Advertisement

ಅಶ್ಲೀಲ ಸೈಟ್‌ ತಡೆಗೆ ಮಾರ್ಗಸೂಚಿ ಶೀಘ್ರ

08:40 AM Dec 14, 2018 | Karthik A |

ಹೊಸದಿಲ್ಲಿ: ಅಶ್ಲೀಲ ಚಿತ್ರಗಳಲ್ಲಿ ಮಕ್ಕಳ ಬಳಕೆ (ಚೈಲ್ಡ್‌ ಪೋರ್ನೋಗ್ರಫಿ), ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರದ ವಿಡಿಯೋ, ಚಿತ್ರ ಹಾಗೂ ವಿಷಯಗಳನ್ನು ಹೊಂದಿರುವ ವೆಬ್‌ಸೈಟ್‌ಗಳು ಹಾಗೂ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದಕ್ಕೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಮಾರ್ಗಸೂಚಿಯನ್ನು ಬಿಡುಗಡೆ ಮಾಡುವಂತೆ ಸರಕಾರಕ್ಕೆ ಸುಪ್ರೀಂಕೋರ್ಟ್‌ ಡಿಸೆಂಬರ್‌ 6 ರಂದು ಆದೇಶಿಸಿತ್ತು. ಮುಂದಿನ ಎರಡು ವಾರಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಅಲ್ಲದೆ ಗೃಹ ಸಚಿವಾಲಯವು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ಯೂಟ್ಯೂಬ್‌, ವಾಟ್ಸ್‌ಆ್ಯಪ್‌ ಮತ್ತು ಟ್ವಿಟರ್‌ ಅಧಿಕಾರಿಗಳೊಂದಿಗೆ ನಿಯತವಾಗಿ ಮಾತುಕತೆ ನಡೆಸಲಿದ್ದು, ಸಮಾಜಕ್ಕೆ ಕಂಟಕವಾದ ಕಂಟೆಂಟ್‌ಗಳನ್ನು ತೆಗೆದು ಹಾಕುವ ಬಗ್ಗೆ ಚರ್ಚೆ ನಡೆಸಲಿದೆ. ಫೆಬ್ರವರಿಯಲ್ಲಿ ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ಕೇಂದ್ರ ಗಮನಾರ್ಹ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next