Advertisement
ಗದಗ, ರೋಣ ತಾಪಂ ಕ್ಷೇತ್ರಗಳ ಸಂಖ್ಯೆ ಕಡಿಮೆಗೊಳಿಸಿ, ಹೊಸತಾಲೂಕುಗಳಿಗೆ ಸರಿದೂಗಿಸುವಪ್ರಯತ್ನ ನಡೆಸಿದೆ. ಜಿಪಂ, ತಾಪಂ,ಕ್ಷೇತ್ರಗಳ ಪುನರ್ವಿಂಗಡಣೆಗೆ ಆದೇಶಹೊರಡಿಸುತ್ತಿದ್ದಂತೆ ಜಿಲ್ಲೆಯ ಸಾರ್ವಜನಿಕವಯಲದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಾಪಂ ವ್ಯವಸ್ಥೆಯನ್ನು ರದ್ದುಗೊಳಿಸುವಬಗ್ಗೆ ಪರ-ವಿರೋಧ ಚರ್ಚೆಗಳ ಮಧ್ಯೆಯೇ ರಾಜ್ಯ ಚುನಾವಣಾ ಆಯೋಗ ಜಿಪಂ, ತಾಪಂ, ಚುನಾವಣೆಗೆ ಸಿದ್ಧತೆ ನಡೆಸಿದೆ. ಅದರ ಭಾಗವಾಗಿಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಜೊತೆಗೆ ಫೆ.20 ರಂದು ನಡೆಯುವ ಸಭೆಗೆ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ನಕ್ಷೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ವಿಭಾಗದ ಸಿಬ್ಬಂದಿ ಹಾಜರಾಗುವಂತೆ ನಿರ್ದೇಶಿಸಿದೆ.
Related Articles
Advertisement
ಕ್ಷೇತ್ರ ಕಳೆದುಕೊಳ್ಳುವ ಆತಂಕ: ಜಿಲ್ಲೆಯಹೊಸದಾಗಿ ಎರಡು ತಾಲೂಕುಗಳು ರಚನೆಯಾಗಿದ್ದರಿಂದ 5 ಜಿಪಂ ಕ್ಷೇತ್ರಗಳುಹುಟ್ಟಿಕೊಂಡಿರುವುದು ಜಿಪಂ ಸ್ಪರ್ಧಾಕಾಂಕ್ಷಿಗಳಲ್ಲಿ ಚೈತನ್ಯ ಮೂಡಿಸಿದೆ. ಆದರೆ, ಈಗಿರುವ ತಾಪಂಗಳಲ್ಲೇ ಕೆಲವೆಡೆ ಕ್ಷೇತ್ರಗಳನ್ನು ಆಯೋಗ ಕಡಿಮೆ ಮಾಡಿದ್ದರಿಂದ ಹಲವರಿಗೆ ಕ್ಷೇತ್ರ ಕಳೆದುಕೊಳ್ಳುವ ಭೀತಿ ಶುರುವಾಗಿದೆ.
ಮಾತ್ರವಲ್ಲದೇ, ಗದಗ, ರೋಣ ಹಾಗೂ ಮುಂಡರಗಿ ತಾಲೂಕುಗಳು ವಿಶಾಲ ಹಾಗೂಹೆಚ್ಚಿನ ಜನ ಸಂಖ್ಯೆಯಿದ್ದರೂ, ತಾಪಂ ಸದಸ್ಯಬಲ ಕಡಿಮೆಗೊಳಿಸಿರುವುದು ಅವೈಜ್ಞಾನಿಕಅಲ್ಲದೇ, ನರಗುಂದ ತಾಲೂಕಿನ ಚಿಕ್ಕಮಣ್ಣೂರುಭಾಗದಲ್ಲಿ ಮತ್ತೂಂದು ತಾಪಂ ಕ್ಷೇತ್ರವನ್ನು ಕೊಡಬೇಕಿತ್ತು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಚುನಾವಣಾ ಆಯೋಗ ಕ್ಷೇತ್ರ ಪುನರ್ ವಿಂಗಡಣೆಗೆ ಆದೇಶಿದ್ದು, ಇನ್ನಷ್ಟೇಪ್ರಕ್ರಿಯೆಗಳು ಆರಂಭಗೊಳ್ಳಬೇಕಿದೆ. ಈ ಬಗ್ಗೆ ಸಂಬಂಧಿಸಿದ ತಹಶೀಲ್ದಾರ್‌ಗಳ ಮೂಲಕ ಪೂರಕ ಮಾಹಿತಿ ಕಲೆ ಹಾಕಿ, ಗ್ರಾಮೀಣ ಭಾಗದ ಜನತೆಗೆ ತೊಂದರೆಯಾಗದ ರೀತಿಯಲ್ಲಿ ಪುನರ್ವಿಂಗಡಿಸಿ, ಕರಡು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಆನಂತರ ಆಯೋಗ ಕರಡು ಪ್ರಕಟಿಸಿ, ಆಕ್ಷೇಪಣೆ ಪ್ರಕ್ರಿಯೆಗಳ ಬಳಿಕ ಅಂತಿಮಗೊಳಿಸಲಾಗುತ್ತದೆ. –ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ
-ವೀರೇಂದ್ರ ನಾಗಲದಿನ್ನಿ