Advertisement

ತ್ರಿಮೂರ್ತಿ ರೂಪ ದತ್ತಾತ್ರೇಯ

11:46 AM Dec 08, 2018 | |

ಅತಿಥಿಸತ್ಕಾರ ನಮ್ಮ ಸಂಸ್ಕಾರವನ್ನು ಸೂಚಿಸುತ್ತದೆ. ಅತ್ರಿಯು ಎಂಥ ಕಷ್ಟ ಎದುರಾದರೂ ಅತಿಥಿಗಳ ಸೇವೆಯಲ್ಲಿ ಲೋಪವಾಗಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸಿದ್ದರ ಪರಿಣಾಮ, ದತ್ತಾತ್ರೇಯನ ಉದಯವಾಯಿತು. ಹಾಗಾಗಿಯೇ, ಅತಿಥಿಯನ್ನು ದೇವರ ಸ್ಥಾನದಲ್ಲಿಟ್ಟು ಸತ್ಕರಿಸಿದರೆ ನಮಗೆ ಎಲ್ಲ ಸುಖಭೋಗಗಳು ಒದಗಿಬರುವುದೆಂದು ವೇದ, ಪುರಾಣಗಳು ಹೇಳುತ್ತವೆ.

Advertisement

ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಅತಿಥಿ ಸತ್ಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಈಗಲೂ ಅದು ಒಂದು ಪಾಲಿಸಲೇಬೇಕಾದ ಸಂಪ್ರದಾಯದಂತೆ ಮುಂದುವರಿದಿದೆ.  ಅತಿಥಿ ದೇವೋಭವ ಎಂಬ ಮಾತಿನ ಪ್ರಕಾರ ಅತಿಥಿಯೇ ದೇವರು ಅಥವಾ ದೇವರಿಗೆ ಸಮನಾದವನು ಎಂಬ ಮಧುರವಾದ ಸಿದ್ಧಾಂತವನ್ನು ಅನುಸರಿಸುವ ಸಂಸ್ಕಾರ ಹಿಂದಿನಿಂದಲೂ ನಡೆದು ಬಂದು ಬಂದಿದೆ. ಅತಿಥಿಯೊಬ್ಬನ ಸಂತೃಪ್ತಿಯೇ ನಮ್ಮ ಸಂತೋಷ ಎಂದುಕೊಂಡವರು ನಾವು. ಈ ಅತಿಥಿ ಸತ್ಕಾರದಿಂದಾಗಿ ದೇವರ ಸಾûಾತ್ಕಾರ ಹೇಗೆ ಆಗಿದೆ ಎಂಬುದನ್ನು ದತ್ತಾವತಾರದ ಹುಟ್ಟು ತಿಳಿಸಿಕೊಡುತ್ತದೆ.

ವೇದದಲ್ಲೊಂದು ಉಕ್ತಿಯಿದೆ.
ಯತ್ರಾತಿಥೀನಾಂ ಸೇವನಂ ಯಥಾವತ್‌ ಕ್ರಿಯತೇ |
ತತ್ರ ಸರ್ವಾಣಿ ಸುಖಾನಿ ಭವಂತೀತಿ ||
ಅಂದರೆ, ಯಾವ ಕ್ರಿಯೆ ಅಥವಾ ಕರ್ಮದಲ್ಲಿ ಅತಿಥಿಗಳ ಸೇವನೆಯು ಯಥಾವತ್ತಾಗಿ ಮಾಡಲಾಗುತ್ತದೆಯೋ ಅಲ್ಲಿ ಸಮಸ್ತ ಸುಖಗಳೂ ಉಂಟಾಗುತ್ತದೆ ಎಂದರ್ಥ. ಅತಿಥಿ ಸೇವೆಗೆ ಅಷ್ಟೊಂದು ಶಕ್ತಿಯಿದೆ. ಇದರಿಂದಾಗುವ ಫ‌ಲವೆಂದರೆ ಸುಖಪ್ರಾಪ್ತಿ. ಸುಖಪ್ರಾಪ್ತಿಯಾದವನಿಗೆ ಶತಾಯುಷ್ಯವೂ ಕ್ಷಣಾರ್ಧದಲ್ಲಿ ಕಳೆದುಹೋಗುತ್ತದೆ. ಅತಿಥಿ ಸತ್ಕಾರದ ಫ‌ಲವನ್ನು ಅನುಸೂಯೆಯ ಮಗನಾಗಿ ಜನಿಸಿದ ವಿಷ್ಣುವಿನ ದತ್ತಾವತಾರದಿಂದ ನಾವು ಅರಿಯಬಹುದು.

