Advertisement

Gangavathi: ಸುಟ್ಟು ಭಸ್ಮವಾದ ಗೆಸ್ಟ್ ಹೌಸ್; ಕಿಡಿಗೇಡಿಗಳ ಕೃತ್ಯವೆಂದ ಕೆಆರ್‌ಪಿಪಿ ಮುಖಂಡರು

02:00 PM Dec 27, 2023 | Team Udayavani |

ಗಂಗಾವತಿ: ಗಂಗಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ಪಂಪ ಸರೋವರದಲ್ಲಿರುವ ಅತಿಥಿಗಳ ಗೆಸ್ಟ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಗೆಸ್ಟ್ ಹೌಸ್ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

Advertisement

ಬೆಳಗಿನ ಜಾವ ಪಂಪಾಸರೋವರ ವೀಕ್ಷಣೆಗೆ ಆಗಮಿಸಿದ್ದ ಉತ್ತರಭಾರತದ ಪ್ರವಾಸಿಗರ ಬಸ್ ಒಂದು ಇಲ್ಲಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೆಸ್ಟ್ ಹೌಸ್ ಮೇಲೆ ವಿದ್ಯುತ್ ತಂತಿಗಳು ಬಿದ್ದು ಬೆಂಕಿ ಹತ್ತಿಕೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಪಂಪ ಸರೋವರದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಈ ಗೆಸ್ಟ್ ಹೌಸ್ ಅನ್ನು ನಿರ್ಮಿಸಿಕೊಂಡಿದ್ದರು. ನಂತರ ಶಾಸಕ ಗಾಲಿ ಜನಾರ್ದನರೆಡ್ಡಿ ರೆಡ್ಡಿ ಬಳಕೆ ಮಾಡುತ್ತಿದ್ದರು. ವಿಶೇಷವಾಗಿ ಪಂಪ ಸರೋವರಕ್ಕೆ ಆಗಮಿಸುತ್ತಿದ್ದ ಅತಿಥಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಳಿದುಕೊಳ್ಳುತ್ತಾರೆ.

ಗೆಸ್ಟ್ ಹೌಸ್ ನಲ್ಲಿ ಯಾವ ಅಮೂಲ್ಯ ವಸ್ತುಗಳು ಇದ್ದವು ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯವರು ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ.

ಗೆಸ್ಟ್ ಹೌಸ್ ಗೆ ಬೆಂಕಿ ಕಿಡಿಗೇಡಿಗಳ ಕೃತ್ಯ… ಕೆಆರ್‌ಪಿಪಿ ಮುಖಂಡರ ಸಂಶಯ:
ತಾಲೂಕಿನ ಇತಿಹಾಸ ಪ್ರಸಿದ್ಧ ಪಂಪ ಸರೋವರದಲ್ಲಿರುವ ಗೆಸ್ಟ್ ಹೌಸ್ ಗೆ ಬೆಂಕಿ ಬಿದ್ದು ಭಸ್ಮವಾಗಿರುವ ಪ್ರಕರಣದ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಮುಖಂಡರಾದ ಪಂಪಣ್ಣ ನಾಯಕ ಮತ್ತು ಯಮನೂರ ಚೌಡಕಿ ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿ ಆನೆಗೊಂದಿ ಭಾಗದ ಸಮಸ್ಯೆಗಳನ್ನು ಕೇಳಲು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಪಂಪ ಸರೋವರ ಗೆಸ್ಟ್ ಹೌಸ್ ನಲ್ಲಿ ಇರುತ್ತಿದ್ದರು ಕಳೆದ ಹನುಮಮಾನ ವಿಸರ್ಜನಾ ಕಾರ್ಯಕ್ರಮ ಸಂದರ್ಭದಲ್ಲಿ ಕಾರ್ಯಕ್ರಮದ ಪೂರ್ವ ತಯಾರಿ ಮಾರ್ಗದರ್ಶನ ನೀಡುತ್ತಿದ್ದರು ಅವರು ಭಾನುವಾರ ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಬೆಂಕಿಹನಾಹುತ ಸಂಭವಿಸಿದೆ ಇದರ ಹಿಂದೆ ಕಿಡಗೇರಿಗಳ ಕೈವಾಡ ಇರುವುದು ಸ್ಪಷ್ಟವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆಯವರು ಸೂಕ್ತ ತನಿಖೆ ಮಾಡಿ ಕೃತ್ಯ ವ್ಯಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಎಲ್ಲೆಂದರಲ್ಲಿ ಪವಿತ್ರ ಕೇಸರಿ ವಸ್ತ್ರಗಳನ್ನು ಎಸೆದ ಹನುಮಮಾಲಾಧಾರಿಗಳು: ಸ್ಥಳೀಯರ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next