Advertisement

Gujarat ಏಷ್ಯಾದ ಶ್ರೀಮಂತ ಹಳ್ಳಿ: ಠೇವಣಿಯೇ 7 ಸಾವಿರ ಕೋಟಿ ರೂ.!

02:15 AM Aug 23, 2024 | Team Udayavani |

ಅಹ್ಮದಾಬಾದ್‌: ಶ್ರೀಮಂತಿಕೆಗೆ ಹೆಸರು ವಾಸಿ ಯಾಗಿರುವ ಗುಜರಾತ್‌ ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿ ಯನ್ನೂ ಹೊಂದಿದೆ. ಕಛ್ ನಲ್ಲಿರುವ ಮಾಧಾಪರ್‌ ಗ್ರಾಮವು ಏಷ್ಯಾದ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭುಜ್‌ನ ಹೊರ ವಲಯ ದಲ್ಲಿರುವ ಈ ಗ್ರಾಮದ ಜನರು 7 ಸಾವಿರ ಕೋಟಿ ರೂ. ನಿರಖು ಠೇವಣಿ (ಎಫ್.ಡಿ.) ಇರಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಸರಿ ಸುಮಾರು 15-20 ಲಕ್ಷ ರೂ. ಠೇವಣಿ ಹೊಂದಿದ್ದಾನೆ.

Advertisement

ವಿದೇಶದಲ್ಲೇ ಹೆಚ್ಚು ನೆಲೆಸಿರುವ ಗ್ರಾಮಸ್ಥರು
ಪಟೇಲ್‌ ಸಮುದಾಯದವರೇ ಹೆಚ್ಚಾಗಿ ರುವ ಈ ಗ್ರಾಮದಲ್ಲಿ ಸುಮಾರು 32 ಸಾವಿರದಷ್ಟು ಜನಸಂಖ್ಯೆಯಿದೆ. ಇಲ್ಲಿಯ ಗ್ರಾಮಸ್ಥರು ಸಾಮಾನ್ಯ ವಾಗಿ ವ್ಯಾಪಾರವನ್ನೇ ಅವಲಂಬಿ ಸಿದ್ದು, ಬಹುತೇಕರು ವಿದೇಶ ದಲ್ಲಿ ನೆಲೆಸಿದ್ದಾರೆ. ವಿದೇಶ ದಲ್ಲಿದ್ದರೂ ತಮ್ಮ ತವರು ಮರೆಯದ ಇಲ್ಲಿನ ಜನ ಗ್ರಾಮದಲ್ಲಿರುವ ಬ್ಯಾಂಕ್‌ಗಳಲ್ಲೇ ತಮ್ಮ ಹಣವನ್ನು ಠೇವಣಿ ಇರಿಸುತ್ತಾರೆ. 20 ಸಾವಿರದಷ್ಟು ಮನೆಗಳಿರುವ ಈ ಗ್ರಾಮದ 1,200 ಕುಟುಂಬಗಳು ವಿದೇಶದಲ್ಲಿದ್ದು, ಹೆಚ್ಚಾಗಿ ಮಧ್ಯ ಆಫ್ರಿಕಾದ ದೇಶಗಳಲ್ಲಿ ನೆಲೆಸಿ ದ್ದಾರೆ. ಗುಜರಾತಿ ಉದ್ಯಮಿಗಳು ಸಾಮಾನ್ಯ ವಾಗಿ ಆಫ್ರಿಕಾದ ಕಟ್ಟಡ ನಿರ್ಮಾಣದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದಲ್ಲದೆ ಇಂಗ್ಲೆಂಡ್‌, ಆಸ್ಟ್ರೇಲಿಯಾ, ಅಮೆರಿಕ ಹಾಗೂ ನ್ಯೂಜಿಲೆಂಡ್‌ನ‌ಲ್ಲೂ ಅನೇಕರು ನೆಲೆಸಿದ್ದಾರೆ.

ಗ್ರಾಮವು ಮೂಲಸೌಕರ್ಯ ದಲ್ಲೂ ಉತ್ತಮ ವಾಗಿದ್ದು, ನೀರು, ನೈರ್ಮಲ್ಯ ಹಾಗೂ ಉತ್ತಮ ರಸ್ತೆ ಸಂಪರ್ಕವನ್ನೂ ಹೊಂದಿದೆ. ಗ್ರಾಮವು ಸುಸಜ್ಜಿತ ಬಂಗಲೆಗಳು, ಸರಕಾರಿ ಹಾಗೂ ಖಾಸಗಿ ಶಾಲೆಗಳು ಹಾಗೂ ದೇವಸ್ಥಾನವನ್ನು ಒಳಗೊಂಡಿದೆ.

ಗ್ರಾಮವೊಂದಕ್ಕೆ 17 ಬ್ಯಾಂಕ್‌ಗಳು
ಮಾಧಾಪರ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಎಚ್‌ಡಿಎಫ್ಸಿ, ಎಸ್‌ಬಿಐ, ಪಿಎನ್‌ಬಿ, ಆಕ್ಸಿಸ್‌, ಐಸಿಐಸಿಐ ಸಹಿತ 17 ಬ್ಯಾಂಕ್‌ಗಳ ಶಾಖೆಗಳು ಇವೆ. ಇನ್ನೂ ಪ್ರಮುಖ ಬ್ಯಾಂಕ್‌ಗಳು ಇಲ್ಲಿ ಶಾಖೆ ತೆರೆಯಲು ತಯಾರಾಗಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next