Advertisement
ಮೊದಲಿಗೆ ವಲಚಿ ವರ್ಣ ಹಾಡು ನವರಾಗ ಮಾಲಿಕ ಹಾಡನ್ನು ಸ್ತುತಿಸುತ್ತಾ ವಾತಾಪಿ ಗಣಪತಿಂ ಹಂಸ ಧ್ವನಿ ರಾಗದಲ್ಲಿ ಹಾಡಿ, ಪಾಹಿ ಪರ್ವತ ಆರಬಿ ರಾಗದಲ್ಲಿ ಹಾಡಿ, ಶಿವನು ಭಿಕ್ಷಕೆ ಬಂದ ಜನಪದ ಹಾಡಿಗೂ ಸ್ಯಾಕ್ಸೋಫೋನ್ ಜೊತೆ ಹಾಡಿ ತನ್ನ ಭಾವ- ತಾಳ ತುಂಬಿ ಸಂಗೀತ ಪ್ರಿಯರಿಗೆ ಹೊಸ ಲೋಕವನ್ನು ಸೃಷ್ಟಿಸಿ ಭಕ್ತಿಯಲ್ಲಿ ತಲ್ಲಿನಗೊಳಿಸಿದರು.ಕಾಣದ ಕಡಲಿಗೆ, ಓ ಚಂದ ಮಾಮ, ಜಲ್ಲೇ ಕಬ್ಬು, ಇಂಪಾದ ಹಾಡು ಮುದಗೊಳಿಸಿತು. ಇಂದು ಎನಗೆ ಗೋವಿಂದ, ತಂಬೂರಿ ಮೀಟಿದವ ಸ್ಯಾಕ್ಸೋಫೋನ್‌ನಲ್ಲಿ ಮಾತ್ರ ನುಡಿಸಿ ಡಾ|ಪಿ.ಕೆ.ದಾಮೋದರರ ಸಂಗೀತ ಯಾನ ನೋಡುತ್ತಾ ಕೇಳುತ್ತಾ ನಾವೆಲ್ಲೋ ಕಳೆದು ಹೋಗಿದ್ದೆ ಎಂಬಂತೆ ಭಾಸವಾಯಿತು ಹಾಡೋದು ಬಲು ಚೆನ್ನ. ಗೋಪಾಲ ಪಾಲಕ, ಎಂದರೋ ಮಹಾನು ಭಾವುಡು, ಸಂಪಿಗೆ ಮರದ, ಎಲ್ಲೆಲ್ಲೂ ಸಂಗೀತವೇ, ನೀಡು ಶಿವ ನೀಡದಿರು ಶಿವ, ಹೃದಯ ಸಮುದ್ರ ಕಲಕಿ, ನೀ ಸಿಗದೆ ಬಾಳೊಂದು ಬಾಳೆ, ನಂಬಿದೆ ನಿನ್ನ, ಭಾವ, ತಾಳ, ಭಕ್ತಿಗೀತೆಯಲ್ಲಿ ತಲ್ಲೀನಗೊಳಿಸಿದರು. ಸವಿತಾ ಕೋಡಂದೂರು ಇಂಪಾದ ಧ್ವನಿಯ ಜೊತೆ ಅಲೆ ಅಲೆಯಾಗಿ ತೇಲಿ ಬರುವ ಮತ್ತೂಂದು ದನಿ ಕು|ಸಿಂಚನ ಲಕ್ಷ್ಮೀ , ಅಭಿಲಾಷ್, ರಮ್ಯಾ ಜೆಡ್ಡು, ಕು|ಕಿರಣ್‌ಶ್ರೀ, ಮತ್ತು ಮನೋಜ್ಞ, ಸಂಗೀತದ ಸವಿಯನ್ನು ಉಣ ಬಡಿಸಿದರು.ಭಾಗ್ಯದ ಲಕ್ಷ್ಮೀ, ಶ್ರೀನಿವಾಸಾಯಮಂಗಲಂ ಹಾಡಿನೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು. ಹಿಮ್ಮೇಳನದಲ್ಲಿ ಕೀ ಬೋರ್ಡ್ ವಾದಕರಾಗಿ ಪ್ರಸಾದ್ ವರ್ಮ ವಿಟ್ಲ, ರಿದಮ್ ಪ್ಯಾಡ್‌ನಲ್ಲಿ ಸಚಿನ್ ಪುತ್ತೂರು, ತಬಲಾದಲ್ಲಿ ಗಿರೀಶ್ ಪೆರ್ಲ ಸಾಥ್ ನೀಡಿದರು.
Advertisement
ಸ್ಯಾಕ್ಸೋಫೋನ್ ಜೊತೆ ನಾದ ಗಾನಾಭಿಷೇಕ
10:22 PM Mar 28, 2019 | mahesh |
Advertisement
Udayavani is now on Telegram. Click here to join our channel and stay updated with the latest news.