Advertisement

ದೀರ್ಘ‌ ಚುಂಬನ ವಿಭಾಗವನ್ನೇ ರದ್ದುಪಡಿಸಿದೆ ಗಿನ್ನೆಸ್‌, ಯಾಕೆ ಗೊತ್ತಾ?

09:15 PM Jul 08, 2023 | Team Udayavani |

ನವದೆಹಲಿ: ವಿಶ್ವದ ಅತಿ ದೀರ್ಘ‌ ಚುಂಬನದ ಅವಧಿ ಎಷ್ಟಿರಬಹುದು? ನೀವು ನಂಬಿ ಬಿಡಿ, ಥಾಯ್ಲೆಂಡ್‌ನ‌ ಜೋಡಿಯೊಂದು 2013ರಲ್ಲಿ ಸತತ 58 ಗಂಟೆ, 35 ನಿಮಿಷಗಳ ಕಾಲ ಚುಂಬಿಸಿತ್ತು. 2013ರ ಫೆ.12ರಿಂದ ಶುರುವಾದ ಇದು ವ್ಯಾಲೆಂಟೈನ್ಸ್‌ ದಿನಾಚರಣೆವರೆಗೆ ಮುಂದುವರಿದಿತ್ತು. ಅವತ್ತು ಇವರ ಈ ಚುಂಬನ ಗಿನ್ನೆಸ್‌ ವಿಶ್ವದಾಖಲೆಗೆ ಸೇರ್ಪಡೆಯಾಗಿತ್ತು.

Advertisement

ವಿಪರ್ಯಾಸವೆಂದರೆ, ಇದಾದ ಮೇಲೆ ಈ ದಾಖಲೆಯ ವಿಭಾಗವನ್ನೇ ಗಿನ್ನೆಸ್‌ ರದ್ದುಪಡಿಸಿದೆ. ಅದಕ್ಕೆ ಕಾರಣವೇನೆಂದು ಗಿನ್ನೆಸ್‌ ಸಂಘಟಕರು ಈಗ ಬಹಿರಂಗಪಡಿಸಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸ್ಪರ್ಧೆಯಾಗಿದೆ, ಮಾತ್ರವಲ್ಲ ಗಿನ್ನೆಸ್‌ ನಿಯಮಗಳಿಗೆ ಇದು ವಿರುದ್ಧವಾಗಿದೆ ಎನ್ನುವುದು ಇಲ್ಲಿನ ವಿಚಾರ.

2013ರಲ್ಲಿ ಪಟ್ಟಾಯದ ರಿಪ್ಲೇ ಎಂಬಲ್ಲಿ ಥಾಯ್‌ ಜೋಡಿ ಎಕ್ಕಚಾಯ್‌ ಮತ್ತು ಲಕ್ಸನ ದಾಖಲೆಯ ಚುಂಬನದ ವೇಳೆ ಇದ್ದ ಷರತ್ತುಗಳನ್ನು ಕೇಳಿದರೆ ನೀವೇ ಗಾಬರಿಯಾಗುತ್ತೀರಿ! ಆ ಜೋಡಿ ಶೌಚಾಲಯಕ್ಕೆ ಹೋಗುವಾಗಲೂ ತುಟಿಗೆ ತುಟಿ ಸೇರಿಸಿಕೊಂಡೇ ಇರಬೇಕಿತ್ತು. ಅದನ್ನು ಗಮನಿಸಲಿಕ್ಕೆ ಒಬ್ಬರಿರುತ್ತಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next