Advertisement
ಘಟನೆಗೆ ಸಂಬಂಧಿಸಿ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ರಾಜ್‌ಕೋಟ್‌ನ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಭಗತ್ ಸಿಂಗ್ ಗಾರ್ಡನ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದ್ದು ಜ್ಯೋತಿಬೆನ್ ಗೋಸಾಯಿ(48) ಮೃತ ಮಹಿಳೆಯಾಗಿದ್ದು. ನೀಲೇಶ್ ಗೋಸಾಯಿ ಆರೋಪಿಯಾಗಿದ್ದಾನೆ. ಅಪರಾಧ ಎಸಗಿದ ಬಳಿಕ ತನ್ನ ತಾಯಿಯ ಮೃತದೇಹದ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ “ಕ್ಷಮಿಸಿ ತಾಯಿ ನಾನು ನಿನ್ನನ್ನು ಕೊಲ್ಲುತ್ತಿದ್ದೇನೆ, ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ, ಓಂ ಶಾಂತಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಾಕಿದ್ದಾನೆ. ಮತ್ತೊಂದು ಪೋಸ್ಟ್‌ನಲ್ಲಿ, “ನಾನು ನನ್ನ ತಾಯಿಯನ್ನು ಕೊಲ್ಲುತ್ತಿದ್ದೇನೆ, ನನ್ನ ಜೀವನ ಕಳೆದುಹೋಗಿದೆ, ಕ್ಷಮಿಸಿ ಅಮ್ಮ, ಓಂ ಶಾಂತಿ, ಮಿಸ್ ಯೂ ಅಮ್ಮ ” ಎಂದು ಬರೆದುಕೊಂಡಿದ್ದಾನೆ.
Related Articles
Advertisement
ಜ್ಯೋತಿಬೆನ್ ಅವರು ಹಲವು ವರ್ಷಗಳಿಂದ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಇದು ತಾಯಿ ಮತ್ತು ಮಗನ ನಡುವೆ ಆಗಾಗ ಜಗಳಕ್ಕೆ ಕಾರಣವಾಗುತ್ತಿತ್ತು ಎನ್ನಲಾಗಿದೆ.