ಸಂತ ಶಿಶುನಾಳ ಶರೀಫರ “ಗುಡುಗುಡಿಯಾ ಸೇದಿ ನೋಡೋ…’ ಎಂಬ ಪ್ರಸಿದ್ಧ ಗೀತೆಯನ್ನು ಅನೇಕರುಕೇಳಿರುತ್ತೀರಿ.ಕೆಲ ವರ್ಷಗಳ ಹಿಂದೆ ಇದೇ ಹಾಡಿಗೆ ಗಾಯಕ ರಘು ದೀಕ್ಷಿತ್ ಹೊಸದಾಗಿ ರಾಗ ಸಂಯೋಜಿಸಿ ಯುವ ಜನರಿಕೆ ಇನ್ನಷ್ಟು ಹತ್ತಿರವಾಗಿಸಿದ್ದರು. ಈಗ ಇದೇ “ಗುಡುಗುಡಿಯಾ ಸೇದಿ ನೋಡೋ…’ ಎನ್ನುವ ಹೆಸರಿನಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್‌ಕೆಲಸಗಳನ್ನು ಪೂರ್ಣಗೊಳಿಸಿರುವ “ಗುಡುಗುಡಿಯಾ ಸೇದಿ ನೋಡೋ…’ ಚಿತ್ರತಂಡ, ಇತ್ತೀಚೆಗೆ ತನ್ನ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
“ವಾಟರ್ ಏಂಜಲ್ಸ್ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆಕೃಷ್ಣಕಾಂತ್ ಎನ್. ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಯುವ ನಿರ್ದೇಶಕ ಜಂಟಿ ಹೂಗಾರ್ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಟೀಸರ್ ಬಿಡುಗಡೆಯ ಬಳಿಕ ಮಾತನಾಡಿದ ನಿರ್ದೇಶಕ ಜಂಟಿ ಹೂಗಾರ್, “ಸಿನಿಮಾದ ಟೈಟಲ್ ನಲ್ಲಿ ಒಂದು ಗಟ್ಟಿತನ ಬೇಕಿತ್ತು.ಕಥೆಯ ಶೈಲಿಯೂ ಡಿಫರೆಂಟ್ ಆಗಿದ್ದರಿಂದ, ಅದಕ್ಕೆ ಒಪ್ಪುವ ಟೈಟಲ್ ಹುಡುಕಾಟದಲ್ಲಿದ್ದಾಗ, ಈ ಟೈಟಲ್ ತುಂಬ ಹತ್ತಿರ ಎನಿಸಿತು.
ಹಾಗಾಗಿ ಅದನ್ನೇ ನಮ್ಮ ಸಿನಿಮಾಕ್ಕೆ ಟೈಟಲ್ ಆಗಿ ಇಟ್ಟುಕೊಂಡೆವು. ಸುಮಾರು 3 ವರ್ಷದ ಹಿಂದೆಯೇ ಈ ಟೈಟಲ್ ರಿಜಿಸ್ಟರ್ ಮಾಡಿಸಿ, ಸಿನಿಮಾ ಮಾಡಿದ್ದೇವೆ. ಪ್ರಸ್ತುತ ನಡೆಯುತ್ತಿರುವ ಸನ್ನಿವೇಶಕ್ಕೂ ಈ ಟೈಟಲ್‌ಗೂ ಯಾವುದೇ ಸಂಬಂಧ ಇಲ್ಲ’ ಎಂದು ಟೈಟಲ್ ಬಗ್ಗೆ ವಿವರಣೆ ನೀಡಿದರು. “ಮಿಸ್ಟರಿ -ಥ್ರಿಲ್ಲರ್ ಶೈಲಿಯ ಸಿನಿಮಾ. ಜರ್ನಿಯ ನಡುವೆ ಕಥೆಯೊಂದು ತೆರೆದುಕೊಳ್ಳುತ್ತದೆ. ಹಳೆಗನ್ನಡದ ಬುಡಕಟ್ಟು ಸಮುದಾಯ, 600 – 700 ವರ್ಷಗಳ ಹಿಂದಿನಕಾಣದನಾಗರಿಕತೆ ಮತ್ತುಕನ್ನಡದಕಂಪು ಈ ಚಿತ್ರದಲ್ಲಿಕಾಣಿಸಲಿದೆ. ಸಿನಿಮಾದೊಳಗೆ 15 ವಿಭಿನ್ನ ಪಾತ್ರಗಳಿವೆ. ಚಿತ್ರದಲ್ಲಿ ಹಳೆಗನ್ನಡದಬಳಕೆಇರುವುದರಿಂದ,ಕನ್ನಡದ ಸಬ್‌ಟೈಟಲ್‌ಬಳಕೆಮಾಡಲಾ ಗಿದೆ’ ಎಂದರು ನಿರ್ದೇಶ ಕಜಂಟಿಹೂಗಾರ್.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಕೃಷ್ಣಕಾಂತ್ ಎನ್. “ನಾನು ಹೊಟೇಲ್ ಉದ್ಯಮದವನು. ಅಡುಗೆ ಹದವಾದರೆ ಮಾತ್ರ ರುಚಿಸುತ್ತದೆ. ನಿರ್ದೇಶಕರು ಅಂಥದ್ದೇ ಹದವಾದ, ಜನಪದ ಸೊಗಡಿನಕಥೆ ತಂದಿದ್ದರು. ಆ ಕಥೆಯನ್ನು ಮತ್ತಷ್ಟು ಮೊನಚಾಗಿಸಿ ಸುಮಾರು 2 ವರ್ಷದ ಹಿಂದೆಯೇ ಸಿನಿಮಾ ಶುರು ಮಾಡಿ. ಈಗ ಬಿಡುಗಡೆಗೆ ತಂದಿದ್ದೇವೆ. ಸಿನಿಮಾ ಮಾಡಬೇಕೆಂಬ ಬಹು ವರ್ಷದಕನಸು ಈಗ ನನಸಾಗಿದೆ’ ಎಂದರು.
ನಿರಂಜನ್, ಸುಜಿತ್, ರಶ್ಮಿತಾ ಗೌಡ, ಐಶ್ವರ್ಯಾ ದಿನೇಶ್, ಮಹಂತೇಶ್ ಮೊದಲಾದವರು “ಗುಡುಗುಡಿಯಾ ಸೇದಿ ನೋಡೋ…’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ದೀಪಿಕ್ ಯರಗೇರಾ ಸಂಕಲನ, ಉದಿತ್ ಹರಿದಾಸ್ ಸಂಗೀತ, ವರದರಾಜ್ ಕಾಮತ್‌ಕಲಾ ನಿರ್ದೇಶನವಿದೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಚಿತ್ರದಕಲಾವಿದರು, ತಂತ್ರಜ್ಞರು ಚಿತ್ರದ ಬಗ್ಗೆತಮ್ಮ ಅನುಭವಗಳನ್ನು ಹಂಚಿಕೊಂಡರು. ನಟ, ನಿರ್ಮಾಪಕ ನವರಸನ್ ಸೇರಿದಂತೆ ಚಿತ್ರರಂಗದ ಹಲವರು ಅತಿಥಿಗಳಾಗಿ ಆಗಮಿಸಿ, “ಗುಡುಗುಡಿಯಾ ಸೇದಿ ನೋಡೋ…’ ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಸದ್ಯ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಇದೇ ಡಿಸೆಂಬರ್ ವೇಳೆಗೆ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.