರಮ್ 1-0-13-0
ಮಾಯಾಂಕ್ ಮಾರ್ಕಂಡೆ 3-0-27-0
ಅಭಿಷೇಕ್ ಶರ್ಮ 1-0-13-0 ಸನ್‌ರೈಸರ್ ಹೈದರಾಬಾದ್
ಅನ್ಮೋಲ್‌ಪ್ರೀತ್ ಸಿಂಗ್ ಸಿ ರಶೀದ್ ಬಿ ಶಮಿ 5
ಅಭಿಷೇಕ್ ಶರ್ಮ ಸಿ ಸಾಹಾ ಬಿ ದಯಾಳ್ 4
ಐಡನ್ ಮಾರ್ಕ್‌ರಮ್ ಸಿ ಶಣಕ ಬಿ ಶಮಿ 10
ರಾಹುಲ್ ತ್ರಿಪಾಠಿ ಸಿ ತೆವಾಟಿಯಾ ಬಿ ಶಮಿ 1
ಹೆನ್ರಿಚ್ ಕ್ಲಾಸೆನ್ ಸಿ ಮಿಲ್ಲರ್ ಬಿ ಶಮಿ 64
ಸನ್ವೀರ್ ಸಿಂಗ್ ಸಿ ಸುದರ್ಶನ್ ಬಿ ಮೋಹಿತ್ 7
ಅಬ್ದುಲ್ ಸಮದ್ ಸಿ ಮಾವಿ ಬಿ ಮೋಹಿತ್ 4
ಮಾರ್ಕೊ ಜಾನ್ಸೆನ್ ಸಿ ಪಾಂಡ್ಯ ಬಿ ಮೋಹಿತ್ 3
ಭುವನೇಶ್ವರ್ ಕುಮಾರ್ ಸಿ ರಶೀದ್ ಬಿ ಮೋಹಿತ್ 27
ಮಾಯಾಂಕ್ ಮಾರ್ಕಂಡೆ ಔಟಾಗದೆ 18
ಫಜಲ್‌ಹಕ್ ಫಾರೂಖೀ ಔಟಾಗದೆ 1
ಇತರ 10
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ ) 154
ವಿಕೆಟ್ ಪತನ: 1-6, 2-11, 3-12, 4-28, 5-45, 6-49, 7-59, 8-127, 9-147.
ಬೌಲಿಂಗ್: ಮೊಹಮ್ಮದ್ ಶಮಿ 4-0-21-4
ಯಶ್ ದಯಾಳ್ 4-0-31-1
ರಶೀದ್ ಖಾನ್ 4-0-28-0
ಮೋಹಿತ್ ಶರ್ಮ 4-0-28-4
ನೂರ್ ಅಹ್ಮದ್ 2.5-0-35-0
ರಾಹುಲ್ ತೆವಾಟಿಯಾ 1.1-0-7-0
ಪಂದ್ಯಶ್ರೇಷ್ಠ: ಶುಭಮನ್ ಗಿಲ್