ಗುಜರಾತ್: ಚಲಿಸುತ್ತಿದ್ದ ಬಸ್ಸಿನೊಳಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಕೊಲೆಗೈದು ಬಳಿಕ ಆರೋಪಿ ಪತಿ ತನ್ನ ಪತ್ನಿಯ ಶವದ ಜೊತೆ ಪೊಲೀಸರು ಬರುವವರೆಗೆ ಕುಳಿತ್ತಿದ್ದ ಭೀಭತ್ಸ ಘಟನೆ ಗುಜರಾತ್ ನ ಛೋಟಾ ಉದೈಪುರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮಂಗುಬೆನ್ ಎನ್ನಲಾಗಿದ್ದು, ಈಕೆ ಗುಜರಾತ್ ಸರಕಾರಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದರು.
ಮಂಗಳವಾರ ಘಟನೆ ನಡೆದಿದ್ದು, ಕೊಲೆಗೈದ ಆರೋಪಿಯನ್ನು ಅಮೃತ್ ರಥ್ವಾ ಎಂದು ಗುರುತಿಸಲಾಗಿದೆ, ಅಸಲಿಗೆ ಈತ ಸೂರತ್ ನ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ.
ಅಮೃತ್ ರಥ್ವಾ ಹಾಗೂ ಮಂಗುಬೆನ್ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ ಅಲ್ಲದೆ ಪತ್ನಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತ್ನಿಯನ್ನು ಕೊಲೆಮಾಡುವ ಪ್ಲಾನ್ ಮಾಡಿದ್ದಾನೆ. ಅದರಂತೆ ಪತ್ನಿ ಕರ್ತವ್ಯ ನಿರ್ವಹಿಸುವ ಬಸ್ಸಿಗೆ ಪತಿ ಹತ್ತಿದ್ದಾನೆ ಕೆಲವು ದೂರ ಪ್ರಯಾಣಿಸಿದ ಬಳಿಕ ಪತ್ನಿಯನ್ನು ಗಮನಿಸಿದ್ದಾನೆ ಈ ವೇಳೆ ಪತ್ನಿ ನಿರ್ವಾಹಕರು ಕೂರುವ ಸೀಟಿನಲ್ಲಿ ಇರುವುದನ್ನು ಕಂಡ ಪತಿ ಆಕೆಯ ಬಳಿ ಹೋಗಿ ಕತ್ತು ಸೀಳಿ ಕೊಲೆಗೈದಿದ್ದಾನೆ, ಅಲ್ಲದೆ ಈ ಘಟನೆಯನ್ನು ಬಸ್ಸಿನ ಇತರ ಪ್ರಯಾಣಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಬರುವವರೆಗೂ ಪತಿ ತನ್ನ ಪತ್ನಿಯ ಜೊತೆ ಬಸ್ಸಿನಲ್ಲೇ ಕೂತಿದ್ದು, ಬಳಿಕ ಪೊಲೀಸರ ವಿಚಾರಣೆ ವೇಳೆ ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆಕೆಯ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಅಯೋಧ್ಯೆ ಮಾದರಿಯಲ್ಲಿ ರಾಮನಗರದ ಬೆಟ್ಟ ಅಭಿವೃದ್ಧಿ: ಸಿಎಂಗೆ ಅಶ್ವತ್ಥನಾರಾಯಣ ಪತ್ರ