Advertisement

ಕರ್ನಾಟಕದಲ್ಲೂ ಗುಜರಾತ್‌ ಪರಿಸ್ಥಿತಿ: ಈಶ್ವರಪ್ಪ

07:30 AM Dec 21, 2017 | Team Udayavani |

ಶಿವಮೊಗ್ಗ: ಕಾಂಗ್ರೆಸ್‌ ಪಕ್ಷವು ಜಾತಿ ಹಾಗೂ ಧರ್ಮವನ್ನು ಒಡೆದು ರಾಜಕಾರಣ ಮಾಡಲು ಮುಂದಾದರೆ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಾದ ಗತಿ ಕರ್ನಾಟಕದಲ್ಲೂ ಆಗುತ್ತದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಎಚ್ಚರಿಕೆ ನೀಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಜಾತಿ ಹಾಗೂ ಧರ್ಮ ಒಡೆಯುವ ಪ್ರಯತ್ನ ನಡೆಸಿತ್ತು. ಮತ ವಿಭಜನೆಯ ಮೂಲಕ ಗೆಲುವು ಸಾಧಿಸುವ ಪ್ರಯತ್ನ ನಡೆಸಿತು. ಆದರೆ, ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಎರಡೂ ರಾಜ್ಯದಲ್ಲಿ ಕಾಂಗ್ರೆಸ್‌ ಮಣ್ಣು ಮುಕ್ಕಿದೆ. ಅದೇ ಪರಿಸ್ಥಿತಿ ಕರ್ನಾಟಕದಲ್ಲೂ ಪುನರಾವರ್ತನೆಯಾಗುತ್ತದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಹಿಂದೆ ಮಸೀದಿ ಹೊರತುಪಡಿಸಿ ದೇವಸ್ಥಾನಗಳಿಗೆ ಭೇಟಿ ನೀಡಿದ ಉದಾಹರಣೆ ಇರಲಿಲ್ಲ. ಕೇವಲ ಮುಸಲಾ¾ನರ ಪರ ಹೋದರೆ ಆಗುವುದಿಲ್ಲ ಎಂಬುದು ಇದೀಗ ಅರಿವಾದಂತಿದೆ. ಹೀಗಾಗಿ ದೇವಸ್ಥಾನಗಳಿಗೆ ಭೇಟಿ ನೀಡತೊಡಗಿದ್ದಾರೆ. ಪರಿಣಾಮ ಗುಜರಾತ್‌ನಲ್ಲಿ 77 ಸ್ಥಾನಗಳನ್ನು ಕಾಂಗ್ರೆಸ್‌ ಗಳಿಸಿದೆ. ಒಂದೆರಡು ತಿಂಗಳು ಮೊದಲೇ ದೇವಸ್ಥಾನಗಳಿಗೆ ಭೇಟಿ ನೀಡುವ ಸಂಪ್ರದಾಯ ಬೆಳೆಸಿಕೊಂಡಿದ್ದರೆ ಇನ್ನು ಕೆಲವು ಸ್ಥಾನ ದೊರಕುತ್ತಿತ್ತೇನೋ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next