Advertisement

Olympics: 2036ರ ಒಲಿಂಪಿಕ್ಸ್‌ ಆಯೋಜನೆಗೆ ಸಿದ್ಧತೆ ಆರಂಭಿಸಿದೆ ಗುಜರಾತ್‌!

11:52 PM Oct 17, 2023 | Team Udayavani |

ಅಹ್ಮದಾಬಾದ್‌: ಭಾರತ 2036ರ ಒಲಿಂಪಿಕ್ಸ್‌ ಆಯೋಜನೆಗೆ ಬಿಡ್‌ ಸಲ್ಲಿಸಲಿದೆ ಎಂದು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಘೋಷಣೆ ಮಾಡಿದ್ದರು. ವಿಶೇಷವೇನು ಗೊತ್ತೇ? ಗುಜರಾತ್‌ ಸರಕಾರ ಈಗಾ ಗಲೇ ಒಲಿಂಪಿಕ್ಸ್‌ ಆಯೋಜನೆಗೆ ಸಿದ್ಧತೆ ಶುರು ಮಾಡಿಕೊಂಡಿರುವುದು!

Advertisement

ಭಾರತಕ್ಕೆ ಈ ಮಹೋನ್ನತ ಕ್ರೀಡಾ ಕೂಟದ ಆತಿಥ್ಯದ ಅವಕಾಶ ಸಿಗು ತ್ತದೋ, ಇಲ್ಲವೋ ಎಂಬುದು ಖಚಿತ ವಾಗಲಿಕ್ಕೇ ಕೆಲವು ವರ್ಷ ಬೇಕು. ಅಷ್ಟರಲ್ಲಿ ಗುಜರಾತ್‌ ಸರಕಾರ ತೆರೆ ಮರೆಯಲ್ಲಿ ಸಿದ್ಧತೆ ಶುರು ಮಾಡಿದೆ, ಆದರೆ ಅದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದು ವರದಿಯಾಗಿದೆ.

ಒಲಿಂಪಿಕ್ಸ್‌ ಆಯೋಜನೆ ಮಾಡುವು ದೆಂದರೆ ಸುಲಭದ ಮಾತಲ್ಲ. ಇಲ್ಲಿ ಬರೀ ಹಣವೊಂದಿದ್ದರೆ ಸಾಕಾಗದು. ಕತೃತ್ವ ಶಕ್ತಿ, ಮೂಲಭೂತ ಸೌಕರ್ಯಗಳು ಸಕಾಲದಲ್ಲಿ ನಿರ್ಮಾಣವಾಗಬೇಕು. ಈಗಲೇ ಪ್ರಯತ್ನ ಶುರು ಮಾಡಿ ದರೆ ಮಾತ್ರ ಗುರಿಮುಟ್ಟಲು ಸಾಧ್ಯ. ಯೋಜನೆ ಯಲ್ಲಿ ತುಸು ಹೆಚ್ಚುಕಡಿಮೆಯಾದರೂ ದೇಶದ ಗೌರವಕ್ಕೆ ಧಕ್ಕೆಯಾಗುತ್ತದೆ.

ಏನೇನು ಮಾಡಲಾಗುತ್ತಿದೆ?
ಸದ್ಯ ದೇಶದಲ್ಲಿ ಒಲಿಂಪಿಕ್ಸ್‌ ಆಯೋ ಜನೆಗೆ ಬೇಕಾದ ಸಾಮರ್ಥ್ಯವಿರುವ ನಗರ ಅಹ್ಮಬಾದಾದ್‌ ಮಾತ್ರ. ಇಲ್ಲಿ ವಿಶ್ವದಲ್ಲೇ ಬೃಹತ್‌ ಕ್ರಿಕೆಟ್‌ ಮೈದಾ ನವಿದೆ. ಜತೆಗೆ ಟ್ರಾಫಿಕ್‌ ಒತ್ತಡ, ಜನಸಂಖ್ಯೆ, ಮಾಲಿನ್ಯ ಕಡಿಮೆಯಿರುವ ನಗರವೂ ಹೌದು. ಹೀಗಾಗಿ ಉಳಿದೆಲ್ಲ ಜನಪ್ರಿಯ ನಗರಿಗಳಿಗಿಂತ ಇದೇ ಸೂಕ್ತ ಎನ್ನಲಾಗುತ್ತಿದೆ. ಜತೆಗೆ ಸದ್ಯದ ಮಟ್ಟಿಗೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರು ವುದರಿಂದ ಅಹ್ಮದಾಬಾದ್‌ ಆಯ್ಕೆಯಾ ಗುವುದರಲ್ಲಿ ಅನುಮಾನವೇ ಇಲ್ಲ.

