ಏನು ಕೃಷಿ: ಮಿಶ್ರಬೆಳೆ
ವಯಸ್ಸು: 76
ಕೃಷಿ ಪ್ರದೇಶ: 30 ಎಕ್ರೆ
Advertisement
ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಕೃಷಿಗೆ ಸಂಬಂಧಪಟ್ಟ ಸಂಶೋಧನೆಗಳನ್ನು ನಡೆಸಿದ್ದಾರೆ. ಅವುಗಳು ರಾಜ್ಯ, ರಾಷ್ಟ್ರಮಟ್ಟದ ಪುರಸ್ಕಾರಗಳನ್ನು ಪಡೆದಿವೆ. ಪಿಎಚ್.ಡಿ.ಗಾಗಿ ಕೂಡ ಇವರ ಮಾರ್ಗದರ್ಶನ ಪಡೆದಿದ್ದಾರೆ.
Related Articles
ಇಬ್ಬರು ತಜ್ಞರ ಸಹಕಾರದೊಂದಿಗೆ ಪಶುಚಿಕಿತ್ಸಾ ಕೈಪಿಡಿ, ಮಲಯಾಳಿ ವಿಷ ಚಿಕಿತ್ಸೆ ಅಪಾಮಾರ್ಗ, ಸುಗಂಧ ಫಲ ಅಡಿಕೆ, Arecanut Medicinal and alternative uses (ಮುಖ್ಯಮಂತ್ರಿ ಗಳಿಂದ ಬಿಡುಗಡೆ), ಕೃಷಿ, ಆಯುರ್ವೇದ, ಅಡಿಕೆ ಇತ್ಯಾದಿ ಬಗ್ಗೆ ಸಂಶೋಧನಾತ್ಮಕ ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
Advertisement
ಸಂಘಟನೆಆಯುರ್ವೇದ ಅಧ್ಯಯನ ಸಂಶೋಧನೆ ಕೇಂದ್ರ ಸ್ಥಾಪಕ, ಕ್ಯಾಂಪ್ಕೋ ಪ್ರಾಯೋಜಿತ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಟ್ರಸ್ಟಿ, ಮಂಗಳಾ ಹರ್ಬಲ್ ಪಾರ್ಕ್ ಸ್ಥಾಪಕ, ಮಂಗಳಾ ಚ್ಯಾರಿಟೆಬಲ್ ಟ್ರಸ್ಟಿ. ವಿದ್ಯಾಭ್ಯಾಸ : ಎಂ.ಎ., ಎಲ್‌ಎಲ್.ಬಿ.
ಸ್ವತಃ ಸಂಶೋಧಕರು
10 ಎಕ್ರೆ ಭೂಮಿಯಲ್ಲಿ ಸಂರಕ್ಷಿತ ಅರಣ್ಯ
ಮೊಬೈಲ್ ಸಂಖ್ಯೆ: 9448382229 ಪ್ರಶಸ್ತಿ ಸಮ್ಮಾನ 1998ರಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ
2003ರಲ್ಲಿ ಪೆರ್ಲ ನಲ್ಕ ಗಣಪತಿ ಭಟ್ ಪ್ರತಿಷ್ಠಾನ ಸಮ್ಮಾನ
2008ರಲ್ಲಿ ಪ್ರಸಾರ ಭಾರತಿ (ಆಕಾಶವಾಣಿ)ಯಿಂದ ಕಿಸಾನ್ ವಾಣಿ ಪ್ರಶಸ್ತಿ
2010ರಲ್ಲಿ ಅಖೀಲ ಹವ್ಯಕ ಮಹಾಸಭಾ ಸಮ್ಮಾನ
2011ರಲ್ಲಿ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು.
2013ರಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ
2019ರಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯ ಪ್ರಶಸ್ತಿ ಪುರಸ್ಕೃತರು
2019ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಯಿಂದ ಪ್ರಶಸ್ತಿ ಅಡಿಕೆಯ ಉಪಯೋಗ
ಅಡಿಕೆ ಹಲವು ಏಳುಬೀಳುಗಳನ್ನು ಕಂಡಿದೆ. ಅದಕ್ಕೆ ಕಾರಣ ಹಲವು. ಜಗಿದು ಉಗುಳುವುದಕ್ಕಷ್ಟೇ ಸೀಮಿತವಾದರೆ ಸಾಲದು. ಈ ನಿಟ್ಟಿನಲ್ಲಿ ಅಡಿಕೆಯಿಂದ ವಿವಿಧ ಉತ್ಪನ್ನಗಳನ್ನು ಹೊರತೆಗೆಯಲು ಬಳಸಬೇಕಾಗಿದೆ. ಅದಕ್ಕಾಗಿ ಸಂಶೋಧನೆಗಳಾಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ, ಪ್ರಯೋಗಗಳನ್ನು ಮಾಡಲಾಗಿದೆ. ಹಲವರ ಸಹಕಾರವೂ ಸಿಕ್ಕಿದೆ. ಆದರೆ ಇನ್ನಷ್ಟು ಕಾರ್ಯವಾಗಬೇಕು. ವಯಸ್ಸಾಗಿದ್ದರೂ ಅಧ್ಯಯನ ನಿಲ್ಲಿಸಿಲ್ಲ. ನಿಲ್ಲಿಸುವುದೂ ಇಲ್ಲ. ನಿರಂತರ ಶ್ರಮ ವಹಿಸುವುದು ಅನಿವಾರ್ಯ.
-ಶಂಕರ ಭಟ್ ಬದನಾಜೆ ಉದಯಶಂಕರ್ ನೀರ್ಪಾಜೆ