ಗುಡಿಬಂಡೆ: ತಡ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದ ರಾಜ ಕಾಲುವೆ ತುಂಬಿ ಹರಿಯುತ್ತಿದ್ದು, ಹರಿಯುತ್ತಿರುವ ನೀರಿನಲ್ಲಿ ಪ್ಲಾಸ್ಟಿಕ್ ಬಾಟಲ್, ಪೇಪರ್, ಕಸ ಕಾಲುವೆಯ ಮಧ್ಯೆ ಹಾದು ಹೋಗಿದ್ದ ಪೈಪ್ ಲೈನ್‌ಗೆ ಸಿಲುಕಿಕೊಂಡಿರುವುದನ್ನು ಪೌರಕಾರ್ಮಿಕನೊಬ್ಬ ಜಟಿ ಜಟಿ ಮಳೆಯಲ್ಲೂ ಪ್ರಾಣವನ್ನು ಪಣಕ್ಕಿಟ್ಟು ಸ್ವಚ್ಚ ಮಾಡಲು ಹೋದ ಘಟಕ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.
ಶುಕ್ರವಾರ ಬೆಳಗಿನ ಜಾವ ಬಿದ್ದ ಭಾರಿ ಮಳೆಯಿಂದಾಗಿ ತಾಲೂಕಿನ ಎಲ್ಲಾ ಕೆರೆ, ಕುಂಟೆ, ಕಾಲುವೆಗಳು ತುಂಬಿ ಹರಿಯುತ್ತಿದ್ದು, ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ಪ್ಲಾಸ್ಟಿಕ್, ಮಧ್ಯ ಬಾಟಲ್‌ಗಳು, ಕವರ್‌ಗಳು, ಕಸಗಳಿಂದ ತುಂಬಿ ಹೋಗಿದ್ದು, ರಾತ್ರಿ ಬಿದ್ದ ಬಿದ್ದ ಮಳೆಯಿಂದ ಅವುಗಳು ಸಹ ಕಾಲುವೆಯ ಪಕ್ಕದ್ದಲ್ಲಿದ್ದ ನೀರಿನಲ್ಲಿ ಮನೆಗಳಿಗೆ ನುಗ್ಗಿದ್ದರೆ ಒಂದು ಅವಾಂತರ ಸೃಷ್ಟಿ ಮಾಡಿದ್ದರೆ, ಇತ್ತ ಕಾಲುವೆಯ ಮಧ್ಯದಲ್ಲಿ ಹಾದು ಹೋಗಿರುವ ನೀರಿನ ಹಾಗೂ ಇತರೆ ಪೈಪ್‌ಗಳಿಗೆ ಅವುಗಳು ಸಿಲುಕಿಕೊಂಡಿದ್ದು, ಅವುಗಳನ್ನು ತೆರಗೊಳಿಸಲು ಅಲ್ಲಿಯೇ ಇದ್ದ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕನೊಬ್ಬ ತನ್ನ ಪ್ರಾಣವನ್ನು ಪಣಕ್ಕಿಟ್ಟು ಕಾಲುವೆ ಇಳಿದು ಪೈಪ್‌ಗಳ ಮೇಲೆ ಕುಳಿತು, ನಿಧಾನವಾಗಿ ಚಲಿಸುತ್ತಾ ಪೈಪ್‌ಲೈನ್‌ಗಳಿಗೆ ಸಿಲುಕೊಂಡಿರುವ ತ್ಯಾಜವನ್ನು ತೆರವುಗೊಳಿಸಿತ್ತಿದ್ದ ದೃಷ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು, ಸ್ಥಳದಲ್ಲಿ ಮಾತ್ರ ಯಾವೊಬ್ಬ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಲ್ಲಿ ಇಲ್ಲದೆ ಇದ್ದದ್ದು ಮಾತ್ರ ದುರಂತವೇ ಸರಿ.
ಸ್ಥಳಕ್ಕೆ ಭಾರದ ಅಧಿಕಾರಿಗಳು: ಪಟ್ಟಣದ ಮಧ್ಯ ಭಾಗದಲ್ಲಿ ಹರಿಯುತ್ತಿರುವ ರಾಜ ಕಾಲುವೆ ನೀರು ಪಕ್ಕದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದ್ದು, ಆದರೆ ಪಟ್ಟಣ ಪಂಚಾಯಿತಿ ಅಧಿಕಾರಿ ರಾಜಶೇಖರ್ ಮಾತ್ರ ಸಾರ್ವಜನಿಕರಿಗೆ ದೊರಕದೆ, ಪಟ್ಟಣದಲ್ಲೂ ಮೊಕ್ಕಾಂ ಹೂಡದೆ ಸ್ಥಳಕ್ಕೆ ಭಾರದೆ ಇರುವುದು ಸಾರ್ವಜನಿಕರ ಕೆಂಗಣಿಗ್ಗೆ ಗುರಿಯಾಗಿದ್ದಾರೆ.
ರಾಜ ಕಾಲುವೆ ಸ್ವಚ್ಚ ಗೊಳಿಸದ ಅಧಿಕಾರಿಗಳು: ಪಟ್ಟಣದ ಮಧ್ಯ ಭಾಗದಲ್ಲಿರುವ ರಾಜ ಕಾಲುವೆ ಕಸ ಕಡ್ಡಿಯಿಂದ ಹೂಳು ತುಂಬಿ, ನೀರು ಹರಿಯಲು ತೊಂದರೆಯಾಗಿದ್ದು, ಇದನ್ನು ಸ್ವಚ್ಚಗೊಳಿಸುವಂತೆ ಅಧಿಕಾರಿಗಳಿಗೆ ಸಾರ್ವಜನಿಕರು ಅವಲತ್ತುಕೊಂಡರು, ಅಧಿಕಾರಿಗಳು ಮಾತ್ರ ಸ್ವಚ್ಚಗೊಳಿಸದೆ ಇದ್ದರಿಂದ, ನೀರು ಸಹಿತ ತ್ಯಾಜ ಮನೆಗೆ ನುಗ್ಗುತ್ತಿದೆ.
ಇದನ್ನೂ ಓದಿ : ಕಾರ್ನಾಡು ಕೈಗಾರಿಕಾ ವಲಯ: ಹತ್ತು ವರ್ಷವಾದರೂ ದುರಸ್ತಿಯಾಗದ ಟ್ಯಾಂಕ್