Advertisement

ವಿವಿಧ ಬೇಡಿಕೆ ಈಡೇರಿಕೆಗೆ ಅತಿಥಿ ಶಿಕ್ಷಕರ ಮನವಿ

05:36 PM Sep 01, 2020 | Suhan S |

ಯಲಬುರ್ಗಾ: ಕೋವಿಡ್‌-19 ಪ್ಯಾಕೇಜ್‌, ಉದ್ಯೋಗ ಭದ್ರತೆ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಶಿಕ್ಷಕರ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಗ್ರೇಡ್‌-2 ತಹಶೀಲ್ದಾರ್‌ ನಾಗಪ್ಪ ಸಜ್ಜನಗೆ ಅವರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕು ಅಧ್ಯಕ್ಷ ಶರಣಪ್ಪ ಏಳಗುಡ್ಡದ ಮಾತನಾಡಿ, ರಾಜ್ಯ ಸರಕಾರ ಕೂಡಲೇ ಎಲ್ಲ ಅತಿಥಿ ಶಿಕ್ಷಕರಿಗೆ ಕೋವಿಡ್‌-19 ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು. ಮುಂಬರುವ ಎಲ್ಲ ನೇಮಕಾತಿಗಳಲ್ಲಿ ಅತಿಥಿಶಿಕ್ಷಕರಿಗೆ ಪ್ರಾತಿನಿಧ್ಯ ನೀಡಿ, ಉದ್ಯೋಗ ಭದ್ರತೆ ನೀಡಬೇಕು. ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರವನ್ನು ನೀಡಬೇಕು ಮತ್ತು ಗುರುತಿನ ಚೀಟಿ ಕೊಡಬೇಕು. ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಅತಿಥಿ ಶಿಕ್ಷಕರಿಗೆ ಕಡಿಮೆ ವೇತನ ನೀಡುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಸರಕಾರದ ಮುಂದಿನ ನೇಮಕಾತಿಗಳಲ್ಲಿ ಪ್ರಾತಿನಿಧ್ಯ ನೀಡಿ ಅತಿಥಿ ಶಿಕ್ಷಕರನ್ನು ಖಾಯಂ ಆಗಿ ನೇಮಿಸುವಂತೆ ಆಗ್ರಹಿಸಿದರು.

ಅತಿಥಿ ಶಿಕ್ಷಕ ಬಸವಂತ ಹಡಪದ ಮಾತನಾಡಿ, ಸರಕಾರದಿಂದ ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿದೆ. ಅತಿಥಿ ಶಿಕ್ಷಕರನ್ನು ಸರಕಾರ ಸರ್ಕಾರ ಕೂಡಲೇ ಖಾಯಂಗೊಳಿಸಿ ಸಂವಿಧಾನದ ಹಕ್ಕನ್ನು ಎತ್ತಿ ಹಿಡಿಯಬೇಕು. ಶಿಕ್ಷಣದ ಗುಣಮಟ್ಟವನ್ನು ಕಾಪಾಡಬೇಕು ಎಂದರು. ಮನವಿ ಪತ್ರ ಸ್ವೀಕರಿಸಿ ಗ್ರೇಡ್‌-2 ತಹಶೀಲ್ದಾರ್‌ ನಾಗಪ್ಪ ಸಜ್ಜನ ಮಾತನಾಡಿ, ತಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ತಮ್ಮ ಮನವಿ ಪತ್ರ ಕಳುಹಿಸಲಾಗುವುದು ಎಂದರು.

ಬಸವರಾಜ ತಳವಾರ, ಹುಸೇನಸಾಬ್‌ ಗುಡಿಹಿಂದಿನ್‌, ಯಮನೂರಪ್ಪ ರಗಡದ, ಚನ್ನಪ್ಪ ಜಾಧವ, ದೇವಪ್ಪ ವನಜಭಾವಿ, ಈಶಪ್ಪ ತಳವಾರ, ಮಂಜುನಾಥ ಪಮ್ಮಾರ, ದೇವಪ್ಪ ಪೊಲೀಸಪಾಟೀಲ, ದೇವಿಂದ್ರಪ್ಪ ಕೋಲಾರ, ಆನಂದ ಕಾರಭಾರಿ, ಬಸವಂತಪ್ಪ, ಮಾಂತೇಶ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next