Advertisement
ಭಜನೆ, ಸಂಕೀರ್ತನೆ, ಮಾತೃ ವಂದನೆ ಮತ್ತು ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಗಾಯತ್ರಿ ಪರಿವಾರ ಬರೋಡದ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಬೆಳಗ್ಗೆ ಗುರು ಪಾದುಕಾ ಪೂಜೆಯಿಂದ ಕಾರ್ಯಕ್ರಮ ಪ್ರಾರಂಭಗೊಂಡಿತು. ಇದೇ ಸಂದರ್ಭದಲ್ಲಿ ನಡೆದ ಮಾತೃ ವಂದನೆ ಕಾರ್ಯಕ್ರಮದಲ್ಲಿ ಕಿರಿಯರೆಲ್ಲರು ತಮ್ಮ ಮಾತಾಪಿತರ ಪಾದಪೂಜೆ ನಡೆಸಿ ಆಶೀರ್ವಾದ ಪಡೆದುಕೊಂಡರು. ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ ಬೆಳ್ಮಣ್ಣು ಬರೋಡ ಇವರ ಮುಂದಾಳತ್ವ ಹಾಗೂ ಮಾರ್ಗದರ್ಶನದೊಂದಿಗೆ ಜಿಬಿಎಸ್ ಅಧ್ಯಕ್ಷ ವಿಶ್ವನಾಥ್ ಜಿ. ಪೂಜಾರಿ ಬಾಡೋìಲಿ ಸೂರತ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
Related Articles
Advertisement
2020-2021ನೇ ಶೈಕ್ಷಣಿಕ ಸಾಲಿನ ವಿವಿಧ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ವಿಶ್ವನಾಥ್ ಜಿ. ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿವೇತನದ ಬಗ್ಗೆ ಲಕ್ಷ್ಮಣ್ ಪೂಜಾರಿ ವಿವರ ನೀಡಿದರು. ರೇವತಿ ಪೂಜಾರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ನೆರವು ನೀಡಿದ ಸರ್ವರನ್ನು ಜತೆ ಕೋಶಾಧಿಕಾರಿ ರವಿ ಸಾಲ್ಯಾನ್ ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ವಾಸು ವಿ. ಸುವರ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಗುಜರಾತ್ ಬಿಲ್ಲವ ಸಂಘದ ವಾಪಿ, ಅಂಕಲೇಶ್ವರ್, ಸೂರತ್, ಬರೋಡ ಹಾಗೂ ಅಹ್ಮದಾಬಾದ್ ಶಾಖೆಗಳ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಹಾ ಪ್ರಸಾದ ಅನ್ನಸಂತರ್ಪಣೆ ಜರಗಿತು.