Advertisement
ರೈತನ ಮಗ ಇಸುದನ್:
Related Articles
Advertisement
ಇಸುದನ್ ಗಢ್ವಿ ಈ ಮೊದಲು ಟಿವಿಯಲ್ಲಿ ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ್ದರು. ವಿಟಿವಿ ನ್ಯೂಸ್ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ವಿಟಿವಿ ಗುಜರಾತಿಯ ಮಹಾಮಂಥನ್ ಎಂಬ ಕಾರ್ಯಕ್ರಮದ ನಿರೂಪಕರಾಗಿ ಇಸುದನ್ ಜನಪ್ರಿಯರಾಗಿದ್ದರು. ಇದೀಗ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ್ದ ಗಢ್ವಿ ಅವರು ದೂರದರ್ಶನದ ಜನಪ್ರಿಯ “ಯೋಜನಾ” ಎಂಬ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಹೆಸರು ಪಡೆದಿದ್ದರು. 2007ರಿಂದ 2011ರವರೆಗೆ ಈಟಿವಿ ಗುಜರಾತಿ ನ್ಯೂಸ್ ಚಾನೆಲ್ ನಲ್ಲಿ ಪೋರಬಂದರ್ ನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.
ನಂತರ ಈ ಶೋ ಮೂಲಕ ಗಢ್ವಿ ಅವರು ಗುಜರಾತ್ ನ ಡಾಂಗ್ ಮತ್ತು ಕಪರಾಡಾ ತಾಲೂಕುಗಳಲ್ಲಿನ ಸುಮಾರು 150 ಕೋಟಿ ರೂಪಾಯಿ ಮೊತ್ತದ ಅಕ್ರಮ ಅರಣ್ಯ ನಾಶದ ಹಗರಣವನ್ನು ಬಯಲಿಗೆಳೆದಿದ್ದರು. ಅಷ್ಟೇ ಅಲ್ಲ ಅಂದು ಆರೋಪಿಗಳ ವಿರುದ್ಧ ಗುಜರಾತ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು. ಈ ಘಟನೆಯ ಬಳಿಕ ಗಢ್ವಿಗೆ ಇನ್ನಷ್ಟು ಹೆಸರು ಬಂದಿದ್ದು, ಜೊತೆ ನಿರ್ಭೀತ ಪತ್ರಕರ್ತ ಎಂಬ ಹಣೆಪಟ್ಟಿಯನ್ನೂ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.