ಅತ್ರಿಮುನಿಯ ಪತ್ನಿ ಅನುಸೂಯೆಯ ಪತಿವ್ರತಾಶಕ್ತಿಗೆ ದೇವಾನುದೇವತೆಗಳೇ ತಲೆಬಾಗಿದ್ದರು. ಈ ವಿಷಯವನ್ನು ನಾರದರು ವಿಷ್ಣುವಿನಲ್ಲಿ ತಿಳಿಸಿದಾಗ, ಲಕ್ಷಿ$¾àದೇವಿಯು ಅನುಸೂಯೆಯ ಪತಿವ್ರತಾಶಕ್ತಿಯನ್ನು ಪರೀಕ್ಷಿಸಿ ಪ್ರಪಂಚಮುಖಕ್ಕೆ ತೋರಬೇಕೆಂದು ಕೇಳಿಕೊಳ್ಳುತ್ತಾಳೆ. ಇದಕ್ಕೊಪ್ಪಿದ ವಿಷ್ಣುವು, ಶಿವ ಮತ್ತು ಬ್ರಹ್ಮನನ್ನು ಒಡಗೂಡಿಕೊಂಡು ವಟುಗಳ ವೇಷದಲ್ಲಿ ಅನಸೂಯೆಯ ಮನೆಗೆ ಬರುತ್ತಾರೆ. ನಾವು ಹಸಿದಿರುತ್ತೇವೆ.  ಭೋಜನವನ್ನು ನೀಡುವಂತೆ ಕೇಳಿಕೊಳ್ಳುತ್ತಾರೆ. ಅನುಸೂಯೆ, ಅತಿಯಾದ ಆನಂದದಿಂದ ಭೋಜನವನ್ನು ಸಿದ್ಧಪಡಿಸಿ ಈ ವಟುಗಳಿಗೆ ಬಡಿಸುತ್ತಾಳೆ. ಆದರೆ ಈ ಮೂವರೂ, ನೀನು ವಿವಸ್ತ್ರೆಯಾಗಿ ಬಡಿಸಿದರೆ ಮಾತ್ರ ಊಟವನ್ನು ಸ್ವೀಕರಿಸುತ್ತೇವೆ ಎಂದು ಹೇಳಿದಾಗ ಅನುಸೂಯೆಗೆ ಇವರು ಸಾಮಾನ್ಯ ವಟುಗಳಲ,ಅವತಾರಪುರುಷರು ಎಂಬುದು ಮನದಟ್ಟಾಗುತ್ತದೆ. ಹಿಂದೆಯೇ, ಅಲ್ಲದೆ ಅತಿಥಿಗಳನ್ನು ನೋಯಿಸುವುದು ಉಚಿತವಲ್ಲ ಎಂದು ಬಗೆದು, ಅವರನ್ನು ಮಕ್ಕಳೆಂಬ ಭಾವದಲ್ಲಿ ಪತಿಯ ಪಾದೋದಕವನ್ನು ಅವರಿಗೆ ಪ್ರೋಕ್ಷಿಸಿ, ಅವರ ಇಷ್ಟದಂತೆ ಬಡಿಸಲು ಅಣಿಯಾಗುತ್ತಾಳೆ. ಮರುಗಳಿಗೆಯೇ ಆ ಮೂವರೂ ಅಲ್ಲಿಯೇ ಪುಟ್ಟ ಶಿಶುಗಳಾಗಿ ಬಿಡುತ್ತಾಳೆ. ಅನುಸೂಯೆಯ ಪಾತಿವ್ರತ್ಯ ಶಕ್ತಿಯೇ ಇದಕ್ಕೆ ಕಾರಣ. ಆ ಮೂರೂ ಮಕ್ಕಳನ್ನು ಹಾಲುಣಿಸಿ, ತೊಟ್ಟಿಲಲ್ಲಿ ತೂಗಿ ಮುದ್ದಿಸಿದಳು. ಅತ್ರಿಮುನಿಯು ಮನೆಗೆ ಬಂದಾಗ ಆತನಿಗೆ ನಡೆದುದೆಲ್ಲವನ್ನೂ ವಿವರಿಸಿದಳು.
 
