Advertisement

ಗುಜರಾತ್‌ನಲ್ಲಿ ಸಿಮೆಂಟ್‌ ಟ್ರಕ್‌ ಮಗುಚಿ 19 ಮಂದಿಯ ದಾರುಣ ಸಾವು

10:55 AM May 19, 2018 | udayavani editorial |

ಗುಜರಾತ್‌ : ಇಂದು ಶನಿವಾರ ಭಾವನಗರ – ಅಹ್ಮದಾಬಾದ್‌ ಹೆದ್ದಾರಿಯಲ್ಲಿ ಸಿಮೆಂಟ್‌ ಚೀಲಗಳು ತುಂಬಿದ್ದ ಟ್ರಕ್‌ ಅಡಿಮೇಲಾಗಿ ಬಿದ್ದು ಸಂಭವಿಸಿದ ಭೀಕರ  ಅಪಘಾತದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟರು ಮತ್ತು ಇತರ ಮಂದಿ ಗಂಭೀರವಾಗಿ ಗಾಯಗೊಂಡರು.

Advertisement

ಆರಂಭಿಕ ವರದಿಗಳ ಪ್ರಕಾರ ಈ ದುರ್ಘ‌ಟನೆಯು ಭಾವನಗರದಲ್ಲಿನ ಭಾವಲ್ಯಾಲಿ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ನಡೆದಿರವುದಾಗಿ ತಿಳಿದು ಬಂದಿದೆ.

ಸ್ಥಳೀಯ ಪೊಲೀಸ್‌ ಮತ್ತು ಜಿಲ್ಲಾಡಳಿತಯ ಹಿರಿಯ ಅಧಿಕಾರಿಗಳು ದುರ್ಘ‌ಟನೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಗಾಯಾಳುಗಳನ್ನು ಸಮೀಪ ಆಸ್ಪತ್ರೆಗೆ ಸೇರಿಸಲಾಗಿದೆ.

ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next