ಸಿದ್ಧತೆಗೆ ಸೂಚನೆ
ಗುಜರಾತ್‌ ಸರಕಾರ ಪ್ರಸ್ತುತ ಅಹ್ಮ ದಾಬಾದ್‌ ಮತ್ತು ಸಮೀಪದ ಗಾಂಧಿ ನಗರ ನಗರಪಾಲಿಕೆಗಳಿಗೆ ಸಿದ್ಧತೆ ಮಾಡಿ ಕೊಳ್ಳಲು ತಿಳಿಸಿದೆ. ಹಾಗೆಯೇ ಗುಜ ರಾತ್‌ ಒಲಿಂಪಿಕ್ಸ್‌ ಮತ್ತು ಮೂಲಭೂತ ಸೌಕರ್ಯ ನಿಗಮ ರಚನೆಯಾಗಿದೆ. ಅಹ್ಮದಾಬಾದ್‌ನಲ್ಲಿರುವ ಸರ್ದಾರ್‌ ಪಟೇಲ್‌ ಕ್ರೀಡಾ ಸಂಕೀರ್ಣವನ್ನೇ ಕೇಂದ್ರವಾಗಿಟ್ಟುಕೊಂಡು ಎಲ್ಲ ಸಿದ್ಧತೆ ಮಾಡಲಾಗುತ್ತದೆ. ಈ ಸಂಕೀರ್ಣದಲ್ಲೇ ಮೋದಿ ಮೈದಾನವಿರುವುದು. ಈ ಸರ್ದಾರ್‌ ಸಂಕೀರ್ಣದಲ್ಲೇ 20 ಮುಖ್ಯ ಕ್ರೀಡೆಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ. ರಾಜ್ಯಾದ್ಯಂತ 33 ಕ್ರೀಡಾ ಕೇಂದ್ರಗಳನ್ನು ಗುರುತಿಸಲಾಗಿದೆ. ಶಿವರಾಜಪುರ, ಏಕತಾ ಪ್ರತಿಮಾ ಕೇಂದ್ರ, ಸೂರತ್‌ನ ಕೆಲಭಾಗಗಳನ್ನು ಜಲಕ್ರೀಡೆಗಳಿಗಾಗಿ ಗುರುತಿಸಲಾಗಿದೆ ಎನ್ನಲಾಗಿದೆ. ಈಗಾಗಲೇ ಅಹ್ಮದಾಬಾದ್‌-ಗಾಂಧಿ ನಗರದಲ್ಲಿ ನಾಲ್ಕು ಜಾಗಗಳನ್ನು ಗುರು ತಿಸಿ ನಿರ್ಮಾಣ ಕಾರ್ಯ ಆರಂಭಿಸ ಲಾಗಿದೆ. ಮುಖ್ಯವಾಗಿ ಕ್ರೀಡಾಗ್ರಾಮ ನಿರ್ಮಾಣ ದೊಡ್ಡ ಕೆಲಸ. ಮೋದಿ ಮೈದಾನಕ್ಕೆ ಸನಿಹವಾಗಿಯೇ ಕ್ರೀಡಾ ಗ್ರಾಮವಿರುತ್ತದೆ ಎನ್ನಲಾಗಿದೆ.

Advertisement

ಇನ್ನೂ ಮೂರು ವರ್ಷ ಬೇಕು
2024ರ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ, 2028ರ ಕೂಟ ಲಾಸ್‌ ಏಂಜಲಿಸ್‌ನಲ್ಲಿ, 2032ರ ಪಂದ್ಯಾವಳಿ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. 2036ರ ಆತಿಥ್ಯ ಪಡೆಯಲು ಭಾರತ ಇನ್ನೂ ವರ್ಷ ಕಾಯಬೇಕು. ಅಂದರೆ ಅಲ್ಲಿಯವರೆಗೆ ಹಲವು ಸುತ್ತಿನ ಮಾತುಕತೆಗಳು, ಸಭೆಗಳು ನಡೆಯಲಿವೆ. ಹಲವು ದೇಶಗಳು ಪೈಪೋಟಿ ನಡೆಸಲಿವೆ. ಈ ಎಲ್ಲ ಕಡೆ ಭಾರತ ಸಮರ್ಥವಾಗಿ ತನ್ನ ಆತಿಥ್ಯದ ಹಕ್ಕು ಮಂಡಿಸಬೇಕಾಗಿದೆ.

ಮೂರು ದೇಶಗಳಿಂದ ಪೈಪೋಟಿ
ಭಾರತ ಒಲಿಂಪಿಕ್ಸ್‌ ಆಯೋಜಿಸುವುದಕ್ಕೆ ಪೋಲೆಂಡ್‌, ಇಂಡೋನೇಷ್ಯಾ, ಮೆಕ್ಸಿಕೊ ಅಡ್ಡಿಯಾಗಿವೆ. 2036ರ ಒಲಿಂಪಿಕ್ಸ್‌ ಆತಿಥ್ಯ ಪಡೆದುಕೊಳ್ಳಲು ಈ ದೇಶಗಳೂ ಸಿದ್ಧವಾಗಿವೆ. ಇವನ್ನೆಲ್ಲ ಮೀರಿ, ಹಲವು ಸುತ್ತಿನ ಮಾತುಕತೆಗಳು, ನೂರಾರು ಸಭೆಗಳ ಅನಂತರ ಭಾರತಕ್ಕೆ ಆತಿಥ್ಯ ಸಿಗುವುದು ಖಚಿತವಾಗಲಿದೆ. ಸದ್ಯದ ಮಟ್ಟಿಗೆ ಭಾರತಕ್ಕೆ ಪೈಪೋಟಿಯೊಡ್ಡುವ ಸಾಮರ್ಥ್ಯ ಈ ದೇಶಗಳಿಗಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next