ನವದೆಹಲಿ/ಜಂಬುಸಾರ್: ವಿಶ್ವಬ್ಯಾಂಕ್‌ನ ಉದ್ದಿಮೆ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 100ನೇ ಸ್ಥಾನ ಪಡೆದಿರುವ ವಿಚಾರ ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿÉ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಮತ್ತು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರ ವೇಳೆ ವರದಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದಾಗಿ ದೇಶಕ್ಕೆ ಸಮಸ್ಯೆಯಾಗಿದೆ ಎಂದು ದೂರಿದ ರಾಹುಲ್, ಸಮಸ್ಯೆ ಏನು ಎಂದು ತಿಳಿಯಲು ಜೇಟಿÉ ಸಣ್ಣ ಉದ್ದಿಮೆದಾರರನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆ ಆಲಿಸಲಿ ಎಂದು ಸವಾಲು ಹಾಕಿದ್ದಾರೆ. ಎರಡನೇ ಹಂತದ ಗುಜ ರಾತ್ ಪ್ರವಾಸದ ಮೊದಲ ದಿನವಾದ ಬುಧವಾರ ಜಂಬುಸಾರ್‌ನಲ್ಲಿ ಮಾತನಾಡಿದರು.
“ಸಚಿವ ಜೇಟಿÉ ನವದೆಹಲಿಯ ತಮ್ಮ ಕಚೇರಿಯಲ್ಲಿ ಕುಳಿತು ವಿದೇಶಿಯರು ನೀಡುವ ವರದಿಯನ್ನು ನಂಬುತ್ತಾರೆ. ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಅವರು ಪ್ರಮಾಣಪತ್ರ ನೀಡಬೇಕಾಗಿಲ್ಲ. ಐದರಿಂದ ಹತ್ತು ನಿಮಿಷಗಳ ಕಾಲ ಜೇಟಿÉ ಸಣ್ಣ ಉದ್ದಿಮೆದಾರರನ್ನು ಭೇಟಿ ಯಾದರೆ ಜಿಎಸ್‌ಟಿ, ನೋಟು ಅಮಾನ್ಯದಿಂದ ಏನು ಸಮಸ್ಯೆಯಾಗಿದೆ ಎನ್ನುವುದು ಅವರಿಗೇ ತಿಳಿಯುತ್ತದೆ. ಹೂಡಿಕೆಯ ವಾತಾವರಣ ನಮ್ಮಲ್ಲಿ ಇಲ್ಲ ಎಂದು ದೇಶಕ್ಕೆ ದೇಶವೇ ಕೂಗಿ ಹೇಳುತ್ತಿದೆ. ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದ ಆ ವಾತಾವರಣವನ್ನೇ ನಷ್ಟ ಮಾಡಲಾಗಿದೆ’ ಎಂದು ದೂರಿದರು.
ಪ್ರಧಾನಿ ವಿಫಲ: ಕಪ್ಪುಹಣ ಪೂರ್ಣ ಪ್ರಮಾಣದಲ್ಲಿ ನಗದು, ಚಿನ್ನ, ಜಮೀನು ಮತ್ತು ಸ್ವಿಸ್ ಬ್ಯಾಂಕ್‌ನಲ್ಲಿದೆ ಎಂದು ಪ್ರಧಾನಿ ಮೋದಿ ತಪ್ಪಾಗಿ ತಿಳಿದುಕೊಂಡಿದ್ದಾರೆ. ಕಳೆದ ವರ್ಷದ ನವೆಂಬರ್ 8ರಂದು ಮಾಡಿದ ಘೋಷಣೆಯಿಂದ ಅಂಗಡಿ ಮಾಲೀಕರು, ಸಣ್ಣ ಉದ್ದಿಮೆದಾರರು, ರೈತರಿಗೆ ತೊಂದರೆಯಾಗಿದೆ ಎಂದು ರಾಹುಲ್ ಹೇಳಿ ದ್ದಾರೆ. ಅವರು ಕಳ್ಳರಲ್ಲ ಮತ್ತು ಯಾವುದೇ ಕಪ್ಪು ಹಣ ಹೊಂದಿಲ್ಲ ಎಂದರು. ಮೂರು ವರ್ಷ ಗಳಿಂದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ ದೇಶದ ಎಷ್ಟು ಮಂದಿಗೆ ಜೈಲು ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು. ಗುಜರಾತ್‌ನಲ್ಲಿ ಯಾವುದೇ ಸಮುದಾಯ ಸಂತೋಷದಿಂದ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಪ್ರತಿಪಾದಿಸಿದರು.
ರಾಹುಲ್ ಜತೆ ಭೇಟಿ ಇಲ್ಲ : ಹಾರ್ದಿಕ್
ಪಟೇಲ್ ಸಮುದಾಯಕ್ಕೆ ಮೀಸಲು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಹಾರ್ದಿಕ್ ಪಟೇಲ್ ನಡುವೆ ಮಾತುಕತೆ ಅಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸುವ ವಿಚಾರ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳ ವರದಿಗಳು ಆಧಾರ ರಹಿತ ಎಂದು ಅವರು ಹೇಳಿದ್ದಾರೆ.