Advertisement
ಹೋಟೆಲ್ ಗೆ ಕಳೆದ ರಾತ್ರಿ ಹನ್ನೆರಡು ಮೂವತ್ತರ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ದಿನಸಿ ಪದಾರ್ಥಗಳು, ಫರ್ನಿಚರ್ಸ್ ಗಳು , ಎರಡು ಫ್ರಿಡ್ಜ್ ,ಒಂದು ಡಿಯೋ ಬೈಕ್ ನಗದು ಹಣ ನಾಲ್ಕು ಸಾವಿರ ರೂಗಳು ಸೇರಿದಂತೆ ಸುಮಾರು 6 ರಿಂದ 7 ಲಕ್ಷದವರೆಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಬೆಸ್ಕಾಂ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿ ಒಂದು ಗಂಟೆಯಾದರೂ ಯಾವುದೇ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮಲೆಕ್ಕಿಗ ಮಾದೇವಿ ಭೇಟಿ
ಘಟನೆಯ ಬಗ್ಗೆ ಮಾಹಿತಿ ತಿಳಿದ ಗ್ರಾಮಲೆಕ್ಕಿಗ ಮಾದೇವಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮೇಲಾಧಿಕಾರಿ ಗಳಿಗೆ ವರದಿ ನೀಡುತ್ತೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಮೋಹನ್ ಕುಮಾರ್ ಹೋಟೆಲ್ ಮಾಲಿಕರ ಸಂಘದ ಸದಸ್ಯರಾದ ಈರಣ್ಣ ಸೇರಿದಂತೆ ಇನ್ನಿತರರು ಇದ್ದರು.