Advertisement
ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳು ತಮ್ಮ ಶಾಲೆಯಲ್ಲಿರುವ ಕೊರತೆಗಳ ಬಗ್ಗೆ ಹಾಗೂ ಶಾಲೆಗೆ ಬೇಕಾಗಿರುವ ಮೂಲಸೌಕರ್ಯದ ಬಗ್ಗೆ ಅಧಿಕಾರಿಗಳ ಬಳಿ ವಿಚಾರಿಸುತ್ತಿದ್ದುದನ್ನು ಆಲಿಸಿದ ಜ್ಞಾನೇಂದ್ರ ಅವರು ವಿದ್ಯಾರ್ಥಿಗಳು ಪ್ರಶ್ನಿಸುತ್ತಿರುವುದರ ಬಗ್ಗೆ ಪಂ. ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು. ವಿದ್ಯಾರ್ಥಿಗಳ ಆಸಕ್ತಿ, ಮಾಹಿತಿ ಪಡೆದುಕೊಳ್ಳುವ ಗುಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಐಎಎಸ್ ಅಧಿಕಾರಿಯಾಗಲು ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಯಾವ ರೀತಿಯಾಗಿ ತಯಾರಿ ಮಾಡಿಕೊಳ್ಳಬೇಕು? ಎಂದು ನೀರ್ಕೆರೆ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ತುಳಸಿ ಪ್ರಶ್ನಿಸಿದಾಗ, ಹತ್ತನೇ ತರಗತಿ ಬಳಿಕ ದ್ವಿತೀಯ ಪಿಯುಸಿವರೆಗೆ ತಮಗೆ ಬೇಕಾದ ವಿಷಯಗಳನ್ನು ಆಯ್ಕೆ ಮಾಡಿ, ಪದವಿ ಶಿಕ್ಷಣವನ್ನು ಆಸಕ್ತಿ, ಶ್ರದ್ಧೆ ಮತ್ತು ಆತ್ಮವಿಶ್ವಾಸದೊಂದಿಗೆ ಓದಿ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳನ್ನು ಪಡೆದರೆ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಗುತ್ತದೆ ಎಂದರು. ಅಭಿವೃದ್ಧಿ ಕಾರ್ಯ
ಶಾಲೆಗೆ ಆವರಣಗೋಡೆ, ಸಭಾಭವನ, ನೀರಿನ ಪೈಪ್‌ಲೈನ್, ಕಂಪ್ಯೂಟರ್‌ಗಳು ಬೇಕು ಎಂದು ವಿದ್ಯಾರ್ಥಿಗಳು ಪಂಚಾಯತ್ ಮುಂದೆ ತಮ್ಮ ಅಹವಾಲು ಮಂಡಿಸಿದರು. ‘ಈಗಾಗಲೇ ಉದ್ಯೋಗ ಖಾತರಿ ಯೋಜನೆಯ ಮೂಲಕ ಆವರಣಗೋಡೆಯ ಕೆಲಸ ಶೇ. 60ರಷ್ಟು ಮುಗಿದಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು’ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ವಿವರಣೆ ನೀಡಿದರು. ಜಿ.ಪಂ. ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮಕ್ಕಳ ಗ್ರಾಮಸಭೆಯನ್ನು ಉದ್ಘಾಟಿಸಿದರು. ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಸಂತ್ ನಿಟ್ಟೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಮಕ್ಕಳೇ ಮೊದಲು ಮಕ್ಕಳ ಹಕ್ಕುಗಳಿಗೆ ಗೌರವ ನೀಡಬೇಕು’ ಎಂದರು.
