Advertisement

ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಒತ್ತು ನೀಡುವೆ

03:33 PM Jan 08, 2022 | Team Udayavani |

ತುಮಕೂರು: ಕನಿಷ್ಠ ವೇತನ ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ, ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಈ ಸಂಬಂಧ ಮುಖ್ಯ ಮಂತ್ರಿಗೆ ಮತ್ತು ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಒತ್ತು ನೀಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ. ಗೌಡ ಉಪನ್ಯಾಸಕರಿಗೆ ಭರವಸೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಿರತ ಅತಿಥಿ ಉಪನ್ಯಾಸಕರನ್ನು ಭೇಟಿಯಾಗಿ ಅವರಿಂದ ಅಹವಾಲು ಸ್ವೀಕರಿಸಿ ಮಾತನಾಡಿದಅವರು, ಅತಿಥಿ ಉಪನ್ಯಾಸಕರು ಭಿಕ್ಷೆ ಕೇಳುತ್ತಿಲ್ಲ. ಬದಲಾಗಿ ತಮ್ಮ ದುಡಿಮೆಗೆ ತಕ್ಕ ಪ್ರತಿಫ‌ಲ ಕೇಳುತ್ತಿದ್ದಾರೆ. ಈಗಾಗಲೇ ಓರಿಸ್ಸಾ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಿ, ಅವರ ವೇತನಹೆಚ್ಚಳ ಮಾಡಿವೆ. ಹಾಗೆಯೇ ರಾಜ್ಯ ಸರ್ಕಾರವೂ ಅತಿಥಿ ಉಪನ್ಯಾಸಕರ ನೆರವಿಗೆ ಬರಬೇಕೆಂಬುದು ನನ್ನ ಮನವಿಯಾಗಿದೆ ಎಂದರು.

ಕಳೆದ ಹತ್ತಾರು ವರ್ಷಗಳಿಂದ ಅತಿಥಿಉಪನ್ಯಾಸಕರು, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ 14,300ಕ್ಕೂ ಹೆಚ್ಚುಉಪನ್ಯಾಸಕರು ಪಾಠ ಪ್ರವಚನಗಳನ್ನುಯಾವುದೇ ನಿರ್ವಂಚನೆಯಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ, ಉನ್ನತ ಶಿಕ್ಷಣ ಇಲಾಖೆ ಸುಸೂತ್ರವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಅವರಿಲ್ಲದೆ ಪದವಿ ಕಾಲೇಜುಗಳು ಗುಣಮಟ್ಟಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪ್ರತಿಭಟನೆ ಕೈಬಿಡಿ: ಸರ್ಕಾರ ಕೋವಿಡ್‌ ಹಿನ್ನೆಲೆ, ಹಲವಾರು ಹೊಸ ನಿಯಮ ಜಾರಿಗೆ ತಂದಿದೆ. ಅದರ ಭಾಗವಾಗಿ ಪ್ರತಿಭಟನೆ, ಧರಣಿಯನ್ನು ನಿಷೇಧಿಸುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದರೆ ತಾವು ಹೋರಾಟವನ್ನು ಕೈಬಿಡಬೇಕಾಗುತ್ತದೆ. ನಿಮ್ಮ ಹಾಗೂ ಸರ್ಕಾರದಹಿತದೃಷ್ಟಿಯಿಂದ ತಾವೆಲ್ಲರೂ ಪ್ರತಿಭಟನೆ ಕೈಬಿಡಿ. ನಿಮ್ಮ ಪರವಾಗಿ ಸರ್ಕಾರದ ಬಳಿ ಮಾತನಾಡುತ್ತೇನೆ. ಪೊಲೀಸರು ಸರ್ಕಾರದ ಕೋವಿಡ್‌ ನಿಯಮ ಪಾಲಿಸುವಾಗ ಅತ್ಯಂತ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಘುವಾಗಿ ಪರಿಗಣಿಸಬೇಡಿ: ಜಿಪಂ ಮಾಜಿ ಸದಸ್ಯ ವೈ. ಎಚ್‌. ಹುಚ್ಚಯ್ಯ ಮಾತನಾಡಿ, ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆ ಶೀಘ್ರವಾಗಿ ಈಡೇರಿಸಬೇಕು. ಸೇವಾ ಭದ್ರತೆ ಮತ್ತು ಕನಿಷ್ಠ ವೇತನಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸಬಾರದು ಎಂದರು. ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ವಿ.

Advertisement

ಕೃಷ್ಣಮೂರ್ತಿ, ಅತಿಥಿ ಉಪನ್ಯಾಸಕ ಡಾ. ಕುಮಾರ್‌, ಡಾ.ಶಿವಣ್ಣ ತಿಮ್ಮಲಾಪುರ, ನಾಗಣ್ಣ ಜಿ.ಕೆ., ಡಾ. ಮಲ್ಲಿಕಾರ್ಜುನ, ಡಾ.ಶಿವಯ್ಯ,ಡಾ.ಗುಡ್ಡಣ್ಣ, ಗಂಗಾಂಭಿಕೆ, ಅಂಬಿಕಾ, ಹೇಮಾವತಿ, ಅಂಜನಮೂರ್ತಿ, ಸುನಿಲ್‌ಕುಮಾರ್‌,ಮಹದೇವ್‌, ಚೇತನ ಡಿ.ರಾಜ್‌, ಎಂ. ಶ್ರೀನಿವಾಸ್‌, ಹರೀಶ್‌ಕುಮಾರ್‌, ರಮಾ, ರಾಜೇಶ್ವರಿ, ನಾಗೇಂದ್ರ, ಮಂಜುನಾಥ್‌, ಶನಿವಾರಪ್ಪ, ರವೀಂದ್ರ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next