ತ್ರಿಮೂರ್ತಿಗಳ ಮಡದಿಯರು ತಮ್ಮ ಗಂಡಂದಿರನ್ನು ಹುಡುಕಿಕೊಂಡು ಅನಸೂಯೆಯ ಮನೆಗೆ ಬಂದರು. ಮಗುವಾಗಿದ್ದ ತಮ್ಮ ಪತಿಯರನ್ನು ಮತ್ತೆ ಹಿಂದಿನ ರೂಪದಲ್ಲಿ ಮರಳಿಸಬೇಕೆಂದು ಅನುಸೂಯೆಯಲ್ಲಿ ಕೇಳಿಕೊಂಡರು. ಮತ್ತೆ ಅನುಸೂಯೆಯ ಪತಿಯ ಪಾದೋದಕವನ್ನು ಪ್ರೋಕ್ಷಿಸಿ ತ್ರಿಮೂರ್ತಿಗಳು ಮೊದಲಿನ ರೂಪಕ್ಕೆ ಬಂದರು. ಅನುಸೂಯೆಯ ಆತಿಥ್ಯದಿಂದ ಸಂಪ್ರೀತರಾದ ತ್ರಿಮೂರ್ತಿಗಳು, ಅನುಸೂಯೆಯ ಅಪೇಕ್ಷೆಯಂತೆ ಅವಳ ಮಕ್ಕಳಾಗಿ ಜನಿಸಿದರು. ಅವರಿಗೆ ಚಂದ್ರ, ದತ್ತ ಮತ್ತು ದೂರ್ವಾಸ ಎಂಬ ಹೆಸರನ್ನಿಟ್ಟಳು. ಬ್ರಹ್ಮ ರೂಪವಾದ ಚಂದ್ರ ಮತ್ತು ಶಿವರೂಪನಾದ ದೂರ್ವಾಸ, ತಮ್ಮ ದಿವ್ಯಾಂಶವನ್ನು ವಿಷ್ಣುರೂಪಿಯಾದ ದತ್ತನಲ್ಲಿ ಇಟ್ಟು, ಚಂದ್ರನು ಚಂದ್ರಮಂಡಲಕ್ಕೂ ದುರ್ವಾಸನು ತಪಸ್ಸಿಗೂ ಹೋದರು. ಸ್ವಯಂ ಪರಾಶಕ್ತಿಯಾದ ಭಗವಂತನು ಪೂರ್ಣಾಂಶದಿಂದ ತನ್ನನ್ನು ತಾನೇ ಅತ್ರಿ ಅನುಸೂಯೆಯರಿಗೆ ಕೊಡಲ್ಪಟ್ಟುದರಿಂದ ದತ್ತ ಎಂಬ ಹೆಸರು ಪ್ರಚುರವಾಯಿತು. ಅತ್ರಿಯ ಮಗನಾದ ಕಾರಣ ಆತ್ರೇಯನಾಗಿ ಮುಂದೆ ದತ್ತಾತ್ರೇಯ ಎಂದು ಪ್ರಸಿದ್ಧಿ ಪಡೆದ ಭಗವದ್ರೂಪ. ಹೀಗೆ ಭಗವಂತನ ತ್ರಿಮೂರ್ತಿಗಳಿಂದಾದ ದತ್ತಾವತಾರಕ್ಕೆ ಮೂಲವಾದುದು ಅತಿಥಿ ಸತ್ಕಾರ.

ಅತಿಥಿಸತ್ಕಾರ ನಮ್ಮ ಸಂಸ್ಕಾರವನ್ನು ಸೂಚಿಸುತ್ತದೆ. ಅತ್ರಿಯು ಎಂಥ ಕಷ್ಟ ಎದುರಾದರೂ ಅತಿಥಿಗಳ ಸೇವೆಯಲ್ಲಿ ಲೋಪವಾಗಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸಿದ್ದರ ಪರಿಣಾಮ, ದತ್ತಾತ್ರೇಯನ ಉದಯವಾಯಿತು. ಹಾಗಾಗಿಯೇ, ಅತಿಥಿಯನ್ನು ದೇವರ ಸ್ಥಾನದಲ್ಲಿಟ್ಟು ಸತ್ಕರಿಸಿದರೆ ನಮಗೆ ಎಲ್ಲ ಸುಖಭೋಗಗಳು ಒದಗಿಬರುವುದೆಂದು ವೇದ, ಪುರಾಣಗಳು ಹೇಳುತ್ತವೆ. ಹಾಗಾಗಿ ಇಂತಹ ಸುಸಂಸ್ಕಾರ ಎಲ್ಲಾ  ಕಾಲಗಳಲ್ಲೂ ಚಿರಾಯುವಾಗಿರಲಿ.

Advertisement

 ವಿಷ್ಣು ಭಟ್‌ ಹೊಸ್ಮನೆ 

Advertisement

Udayavani is now on Telegram. Click here to join our channel and stay updated with the latest news.

Next