Advertisement

Gandhinagar; ನದಿಗೆ ಸ್ನಾನಕ್ಕೆ ಇಳಿದಿದ್ದ 8 ಮಂದಿ ದಾರುಣ ಮೃ*ತ್ಯು

08:35 PM Sep 13, 2024 | Team Udayavani |

ಗಾಂಧಿನಗರ: ಗುಜರಾತ್‌ನಲ್ಲಿ ಮೆಶ್ವೋ ನದಿಯಲ್ಲಿ ಶುಕ್ರವಾರ(ಸೆ 13) ಸಂಜೆ ಸ್ನಾನ ಮಾಡುತ್ತಿದ್ದ ಕನಿಷ್ಠ 8 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ದೆಹಗಾಮ್ ತಾಲೂಕಿನ ವಾಸ್ನಾ ಸೊಗ್ತಿ ಗ್ರಾಮದ ನಿವಾಸಿಗಳು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬಿ.ಬಿ. ಮೋದಿಯಾ ತಿಳಿಸಿದ್ದಾರೆ.

Advertisement

ಶೋಧ ಮತ್ತು ರಕ್ಷಣ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ತಾನು ಸ್ಥಳಕ್ಕೆ ತಲುಪಿದ್ದೇನೆ ಎಂದು ಮೋದಿಯಾ ಹೇಳಿದ್ದಾರೆ.

“ಈಗಾಗಲೇ ನಾವು ನದಿಯಿಂದ ಎಂಟು ಶವಗಳನ್ನು ಹೊರತೆಗೆದಿದ್ದೇವೆ. ಎಷ್ಟು ಮಂದಿ ನದಿಗೆ ಇಳಿದಿದ್ದರು ಎಂಬುದು ಇನ್ನೂ ಅಸ್ಪಷ್ಟವಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಮೃತರು ಸ್ಥಳೀಯರಾಗಿದ್ದರೂ ಆಳವನ್ನು ತಪ್ಪಾಗಿ ನಿರ್ಣಯಿಸಿರಬಹುದು”ಎಂದು ಹೇಳಿದ್ದಾರೆ. ಅವಘಡ ನಡೆದ ಸ್ವಲ್ಪ ದೂರದಲ್ಲಿ ಚೆಕ್ ಡ್ಯಾಂ ನಿರ್ಮಾಣ ಹಂತದಲ್ಲಿದ್ದು ನೀರಿನ ಮಟ್ಟ ಇತ್ತೀಚೆಗೆ ಏರಿಕೆಯಾಗಿತ್ತು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next