Advertisement
ಬೆಂಗಳೂರು, ಬೆಂಗಳೂರು ಕೇಂದ್ರ, ಬೆಂಗ ಳೂರು ಉತ್ತರ, ಮಂಗಳೂರು, ಮೈಸೂರು, ಕುವೆಂಪು, ಧಾರ ವಾಡ, ತುಮಕೂರು, ದಾವಣಗೆರೆ ವಿಶ್ವವಿದ್ಯಾನಿಲಯ ಹೀಗೆ ರಾಜ್ಯದ ವಿವಿಗಳಲ್ಲಿ ಸರಿಸುಮಾರು ಶೇ.50ರಷ್ಟು ಪ್ರಾಧ್ಯಾಪಕರ ಹುದ್ದೆ ಖಾಲಿ ಇದೆ. ಹೀಗಾಗಿ ಎಲ್ಲ ವಿಭಾಗಗಳಲ್ಲಿಯೂ ಅತಿಥಿ ಉಪನ್ಯಾಸಕರ ಸೇವೆ ಅನಿ ವಾರ್ಯವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Related Articles
ಬೋಧಕ ಸಿಬಂದಿ ಮಾತ್ರವಲ್ಲ, ಬೋಧಕೇತರ ಸಿಬಂದಿ ಹುದ್ದೆಯೂ ಖಾಲಿಯಿದೆ. ಬೋಧಕ ಸಿಬಂದಿ ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಹುದ್ದೆಗಳು ಖಾಲಿಯಾಗಿವೆ.
Advertisement
ನೇಮಕಕ್ಕೆ ಸರಕಾರದ ಚಿಂತನೆವಿಶ್ವವಿದ್ಯಾನಿಲಯಗಳ ವಿವಿಧ ವಿಭಾಗದಲ್ಲಿ ಪ್ರಾಧ್ಯಾಪಕರ ಹುದ್ದೆ ಖಾಲಿ ಇರುವುದು ರಾಜ್ಯ ಸರಕಾರದ ಗಮನದಲ್ಲೂ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ ನೇರ ನೇಮಕಾತಿ ನಡೆಸಲು ಸರಕಾರ ಈಗಾ ಗಲೇ ಚಿಂತನೆ ನಡೆಸುತ್ತಿದೆ. ಅಲ್ಲದೆ ಸಂದ ರ್ಶನ ಇಲ್ಲದೆ, ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಗುಣಮಟ್ಟದ ಹೊಡೆತ
ವಿವಿಗಳಲ್ಲಿ ಪ್ರಾಧ್ಯಾಪಕರಿಲ್ಲದೇ ಇರುವುದರಿಂದ ಸ್ನಾತಕೋತ್ತರ
ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವೊಂದು ವಿಶ್ವವಿದ್ಯಾನಿಲಯ ಗಳಲ್ಲಿ ವಿಭಾಗದ ಮುಖ್ಯಸ್ಥರ ಹುದ್ದೆ ಕೂಡ ಖಾಲಿಯಿದೆ. ಬೇರೆ ವಿಭಾಗದ ಹಿರಿಯ ಪ್ರಾಧ್ಯಾಪಕರು ಪ್ರಭಾರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವ್ಯವಸ್ಥೆಯೂ ನಮ್ಮ ವಿಶ್ವವಿದ್ಯಾ ನಿಲಯಗಳಲ್ಲಿವೆ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾಧ್ಯಾಪಕರ ಹುದ್ದೆ ಭರ್ತಿಮಾಡಿಕೊಳ್ಳುವಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಈಗಾಗಲೇ ಹತ್ತಾರು ಬಾರಿ ಪ್ರತಿಭಟನೆಯನ್ನು ನಡೆಸಿವೆ. ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಗೆ ವಿರೋಧ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರಾಧ್ಯಾಪಕರ ಭರ್ತಿಗೆ ಸರಕಾರ ಚಿಂತನೆ ನಡೆಸು ತ್ತಿದೆ. ಆದರೆ ಇದನ್ನು ಕೆಲವು ವಿವಿಗಳ ಕುಲಪತಿ
ಗಳು ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ. ವಿಶ್ವ ವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ) ನಿಯಮ ಮತ್ತು ಮಾನದಂಡಗಳಿಗೆ ಅನುಗುಣ ವಾಗಿ ಪ್ರಾಧ್ಯಾಪಕರ ನೇಮಕಾತಿ ನಡೆಯಬೇಕು ಎಂದು ಹೇಳುತ್ತಿದ್ದಾರೆ. ಜತೆಗೆ ಖಾಯಂ ಪ್ರಾಧ್ಯಾಪ ಕರು ಇಲ್ಲದೆ, ಅತಿಥಿ ಉಪನ್ಯಾಸಕ ರಿಂದಲೇ ವಿವಿಯ ಎಲ್ಲ ವಿಭಾಗವನ್ನು ನಡೆಸು ವುದು ಕಷ್ಟಸಾಧ್ಯವಾಗುತ್ತದೆ ಎನ್ನುತ್ತಿದ್ದಾರೆ. ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಕುಲಸಚಿವರು ಈಗಾಗಲೇ ಸರ ಕಾರದ ಸಭೆಯಲ್ಲಿ ಭಾಗವಹಿಸಿದ್ದಾರೆ. ಫೆಬ್ರವರಿ, ಮಾರ್ಚ್‌ಗೆ ಭರ್ತಿಯಾಗುವ ಸಾಧ್ಯತೆಯಿದೆ.
-ಪ್ರೊ|ಪಿ.ಎಸ್.ಎಡಪಡಿತ್ತಾಯ ಮಂಗಳೂರು ವಿವಿ ಕುಲಪತಿ ಬೋಧಕ ಹುದ್ದೆಗಳನ್ನು ಪೂರ್ತಿಯಾಗಿ ಭರ್ತಿ ಮಾಡಿದರೆ ದೊಡ್ಡ ಕ್ರಾಂತಿಯೇ ಆಗಲಿದೆ. ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಬೋಧಕ ಹುದ್ದೆ ಖಾಲಿಯಾಗಿಯೇ ಉಳಿದುಕೊಂಡಿದೆ.
– ಪ್ರೊ.ಕೆ.ಆರ್.ವೇಣುಗೋಪಾಲ್ ಬೆಂಗಳೂರು ವಿವಿ ಕುಲಪತಿ – ರಾಜು ಖಾರ್ವಿ ಕೊಡೇರಿ