Advertisement

ಗುಜರಾತ್ ಚುನಾವಣ ಫಲಿತಾಂಶ 2024ರ ಸ್ಪಷ್ಟ ಸಂದೇಶ ರವಾನಿಸಿದೆ: ಅಮಿತ್ ಶಾ

04:52 PM Jan 15, 2023 | Team Udayavani |

ಅಹಮದಾಬಾದ್‌ : ಇತ್ತೀಚೆಗಷ್ಟೇ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಮಹತ್ವದ್ದಾಗಿದೆ. ಇದು 2024 ರಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ಎಂಬ ಸಂದೇಶವನ್ನು ರವಾನಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಹೇಳಿದ್ದಾರೆ.

Advertisement

ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದ ಶಾ, ಗುಜರಾತ್‌ನ ಜನರು ಭಾರತೀಯ ಜನತಾ ಪಕ್ಷಕ್ಕೆದಾಖಲೆ ಸಂಖ್ಯೆಯ ಸ್ಥಾನಗಳೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಮೂಲಕ,ರಾಜ್ಯ ಮತ್ತು ಪ್ರಧಾನಿ ಮೋದಿ ಮಾನಹಾನಿ ಮಾಡಲು ಪ್ರಯತ್ನಿಸಿದವರಿಗೆ ಉತ್ತರಿಸಿದರು ಎಂದರು.

“ಗುಜರಾತ್ ಜನರು ಜಾತಿವಾದದ ವಿಷವನ್ನು ಕೊನೆಗೊಳಿಸಲು ಕೆಲಸ ಮಾಡಿದ್ದಾರೆ ಮತ್ತು ಪೊಳ್ಳು, ಸುಳ್ಳು ಮತ್ತು ಆಕರ್ಷಣೀಯ ಭರವಸೆಗಳನ್ನು ನೀಡುವವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಗುಜರಾತ್ ಮತ್ತು ನರೇಂದ್ರ ಮೋದಿಯವರನ್ನು ದೂಷಿಸಲು ಯತ್ನಿಸಿದವರಿಗೆ ಗುಜರಾತ್‌ನ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದರು.

“ಈ ಫಲಿತಾಂಶವು ಕೇವಲ ಗುಜರಾತ್‌ಗೆ ಮಾತ್ರವಲ್ಲ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಇಡೀ ದೇಶ ಸನ್ನದ್ಧವಾಗಿದೆ. ಗುಜರಾತ್‌ನ ಈ ಸಂದೇಶವು ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ದ್ವಾರಕಾದಿಂದ ಕಾಮಾಖ್ಯಕ್ಕೆ ತಲುಪಿದೆ. ಮೋದಿ ಸಾಹೇಬ್ 2024 ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ” ಎಂದರು.

“ಒಂದು ಪಕ್ಷವು 27 ವರ್ಷಗಳ ಕಾಲ ನಿರಂತರ ಆಡಳಿತ ನಡೆಸಿದ ಒಂದೇ ಒಂದು ರಾಜ್ಯವಿಲ್ಲ. ಬಿಜೆಪಿ 27 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಆಡಳಿತ ನಡೆಸಿದ ಏಕೈಕ ರಾಜ್ಯ ಗುಜರಾತ್,” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next