Advertisement

ಡಿ.ಸಿ.ಗಳ ಮೂಲಕ ಮಾರ್ಗಸೂಚಿ ಅನುಷ್ಠಾನ

11:17 PM Apr 18, 2020 | Sriram |

ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ “ಲಾಕ್‌ಡೌನ್‌ ಮಾರ್ಗಸೂಚಿಗಳ’ನ್ನು ನೇರವಾಗಿ ಜಿಲ್ಲಾಧಿಕಾರಿಗಳ ಮೂಲಕ ಸಮರ್ಪಕ ವಾಗಿ ಜಾರಿ ಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Advertisement

ಪ್ರಧಾನಿ ಕಚೇರಿ ಹಾಗೂ ಕೇಂದ್ರ ಸಂಪುಟದ ಕಾರ್ಯದರ್ಶಿ ಕಚೇರಿಯ ಅಧಿಕಾರಿಗಳ ತಂಡ ಈಗಾಗಲೇ ದೇಶದ ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ, ಈ ಬಗ್ಗೆ ಸೂಚನೆ ನೀಡಿದ್ದಾರೆ.

ತಮ್ಮ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಇತ್ಯಾದಿ ನಿಯಮಗಳು ಉಲ್ಲಂಘನೆ ಆಗದಂತೆ ಮಾರ್ಗ ಸೂಚಿಗಳನ್ನು ಹೇಗೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಬಹುದು ಎಂಬುದರ ಬಗ್ಗೆ ನೀಲನಕ್ಷೆ ಯೊಂದನ್ನು ತಯಾರಿ ಸುವಂತೆ ಜಿಲ್ಲಾಧಿಕಾರಿ ಗಳಿಗೆ ಸೂಚಿಸಲಾಗಿದೆ.

“ಲಾಕ್‌ಡೌನ್‌ ಇನ್ನೂ ಜಾರಿ ಯಲ್ಲಿದೆ. ಅದರ ನಡುವೆಯೇ ಗ್ರಾಮೀಣ ಆರ್ಥಿಕತೆಯ ಪುನ ಶ್ಚೇತನಕ್ಕೆ ಮಾರ್ಗಸೂಚಿಗಳನ್ನು ಅನು ಷ್ಠಾನಗೊಳಿಸಲಾಗಿದೆ. ಇದೆಲ್ಲದರ ಜೊತೆಗೆ ವೈರಸ್‌ ಹರಡದಂತೆ ಎಚ್ಚರಿಕೆ ವಹಿಸ ಲಾಗಿದೆ’ ಎಂಬ 3 ಅಂಶಗಳನ್ನು ಕೇಂದ್ರಕ್ಕೆ ಜಿಲ್ಲಾ ಧಿಕಾರಿಗಳು ಮನವರಿಕೆ ಮಾಡಿಕೊಡಬೇಕಿದೆ.

ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೂ ಸಿದ್ಧ
ಮಾರ್ಗಸೂಚಿಗಳನ್ನು ಎ. 20ರಿಂದ ಜಾರಿಗೊಳಿ ಸುವ ನಿರ್ಧಾರದ ಹಿಂದೆಯೂ ಒಂದು ತಂತ್ರಗಾರಿಕೆ ಅಡಗಿದೆ. ಮಾರ್ಗಸೂಚಿಗಳ ಅನುಷ್ಠಾನ ಕುರಿತ ನೀಲನಕ್ಷೆ ತಯಾರಿಸಲು ನೀಲನಕ್ಷೆ ಸಿದ್ಧಪಡಿಸಲು ಜಿಲ್ಲಾಧಿಕಾರಿಗಳಿಗೆ ಕನಿಷ್ಠ 6-7 ದಿನಗಳ ಅವಕಾಶ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next