Related Articles
ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಸಂಬಂಧಕರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿರುವುದರ ಬಗ್ಗೆ ತಿಳಿಸಿದ ಅವರು, ಶಾಲೆಯಲ್ಲಿ ಶಿಕ್ಷಕರಿಂದ ಅಥವಾ ಹೊರಗಿನವರಿಂದ ದೌರ್ಜನ್ಯವಾದರೆ ಮೊದಲು ನಿಮ್ಮ ಹೆತ್ತವರಲ್ಲಿ ತಿಳಿಸಿ ಅಥವಾ ಪಂ. ಅಧಿ ಕಾರಿ, ಜನಪ್ರತಿನಿಗಳು ಅಥವಾ ಹಿರಿಯರ ಗಮನಕ್ಕೆ ತರಬೇಕೆಂದು ಸಲಹೆ ನೀಡಿದರು. ಮಕ್ಕಳ ಹಕ್ಕುಗಳನ್ನು ದುರುಪಯೋಗಪಡಿಸಬಾರದು ಎಂದು ಕಿವಿಮಾತು ಹೇಳಿದರು.
Advertisement
ಪತ್ರಕರ್ತ ಅಶ್ರಫ್ ವಾಲ್ಪಾಡಿ ಮುಖ್ಯ ಅತಿಥಿಯಾಗಿದ್ದರು. ಪಶು ಇಲಾಖೆಯ ಗುರುದತ್ತ್, ಆರೋಗ್ಯ ಇಲಾಖೆಯ ಮೇಲ್ವಿಚಾರಕಿ ಹಾಗೂ ಅಂಗನವಾಡಿಯ ಶಿಕ್ಷಕಿ ಇಲಾಖಾ ಮಾಹಿತಿಯನ್ನು ನೀಡಿದರು.
ಪ್ರಮಾಣಪತ್ರ ವಿತರಣೆಕಳೆದ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದಿರುವ ಸಾಹಿನಾ (ವಿಜ್ಞಾನ), ಅಕ್ಷಿತಾ (ವಾಣಿಜ್ಯ) ಹಾಗೂ ರಕ್ಷಿತಾ (ಕಲಾ) ಇವರನ್ನು ಗೌರವಿಸಲಾಯಿತು. ಗ್ರಾಮ ಸಭೆಗೆ ಪೂರಕವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾನಂದ, ಪಂ. ಉಪಾಧ್ಯಕ್ಷೆ ಹೇಮಾವತಿ ಕುಲಾಲ್, ತಾ.ಪಂ. ಸದಸ್ಯರಾದ ಪ್ರಕಾಶ್ ಗೌಡ, ಪಂ. ಸದಸ್ಯರಾದ ರಮೇಶ್ ಶೆಟ್ಟಿ, ಶಶಿಕಾಂತ್ ಶೆಟ್ಟಿಗಾರ್, ಬೇಬಿ, ಉಮಾವತಿ, ರಾಜೀವಿ, ನೀರ್ಕೇರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ| ಪ್ರತಿಮಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಮತ್ತಿತರರು ಅತಿಥಿಗಳಾಗಿದ್ದರು. ಸಾಯೀಶ ಚೌಟ ಸ್ವಾಗತಿಸಿ ಪ್ರಸ್ತಾವನೆಗೈದರು. ಪಂಚಾಯತ್ ಸಿಬಂದಿ ರಾಕೇಶ್ ಭಟ್ ನಿರೂಪಿಸಿದರು. ಎಲ್ಲಿದೆ ಹೆಣ್ಮಕ್ಕಳಿಗೆ ದಿನಕ್ಕೊಂದು ರೂ.?
ಒಂದನೇ ತರಗತಿಯ ಹೆಣ್ಣು ಮಕ್ಕಳಿಗೆ ಸರಕಾರವು ದಿನವೊಂದಕ್ಕೆ 1 ರೂ.ನೀಡುತ್ತಿತ್ತು. ಆದರೆ ಈಗ ಅದನ್ನು ನೀಡುತ್ತಿಲ್ಲ ಏಕೆ ಎಂದು ವಿದ್ಯಾರ್ಥಿಯೋರ್ವ ಶಿಕ್ಷಣ ಇಲಾಖೆಯ ಅ ಧಿಕಾರಿಗಳನ್ನು ಪ್ರಶ್ನಿಸಿದಾಗ ‘ಈ ಯೋಜನೆಯನ್ನು ಏಕೆ ನಿಲ್ಲಿಸಲಾಗಿದೆ ಎಂದು ತಮಗೂ ಗೊತ್ತಿಲ್ಲ. ಆದರೆ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ. ಅವರು ಉತ್ತರಿಸಿದರು.