Advertisement

ಗಾರ್ಡ್‌ ಯುವರ್‌ ಗಾರ್ಡನ್‌

05:26 AM May 12, 2020 | mahesh |

ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಹೊರಗೆ ಹೋಗೋಕೆ ಆಗೋಲ್ಲ ಅನ್ನೋದೇನೋ ಸತ್ಯ. ಆದರೆ, ಮನೆಯಲ್ಲೇ ಕೂತಿದ್ದೂ ಒಂದಷ್ಟು ಕೆಲಸಗಳನ್ನು ಮಾಡಬಹುದು. ಏನದು ಅಂದ್ರಾ? ಕುಂಡ ಕೃಷಿ. ಹೌದು, ನಿಮ್ಮ ಮನೆಯ ಮೇಲೆ ಟೆರೇಸ್‌ ಇದ್ದರೆ, ಅಲ್ಲಿ ಸಣ್ಣ ಪುಟ್ಟ ಗಿಡಗಳನ್ನು ಹಾಕಿರ್ತೀರಿ ಅಲ್ವೇ? ಇದರ ಜೊತೆಗೆ, ಮನೆಗೆ ಬೇಕಾದ ತರಕಾರಿಗಳನ್ನೂ ಬೆಳೆಯಬಹುದು. 15-20 ದಿನಗಳಲ್ಲಿ ಬೆಳೆಯಬಹುದಾದ ಅನೇಕ ತರಕಾರಿ, ಸೊಪ್ಪುಗಳಿವೆ. ಟೆರೇಸ್‌ ಗಾರ್ಡನ್‌ ಮಾಡುವುದಾದರೆ, ರಾಸಾಯನಿಕ ರಹಿತ ಕೃಷಿ ಪದಟಛಿತಿ ಅನುಸರಿಸುವ ನಿರ್ಧಾರ ಮಾಡಿ.

Advertisement

ಒಂದು ಟೈಂ ಟೇಬಲ್‌ ಮಾಡಿಕೊಳ್ಳಿ. ದಿನವೂ ಸ್ವಲ್ಪ ಸಮಯವನ್ನು ಟೆರೇಸ್‌ ಗಾರ್ಡನ್‌ನಲ್ಲಿ ಕಳೆಯಲು ನಿರ್ಧರಿಸಿ. ಹೀಗೆ ಮಾಡಿದರೆ, ಶುದಟಛಿ ಗಾಳಿ ಸೇವನೆಗೆ ಅವಕಾಶ ಸಿಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಜೊತೆಗೆ ಕರೆದೊಯ್ಯಲು ಮರೆಯಬೇಡಿ. ಹೀಗೆ ಮಾಡಿದರೆ, ಮಕ್ಕಳಿಗೂ ಕೃಷಿಯ ಬಗ್ಗೆ ಅಭಿರುಚಿ ಮೂಡಿಸಿದಂತಾಗುತ್ತದೆ. ಕುಟುಂಬ ಸಮೇತರಾಗಿ ಹೋದರಂತೂ, ಅದರ ಸಂಭ್ರಮವೇ ಬೇರೆ. ಮುತುವರ್ಜಿ ವಹಿಸಿ ಟೆರೇಸ್‌ ಕೃಷಿ ಮಾಡಿದರೆ, ಮೆಂತ್ಯ ಕೊತ್ತಂಬರಿ ಸೊಪ್ಪು, 15-20 ದಿನಕ್ಕೆ ಕೈಗೆ ಬರುತ್ತವೆ. ಸಸಿ ರೆಡಿ ಇದ್ದರೆ, ಟೊಮೇಟೊ, ಬದನೆಕಾಯಿ ಗಿಡಗಳನ್ನೂ ನೆಡಬಹುದು. ನರ್ಸರಿಗಳಲ್ಲಿ ಸಿದ್ಧವಿರುವ ಕಾಕಡ, ಸೇವಂತಿ ಇತರೆ ಹೂವಿನ ಗಿಡಗಳು ಸಿಗುತ್ತವೆ.

ಅವನ್ನು ತಂದು ಬೆಳೆಸಿದರೆ, ದೇವರ ಪೂಜೆಗೆ ನಾವೇ ಬೆಳೆದ ಹೂವು ದೊರೆತಂತಾಗುತ್ತದೆ. ಮಾವು, ಸೀತಾಫ‌ಲ ಕೃಷಿಯನ್ನೂ ಟೆರೇಸ್‌ನಲ್ಲಿ ಮಾಡಬಹುದು. ಮಾವಿನ ಹಣ್ಣು ಸಿಗಲು ವರ್ಷವಾಗಬಹುದು. ಆದರೆ, ಈಗ ಗಿಡ ನೆಟ್ಟರೆ, ಅದು ಕಣ್ಣೆದುರೇ ಬೆಳೆದು ನಿಲ್ಲುವುದನ್ನು ನೋಡುವ ಅದೃಷ್ಟ ನಮ್ಮದಾಗುತ್ತದೆ. ಅಯ್ಯೋ, ನಮ್ಮದು ಬಾಡಿಗೆ ಮನೆ. ಅಲ್ಲಿ ಹೇಗೆ ಟೆರೇಸ್‌ ಗಾರ್ಡನ್‌ ಮಾಡುವುದು ಅನ್ನಬೇಡಿ. ಬಾಡಿಗೆ ಮನೆಯಾದರೂ, ಅಲ್ಲಿಯೂ ಟೆರೇಸ್‌ ಇರುತ್ತದೆ. ಅದರಲ್ಲಿ ಸ್ವಲ್ಪ ಭಾಗವನ್ನಾದರೂ ಕೃಷಿಕಾರ್ಯಕ್ಕೆ ಬಳಸಿ. ನೀವಿರುವ ಕೈಸಾಲೆ, ಮನೆಯ ಮುಂದೆ, ವರಾಂಡದಲ್ಲಿ ಕೂಡ ಇದನ್ನು ಟ್ರೈ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next