Advertisement
ಮನೆ ಕಟ್ಟುವಾಗಲೇ ಗೆಸ್ಟ್ ರೂಮ್‌ನ ಅವಶ್ಯಗಳನ್ನು ತಿಳಿದು ಕಟ್ಟುವುದು ಉತ್ತಮ. ಗೆಸ್ಟ್ ರೂಮ್ ಅಂದಾಕ್ಷಣ ಅದರಲ್ಲಿ ಸ್ನಾನ ಗೃಹ, ಶೌಚಾಲಯ ಒಟ್ಟಿಗೆ ನಿರ್ಮಿಸುವುದು ಅಷ್ಟೇ ಅಗತ್ಯ. ಕೋಣೆಯ ಒಳಗೊಂದು ಕೈತೊಳೆಯುವ ಸಿಂಕ್ ಇಡುವು ದರಿಂದ ಅತಿಥಿಗಳಿಗೆ ಸುಲಭವಾಗುತ್ತದೆ.
ಕೋಣೆಯನ್ನು ಸ್ವಚ್ಛವಾಗಿಡುವುದು ಅಗತ್ಯ. ಕೋಣೆಯಲ್ಲಿ ಧೂಳು ತುಂಬ ದಂತೆ ನೋಡಿಕೊಳ್ಳುವುದು. ಬೆಡ್, ಬೆಡ್‌ಶೀಟ್‌ಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳವುದು ಅಗತ್ಯ. ಕೋಣೆೆಯಲ್ಲಿ ಸುಂದರವಾದ, ಆಕರ್ಷಕವಾದ ಕಾರ್ಪೆಟ್ ಇಡುವುದು. ಕಿಟಕಿಗೆ ಸುಂದರವಾದ, ಗೋಡೆಗೊಪ್ಪುವ ಕರ್ಟನ್ ಹಾಕುವುದು ಅಷ್ಟೇ ಅವಶ್ಯವಾಗಿದೆ. ಗೋಡೆ ಅಲಂಕಾರ
ಮನೆ ಕಟ್ಟುವಾಗ ಅತಿಥಿಗಳ ಕೋಣೆಗೆ ಎಷ್ಟು ಆದ್ಯತೆ ನೀಡುತ್ತೇವೋ ಅಷ್ಟೇ ಆದ್ಯತೆ ಗೋಡೆಗೆ ಬಣ್ಣ ಆರಿಸುವಾಗ ಎಚ್ಚರ ವಹಿಸಬೇಕು. ಮನಕ್ಕೆ ಮುದ ನೀಡುವಂತಹ ಬಣ್ಣ ಆರಿಸುವುದು ಅಗತ್ಯ. ಬಣ್ಣದ ಜತೆಗೆ ಗೋಡೆಗೆ ಕಲೆ, ನಿಸರ್ಗದ ಸುಂದರ ಫೋಟೋ ಫ್ರೇಮ್‌ಗಳನ್ನು ಹಾಕುವ ಮೂಲಕ ಕೋಣೆಯನ್ನು ಇನ್ನಷ್ಟೂ ಸುಂದರಗೊಳಿಸಬಹುದು.
Related Articles
ಆಲಂಕಾರಿಕ ವಸ್ತುಗಳು ಕೋಣೆಯನ್ನು ಇನ್ನಷ್ಟು ಸುಂದರಗೊಳಿಸುತ್ತವೆ. ಮನಸ್ಸಿಗೆ ಮುದ ನೀಡುವಂತಹ ಮಿತಿಯಲ್ಲಿ ಆಲಂಕಾರಿಕ ವಸ್ತುಗಳನ್ನು ಗೆಸ್ಟ್ ರೂಮ್‌ನಲ್ಲಿ ಬಳಸಬಹುದು. ಮರದಿಂದ ತಯಾರಿಸಿದ ಆಕರ್ಷಕ ಸ್ಟಾಂಡ್‌ಗಳು, ಮೊಬೈಲ್ ಇಡುವಂತಹ ಸ್ಟಾಂಡ್‌ಗಳನ್ನು ಜೋಡಿಸಿಡಬಹುದು.
Advertisement
ಅತಿಥಿಗಳಿಗೆ ಬೇಕಾದ ಅವಶ್ಯ ವಸ್ತುಗಳ ಜತೆಗೆ ಮನಸ್ಸಿಗೆ ಮುದ ನೀಡುವ ವಾತಾವರಣ ಕೋಣೆಯಲ್ಲಿರಲಿ. ಅತಿಥಿಗಳ ಕೋಣೆ ಮಾತ್ರ ಓರಣವಾಗಿಟ್ಟರೆ ಅವರನ್ನು ಸಂತೃಪ್ತಿಗೊಳಿಸುವುದು ಸಾಧ್ಯವಿಲ್ಲ. ನಾವು ಅವರೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎನ್ನುವುದು ಮುಖ್ಯ. ಕೆಲವೊಮ್ಮೆ ಎಲ್ಲಕ್ಕಿಂತಲೂ ನಾವು ಅವರ ಬಗ್ಗೆ ತೆಗೆದುಕೊಂಡ ಕಾಳಜಿಯೇ ಅವರಿಗೆ ಪ್ರಿಯವಾಗಿ ಬಿಡಬಹುದು. ಹಾಗಾಗಿ ನಗುಮುಖದಲ್ಲಿ ಪ್ರೀತಿಯಿಂದ ಅತಿಥಿಗಳೊಂದಿಗೆ ಬೆರೆತಾಗ ಅತಿಥಿಗಳು ಖುಷಿಯಾಗುತ್ತಾರೆ.
ಅವಶ್ಯ ವಸ್ತುಗಳಿಗೆ ಆದ್ಯತೆಅತಿಥಿಗಳು ಅವರಾಗಿಯೇ ಅಗತ್ಯಗಳನ್ನು ಕೇಳುವುದಕ್ಕಿಂತ ನಾವೇ ಜೋಡಿಸಿಡುವುದು ಉತ್ತಮ. ಗೆಸ್ಟ್ ರೂಮ್‌ನಲ್ಲಿ ದಿನನಿತ್ಯದ ಬಳಕೆಗೆ ಬೇಕಾದ ಅವಶ್ಯ ವಸ್ತುಗಳನ್ನು ಸರಿಯಾಗಿ ಜೋಡಿಸಿಡುವುದು. ಜತೆಗೆ ಅತಿಥಿಗಳ ರೂಮ್‌ನಲ್ಲಿ ದಿನಪತ್ರಿಕೆ, ವಾರಪತ್ರಿಕೆ ಮತ್ತು ಪುಸ್ತಕಗಳನ್ನು ಜೋಡಿಸಿಡುವುದರಿಂದ ಅವರಿಗೆ ಸಮಯ ಕಳೆಯಲು ಸಹಾಯಕವಾಗುತ್ತದೆ. ಕೋಣೆಯಲ್ಲಿ ಸಣ್ಣ ಗ್ರಂಥಾಲಯವೂ ಇದ್ದರೆ ಸೂಕ್ತ. ರಂಜಿನಿ ಮಿತ್ತಡ್ಕ