Advertisement

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

09:25 PM Oct 16, 2021 | Team Udayavani |

ಅಹಮದಾಬಾದ್‌: ಉತ್ತರ ಪ್ರದೇಶದ ಅಯೋಧ್ಯೆ ರಾಮಜನ್ಮಭೂಮಿಗೆ ಶ್ರೀರಾಮನ ದರ್ಶನಕ್ಕೆ ತೆರಳುವ ಬುಡಕಟ್ಟು ಜನಾಂಗದ ಯಾತ್ರಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಗುಜರಾತ್‌ ಸರ್ಕಾರ ಶನಿವಾರ ಘೋಷಿಸಿದೆ.

Advertisement

ಬುಡಕಟ್ಟು ಜನಾಂಗ ಹೆಚ್ಚಿರುವ ದಂಗ್ಸ್‌ ಜಿಲ್ಲೆಯ ಸುಬೀರ್‌ ಗ್ರಾಮದ ಶಬರಿ ಧಾಮ್‌ನಲ್ಲಿ ಶುಕ್ರವಾರ ನಡೆದ ದಸರಾ ಕಾರ್ಯಕ್ರಮದಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ಪೂರ್ಣೇಶ್‌ ಮೋದಿ ಈ ಘೋಷಣೆ ಮಾಡಿದ್ದರು.

ಬುಡಕಟ್ಟು ಜನಾಂಗದವರು ಶಬರಿಯ ವಂಶಸ್ಥರು. ಆ ಹಿನ್ನೆಲೆಯಲ್ಲಿ ಅವರಿಗೆ ಅಯೋಧ್ಯೆ ಯಾತ್ರೆಗೆ ಭತ್ಯೆ ನೀಡಲಾಗುವುದು ಎಂದಿದ್ದರು. ಶನಿವಾರ ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದೆ.

ಇದನ್ನೂ ಓದಿ:ಮೋಸ ಮಾಡಿದವನನ್ನು ಗಲ್ಲಿಗೇರಿಸಿ: ಡೆತ್ ನೋಟ್ ಬರೆದು ನೇಣಿಗೆ ಶರಣಾದ ವಿದ್ಯಾರ್ಥಿನಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next