ಮುನಿಯಮ್ಮ ರೈಲಿನ ಮೂಲಕ ದೆಹಲಿಗೆ ತೆರಳಿ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸದಾ ಬ್ಯುಸಿ ಇರ್ತಾರೆ ಎಂದು ದೆಹಲಿಗೆ
ಬಂದಿರುವುದಾಗಿ ಹೇಳಿಕೊಂಡ ಮುನಿಯಮ್ಮ, ತಮಗೆ ಮಂಜೂರಾಗಿರುವ ನಿವೇಶನ ವಿವಾದದಲ್ಲಿರುವುದರಿಂದ ಬದಲಿ ನಿವೇಶನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮುನಿಯಮ್ಮನ ಮನವಿ ಪಡೆದ ಸಿಎಂ ಸಿದ್ದರಾಮಯ್ಯ ಭಾವುಕರಾಗಿ, ದೆಹಲಿಗೆ ಯಾರು ಕಳುಹಿಸಿಕೊಟ್ಟಿದ್ದಾರೆ, ಇಲ್ಲಿಗೆ ಬರುವ ಬದಲು ಬೆಂಗಳೂರಿನಲ್ಲಿಯೇ ನನ್ನ ನಿವಾಸಕ್ಕೆ ಬರಬಹುದಿತ್ತಲ್ಲ ಎಂದು ಪ್ರಶ್ನಿಸಿದರು. ದೆಹಲಿಗೆ ಹೋದ್ರೆ ಸಿಗ್ತಾರೆ ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ ಎಂದು ಮುನಿಯಮ್ಮ ಹೇಳಿದರು. ಮುಖ್ಯಮಂತ್ರಿಯವರು ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಕಾನಡೆಗೆ ದೂರವಾಣಿ ಮೂಲಕ ಮಾತನಾಡಿ, ಮುನಿಯಮ್ಮಳ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.
Advertisement
ನಂತರ ದೆಹಲಿಯ ಕರ್ನಾಟಕ ಭವನದಲ್ಲಿಯೇ ಮುನಿಯಮ್ಮಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ದೆಹಲಿಯಿಂದ ಬೆಂಗಳೂರಿಗೆ ವಾಪಸ್ ತೆರಳಲು ಹಣ ನೀಡಿ ಕಳುಹಿಸಿದ್ದಾರೆ.
ಈ ಹಿಂದೆಯೂ ಗುಡಿಬಂಡೆ ಮುನಿಯಮ್ಮ ತನ್ನ ಸಂಕಷ್ಟ ಹೇಳಿಕೊಳ್ಳಲು ದೆಹಲಿಗೆ ತೆರಳಿ ಸಂಸದ ಎಂ.ವೀರಪ್ಪ ಮೊಯ್ಲಿ
ಅವರನ್ನು ನಿವಾಸದಲ್ಲಿ ಭೇಟಿ ಮಾಡಿದ್ದಳು ಎನ್ನಲಾಗಿದೆ. ಆದರೆ ಮೊಯ್ಲಿ ಅವರಿಂದ ಸಮಸ್ಯೆಗೆ ಪರಿಹಾರ ಸಿಗದ ಕಾರಣ ಸಿಎಂ ಬಳಿಗೆ ತೆರಳಲು ನಿರ್ಧರಿಸಿದ ಮುನಿಯಮ್ಮ ಸೋಮವಾರ ಕಡೆಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತನ್ನ ಸಂಕಷ್ಟ ತಿಳಿಸಿದ್ದು, ಜಿÇÉಾಡಳಿತ ಇನ್ನು ಮುಂದಾದರೂ ಸಮಸ್ಯೆಗೆ ಪರಿಹಾರ ಸೂಚಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಮುನಿಯಮ್ಮಗೆ ಸೌಕರ್ಯ: ದೆಹಲಿಗೆ ಬಂದಿದ್ದ ಮುನಿಯಮ್ಮಗೆ ಸಿಎಂ ಸಿದ್ದರಾಮಯ್ಯ ಉಪಾಹಾರ ವ್ಯವಸ್ಥೆ ಜೊತೆಗೆ ಮರಳಿ ರಾಜ್ಯಕ್ಕೆ ತೆರಳಲು ಎÇÉಾ ರೀತಿಯ ವ್ಯವಸ್ಥೆ ಮಾಡುವಂತೆ ಕರ್ನಾಟಕ ಭವನದ ಅಧಿಕಾರಿಗಳಿಗೆ ಸೂಚಿಸಿ¨ªಾರೆ. ಸಮಸ್ಯೆಗೆ ಸಿಎಂ ಸ್ವಂದನೆಗೆ ನೋಡಿ ಹರ್ಷಗೊಂಡ ಮುನಿಯಮ್ಮ ದೆಹಲಿಯಿಂದ ಕರ್ನಾಟಕದತ್ತ ರೈಲಿನ ಮೂಲಕ ಪ್ರಯಾಣ ಬೆಳೆಸಿ¨ªಾರೆ.